ಕೃಷ್ಣಾರ್ಪಣ

ಕಾಡುವ ಕಣ್ಣಾಲಿಗಳನ್ನು
ಮುಡಿ ಬಿಟ್ಟ ನೀರು ಬೆನ್ನು ತಾಗುವುದನ್ನು
ಹಾಲು ಕುಡಿದಾ ಹುಡುಗನ ತುಟಿ ತಾಗಿಸಲೊಂದು ನಗುವನ್ನು
ಎಲ್ಲಿಯ ಹಸಿವಿಗೋ ಇಲ್ಲೊಂದೆರಡು ಅಗುಳನ್ನು
ಅಂಗಿಯ ಮೇಲೊಂದು ಕಲೆಯನ್ನು
ಕಾಲ್ಬೆರಳಲ್ಲಿ ರೆಕ್ಕೆ ಹರಡಿದ ಚಿಟ್ಟೆಯನ್ನು
ಮುಡಿ ಬಿಟ್ಟ ನೀರು ಬೆನ್ನು ತಾಗುವುದನ್ನು
ಹಾಲು ಕುಡಿದಾ ಹುಡುಗನ ತುಟಿ ತಾಗಿಸಲೊಂದು ನಗುವನ್ನು
ಎಲ್ಲಿಯ ಹಸಿವಿಗೋ ಇಲ್ಲೊಂದೆರಡು ಅಗುಳನ್ನು
ಅಂಗಿಯ ಮೇಲೊಂದು ಕಲೆಯನ್ನು
ಕಾಲ್ಬೆರಳಲ್ಲಿ ರೆಕ್ಕೆ ಹರಡಿದ ಚಿಟ್ಟೆಯನ್ನು
ಸೂರ್ಯಕಾಂತಿ ಹಚ್ಚಿಕೊಂಡ ಹಳದಿಯನ್ನು
ಗೆರೆಗೆರೆ ಗರಿಗೆ ಬಣ್ಣದ ಹೊದಿಕೆಯನ್ನು
ಒಂದು ಸಣ್ಣ ಕಥೆಯನ್ನು
ಒಂದಿಷ್ಟು ಮಳೆಹನಿಯನ್ನು
ಮೌನ ಸಂಹಿತೆಗೆ ಅರ್ಧ ವಿರಾಮವನ್ನು
ಆತ್ಮ ಸಾಂಗತ್ಯಕ್ಕೆ ಧ್ವನಿಯನ್ನು
ನನ್ನದರ ಒಂದಷ್ಟು ಹಂಚಿಕೆಯನ್ನು
ನಿನ್ನದರಲ್ಲಿ ನನ್ನ ಪಾಲನ್ನು....
ಶರಧಿಯ ಲವಣ ಅಲೆಗೆ ಮುತ್ತಿಟ್ಟು ಹರಳಾದಂತೆ
ಚಿಪ್ಪಿನೊಳಗೆ ಅರಳಿದಂತೆ
ನಾನೇನು ಖುಷಿಯ ಒಡೆತನ ಕೇಳಿದೆನೇ?
ಒಂದಷ್ಟು ಘಳಿಗೆ ಗುತ್ತಿಗೆ ಕೊಟ್ಟರೂ ಸಾಕು
ಅದೂ ಕೃಷ್ಣಾರ್ಪಣ ತಾನೇ?!
16/ಸೆಪ್ಟೆಂಬರ್/2010












Click it and Unblock the Notifications