ನಡೆದರು ಗಡಿ ದಾಟಿ
ಲೋಕಕಲ್ಯಾಣಕ್ಕಾಗಿ
ಸರ್ವಸಂಗ
ಪರಿತ್ಯಾಗ
ಮಾಡಿದ
ಜೈನ
ತೀರ್ಥಂಕರ
ಮಹಾವೀರ
ಹುಟ್ಟಿದ್ದು
ಚೈತ್ರ
ಮಾಸದ
ತ್ರಯೋದಶಿಯಂದು.
ಮಹಾವೀರ
ಜಯಂತಿಯ
ನಿಮಿತ್ತ
ದಿಗಂಬರ
ಮಹಾಮುನಿಗೆ
ಕಾವ್ಯನಮನ.
id="toptextpromo">
*
href="mailto:[email protected]">ಮೋಹನಚಂದ
ಪಾಟೀಲ
id='top-searched-articles'>
ಗಳಿಸಿದ್ದೆಲ್ಲ
ಭಾರವಾಗಿ ಅದನಲ್ಲೇ ಚೆಲ್ಲಿನಡೆದರು ಹುಡುಕುತ ಹಗುರ ಮೈಯ್ಯಲ್ಲಿ
ಮನೆ ಬಿಟ್ಟು ಓಣಿ ಬಿಟ್ಟು ಊರು ಬಿಟ್ಟು
ನಡೆದರು ನಿಲ್ಲದೆ ಇದ್ದ ಬಟ್ಟೆಯ ತೊಟ್ಟು
ಹಾದಿಯಿಲ್ಲದ ಜಾಗದಲಿ ಹೆಜ್ಜೆಯಿಡುತ್ತ
ದಾರಿಯಿಲ್ಲದ ಕಗ್ಗಾಡಿನಲಿ ತುಳಿಯುತ್ತ
ಕಲ್ಲು ಮುಳ್ಳು ಹಳ್ಳ ಕೊಳ್ಳ ಎನದೆ
ಉರಿವ ಬಿಸಿಲು ಕೊರೆವ ಛಳಿ ಲೆಕ್ಕಿಸದೆ
ನಡೆದರು ಎಡೆಬಿಡದೆ ಹಿಂದೆ ನೋಡದೆ
ಎದ್ದು ಬಿದ್ದು ಬಿದ್ದು ಎದ್ದು ನೋವಾದರೂ
ದೇಹ ಬಗ್ಗಿ ಕುಗ್ಗಿ ಮುಗ್ಗಿ ಮುಪ್ಪಾದರೂ
ನಡೆದರು ಒಂದೊಂದೇ ಹೆಜ್ಜೆಯಿಡುತ
ಹೆಜ್ಜೆ ಒಜ್ಜೆಯಾದಾಗ ತೆವಳುತ
ಉಸಿರು ಭಾರವಾದಾಗ ತೇಗುತ
ಇದೇ ಕೊನೆಯುಸಿರೆಂದೋ ಅಳುಕುತ
ನಡೆದರು ಗಡಿ ದಾಟಿ ಸಾವಿನಾಚೆ ಅರಸುತ












Click it and Unblock the Notifications