ಪರಿಚಿತ ಕವಿಯ ಅಪರಿಚಿತ ಕವನ

ಕೊಡಬೇಕಿತ್ತು ಈ ಮನಸ್ಸಿಗೊಂದು ಮಚ್ಚೆಇಲ್ಲದ, ಘಾಸಿಗೊಳ್ಳದ
ಕೊಚ್ಚೆ ರಾಡಿಯಾಗದ, ಶಾಖಕ್ಕೆ ಬಾಡಿರದ ದೇಹವನ್ನು!
ಆಗತಾನೆ ಮೈಮುರಿದೆದ್ದ ಷೋಡಸಿ ಹೊಳಪಿನಂತಹ
ಮಧುರತೆಯ ಝಳಪಿಸುವ ಬೆಳಗಿನಂತಹ
ದೇಹವೊಂದು ಬೇಕಿತ್ತು ಈ ಮನಸ್ಸಿಗೆ!
ನಡುನೆತ್ತಿ ತಾಪದಲ್ಲಿ ಬೆಂದು ಮುನ್ನಡೆದಂತೇ ಸಿಕ್ಕಿದ್ದು
ಈ ಮನಸ್ಸಿಗೆ ಒಂದು ನೆರಳು; ಎಂತಹ ಅಪರಿಚಿತ ಈ ಪರಿಚಯದಾಟ?
ನೋವಿಗೂ ನೆರಳಿಗೂ ಇದ್ಯಾವ ಪರಿಯ ಕಣ್ಣುಮುಚ್ಚಾಟ;
ಕೊನೆಗೂ ಸಿಕ್ಕೀತು ನೆರಳು ನಡೆದಿದ್ದಾದರೆ ಸೂರ್ಯನಗುಂಟ!












Click it and Unblock the Notifications