ಮೂಡಿಗೆರೆಯ ಮಾಂತ್ರಿಕ ಪೂರ್ಣಚಂದ್ರ ತೇಜಸ್ವಿ!

* ಚಂದ್ರಗೌಡ ಕುಲಕರ್ಣಿ, ತಾಳಿಕೋಟಿ
ಮೂಡಿಗೆರೆಯ ಮೋಡಿಗಾರ
ಪೂರ್ಣ ಚಂದ್ರ ತೇಜಸ್ವಿ!
ಕಾಡು ಅಲೆದು ಮೇಡು ಸುತ್ತಿ
ಬದುಕಿದಂಥ ತಾಪಸಿ!
ಚಂದ್ರಯಾನ ಹಾರು ತಟ್ಟೆ
ಬೆರಗನಿತ್ತ ಮಾಂತ್ರಿಕ!
ಗಣಕದಲ್ಲು ತಾಯ ನುಡಿಗೆ
ಕೀರ್ತಿ ತಂದ ತಾಂತ್ರಿಕ!
ಬೆವರು ಸುರಿಸಿ ದುಡಿಮೆಗೈದ
ಕಾಫಿ ಕೃಷಿಯ ಸಾಧಕ!
ಪಕ್ಷಿ ಕೀಟ ಚಿತ್ರ ತೆಗೆದ
ನಿತ್ಯ ಪ್ರಕೃತಿ ಶೋಧಕ!
ಕಾಡಿನಲ್ಲಿ ಇದ್ರು ಕೂಡ
ಬಳಸಿ ಗಣಕ ಕ್ಯಾಮರ!
ಏರೋಪ್ಲೇನ್ ಚಿಟ್ಟೆ ಚರಿತೆ
ನೀಡಿದಂಥ ಚಂದಿರ!
ಹಾರು ಓತಿ ಬೆನ್ನು ಹತ್ತಿ
ಜಗದ ಒಗಟು ಬಿಡಿಸಿದೆ!
ತುಂಟ ಮಗುಯುವಕರೆದೆಗೆ
ಅಮೃತ ಸುಧೆಯ ಹರಿಸಿದೆ!
ಹಾರು ಓತಿ ಬೆನ್ನು ಹತ್ತಿ
ಜಗದ ಒಗಟು ಬಿಡಿಸಿದೆ!
ತುಂಟ ಮಗು ಯುವಕರೆದೆಗೆ
ಅಮೃತ ಸುಧೆಯ ಹರಿಸಿದೆ!












Click it and Unblock the Notifications