ಡುಂಡಿ.. ಡುಂಡಿ.. ಡುಂಡಿ..
ಪದ ಕಚಗುಳಿಯಿಂದ ಓದುಗರ ನಗಿಸುವ ಹನಿಗವನಗಳ ಮಂಡಿ ಹೆಚ್.ಡುಂಡಿ ರಾಜ್ ಬಗ್ಗೆ..
- ಎಚ್. ವಿ. ಸೂರ್ಯನಾರಾಯಣ ಶರ್ಮಾ, ಬೆಂಗಳೂರು
ಕನ್ನಡದೊಳೇನೆಲ್ಲ ಕಂಡಿ
ಬೆಸೆಯುತಿರುವೆ ಸ್ನೇಹಕೊಂಡಿ
ತುಂಬುತಿರುವೆ ಶಬ್ದಬಂಡಿ
ರಸವತೆಗೆದು ಹಿಂಡಿಹಿಂಡಿ
ಉಣಿಸುಹಾಸ್ಯ ಧಂಡಿಧಂಡಿ
ಆಗುನೀ ಕನ್ನಡದದಂಡಿ
ಕಾಂತೆಯಾಗದಿರಲಿ ಚಂಡಿ
ನಡೆಯದಿರಲಿಗಂಡಾ-ಗುಂಡಿ
ಕಣಜತುಂಬುತಿರಲಿ PUNಡಿ
ತುಂಬುತಿರಲಿ ನಿನ್ನ ಹುಂಡಿ
ತಿನ್ನುನೀನುತುಂಬಾತಿಂಡಿ
ಸ್ವಸ್ಥವಿರಲಿ ನಿನ್ನ ಕುಂಡಿ
ಹಿಡಿಯದಿರಲಿನಿನ್ನ ಥಂಡಿ
ಹಾಕಿಕೋಅಂಗಿ ಗುಂಡಿ
ಭದ್ರವಿರಲಿನಿನ್ನ ಮಂಡಿ
ತೆರೆದುತೆರೆದು ಹಾಸ್ಯ ಕಿಂಡಿ
ಎಚ್ಚರಿಸುತಿರು ಕಿವಿಯಹಿಂಡಿ
ಹಾಯದಂತೆ ಕಳ್ಳ-ಗಂಡಿ












Click it and Unblock the Notifications