ಮಂಜುಳಾ ಕವನ : ’ಕಾಲ’ ಕೂಡಿ ಬಂದಾಗ!

Manjula Babaladi
ಮನಸಿನ, ಕನಸಿನ ಹಸಿ-ಬಿಸಿ ಮಣ್ಣು
ಆಳದಿ ಹುದುಗಿದ
ಭಾವ ಬೀಜಗಳು
ಕೊಡುವವರ್ಯಾರೋ ಬೆಳಕು, ನೀರು
ಉಸಿರಾಗುವ ತವಕ,
ಹಸಿರಾಗುವ ತನಕ,
ಬಸಿರಿನ ಪುಳಕವ ಹೊತ್ತು ಕಾಯುವರ್ಯಾರು?!

ಕತ್ತಲ ಮಡುವಲೇ ಮನೆಯನು ಮಾಡಿ
ಗಾಳಿಗೆ, ಬೆಳಕಿಗೆ ತಡ-ತಡಕಾಡಿ
ಆಂತರ್ಯದ ತುಮುಲದ
ಅರ್ಥ ಜಾಲಾಡಿ
ಕುಡಿಯೊಡೆಯಲು ಮತ್ತೆ-ಮತ್ತೆ ಹೆಣಗಾಡಿ...
ಇವುಗಳ ಇಲ್ಲಿಗೆ ತಂದವರ್ಯಾರು..?!
ಸೋತವರ್ಯಾರು? ಗೆದ್ದವರ್ಯಾರು?!

ದಿನಗಳೆದಂತೆ ಮಾಗುವ ಮನಸು
ಕತ್ತಲ ಮುಸುಕನು ಭೇದಿಸಿ ಬೆಳೆಯುವ ಕನಸು
ಮೆಲ್ಲನೆ ನುಸುಳಿದೆ ಅರ್ಥದ ಬೆಳಕು
ಜೊತೆಯಲೆ ನಗುತಿದೆ ಅನು'ಭಾವ'ದ ಚಿಮುಕು

'ಇಂದು'
ಭಾವ ಬೀಜಗಳು
ಹಸಿರಾಗುವ ಸಮಯ
'ಕಾಲ' ಕೂಡಿ ಬಂದಾಗಲೇ
ಹೊಸ - ಬದುಕಿನ ಉದಯ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+