ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ...’

By Staff
|
Google Oneindia Kannada News


Bhakta Kanakadasaru (ಭಕ್ತಿ ಪರಂಪರೆಯನ್ನು ಬೆಳೆಸುವಲ್ಲಿ , ಜನರ ಮನಸ್ಸಿನಲ್ಲಿ ಉಳಿಸುವಲ್ಲಿ ಚಲನಚಿತ್ರಗಳ ಪಾತ್ರ ದೊಡ್ಡದು. ಸಾಹಿತ್ಯ ಪುಟಗಳಿಂದ ಬಸಿದು ತಂದು, ಸಿನಿಮಾಭಕ್ತರಿಗೆ ಆ ಗೀತೆ ಮತ್ತು ಸಂದೇಶಗಳನ್ನು ತಲುಪಿಸಿದ ಪುಣ್ಯಾತ್ಮರಿಗೆ ಸಾವಿರ ಸಾವಿರ ನಮಸ್ಕಾರ.

‘ಭಕ್ತ ಕನಕದಾಸ’ ಚಿತ್ರದ ಪಿ.ಬಿ.ಶ್ರೀನಿವಾಸ್‌ ಕಂಠಸಿರಿಯಲ್ಲಿ ಮೊಳಗಿದ ಈ ಕೆಳಕಂಡ ಗೀತೆ, ಗೀತೆಯ ಮಾಧುರ್ಯ, ಭಾವ ಮತ್ತು ಸಂದೇಶ ಎಂದೆಂದಿಗೂ ಅಜರಾಮರ. ಆದರೆ ಅಂದಿನಿಂದ ಇಂದಿನ ದಿನಗಳ ತನಕ ಕುಲ ಕಾಳಗ ನಿಂತಿಲ್ಲ. ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಾತಿಗೆ ಜೇಸುದಾಸ್‌ ವಿವಾದ ಸದ್ಯದ ಉದಾಹರಣೆ. ಎಲ್ಲವನ್ನೂ ಪಕ್ಕಕ್ಕಿಟ್ಟು ಬನ್ನಿ ಒಂದು ಕ್ಷಣ, ಭಕ್ತಿಭಾವದಲ್ಲಿ ಮಿಯ್ಯೋಣ... -ಸಂಪಾದಕ)

ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವಿಚಾರಿಸಲು ಮತಿಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು।
ಏನ ಬಲ್ಲೆನು ನಾನು ನೆರೆಸುಜ್ನಾನಮೂರುತಿ ನೀನು
ನಿನ್ನ ಸಮಾನರುಂಟೇ ದೇವ ರಕ್ಷಿಸು ನಮ್ಮ ಅನವರತ ।।

ದೇವ ... ದೇವ.... ದೇವ....
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ ಬಾಗಿಲನು ತೆರೆದು

ಪರಮಪದದೊಳಗೆ ವಿಷಧರನ ಕಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯಾಳಿರಲೂ...
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಬಾಗಿಲನು ತೆರೆದು

ಕಡುಕೋಪದಿಂ ಖಳನು ಖಡ್ಗವನೆ ಪಿಡಿದು..
ನಿನ್ನೊಡೆಯ ಎಲ್ಲಿಹನು ಎಂದು ನುಡಿಯೇ..
ಧೃಢ ಭಕುತಿಯಲು ಶಿಶುವು ಬಿಡದೆ ನಿನ್ನನು ಭಜಿಸೆ..
ಸಡಗರದಿ ಸ್ತಂಭದಿಂದೊಡೆದೆ ನರಹರಿಯೆ ಬಾಗಿಲನು ತೆರೆದು...

ಯಮಸುತನ ರಾಣಿಗೆ ಅಕ್ಷಯವಸನವಾಯಿತೆ
ಸಮಯದಲಿ ಅಜಮಿಳನ ಪೊರೆದೇ...
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿಕೇಶವನೇ ಬಾಗಿಲನು ತೆರೆದು...

ಬಾಗಿಲನು ತೆರೆದು
ಬಾಗಿಲನು ತೆರೆದು... ಸೇವೆಯನು ಕೊಡೊ ಹರಿಯೇ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X