ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾಂತಿ ತರಲಿ ಶಾಂತಿ... ಶುಭಕ್ರಾಂತಿ

By Staff
|
Google Oneindia Kannada News
ಬಾರೆ ತಂಗಿ ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಜರತಾರಿ ಕುಪ್ಪಸ ತೊಟ್ಟು ಬಾ
ಬಣ್ಣದ ಅಂಗಿ ಚಡ್ಡಿ ತೊಟ್ಟು ನಾ ಬರುವೆ
ಅಮ್ಮ ಕೊಟ್ಟ ಎಳ್ಳುಬೆಲ್ಲವ ಎಲ್ಲರ ಮನೆಗಳಿಗೆ ಬೀರೋಣ ಬಾ

ಬೆಳ್ಳಿಯ ಹರಿವಾಣದಲಿ ಕಸೂತಿಯ ಕರವಸ್ತ್ರ
ಬೆಳ್ಳಿಯ ಬಟ್ಟಲಲಿ ಎಳ್ಳು ಬೆಲ್ಲ ಸಮ್ಮಿಶ್ರ
ಜೊತೆಯಲಿ ಬೆಳ್ಳನೆಯ ಮೃದು ಸಕ್ಕರೆಯ ಅಚ್ಚು
ಅರಿಶಿನ ಕುಂಕುಮ ಬಾಳೆಹಣ್ಣು ಎಲಚಿಯ ಗುಚ್ಚು

ಈ ಕಡೆ ಮನೆಯವರೀವರು ಪೊಂಗಲ್‌ ತಿಂಡಿ
ಆ ಕಡೆ ಮನೆಯವರೀವರು ತಿಲ್‌ಗೋಳ್‌ ಉಂಡಿ
ಅವರ ಮನೆಯ ಗಂಗೆ ಗೌರಿಗಳ ಪೂಜಿಸೋಣ
ಗೆಳೆಯರೊಡಗೂಡಿ ಗಾಳಿಪಟ ಹಾರಿಸೋಣ

ಕೊಬ್ಬರಿ ಕಡಲೆ ಬಾಯ್ತುಂಬ ತಿನ್ನೋಣ
ಕಬ್ಬನು ಸಿಗಿದು ರಸ ಹೀರೋಣ
ಸಂಜೆ ಬೆಂಕಿಯ ಕೊಂಡವ ಹಾಯೋಣ
ಹೊಸ ಧಾನ್ಯವ ಗಾಡಿಯ ಮೇಲೆ ಹೊತ್ತು ತರೋಣ

ಎಲ್ಲರಿಗೂ ಹಂಚೋಣ ನಮ್ಮನೆಯ ಎಳ್ಳು ಬೆಲ್ಲ
ಸ್ನೇಹ ಸಂಪಾದಿಸಿ ಒಂದಾಗಿ ಬಾಳುವ ನಾವೆಲ್ಲಾ
ಸಂಕ್ರಾಂತಿಯಿಂದ ಶುಭಕ್ರಾಂತಿಯ ತರೋಣ
ನಾಡ ಕಟ್ಟೋಣ, ಎಲ್ಲರೂ ಕೈಜೋಡಿಸೋಣ


ಪೂರಕ ಓದಿಗೆ-
ಸಂಕ್ರಾಂತಿ, ಬಂತು ಸಂಕ್ರಾಂತಿ!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X