ಸಂಜೀ ಮಳೀ
- ಪಿ.ಜಿ. ರಘುನಾಥ್, ಬೆಂಗಳೂರು.
[email protected]
ನಮ್ಕ್ಡೀ ಬಾನಾಮತೀನಿಂದಾದರೂ ತಪ್ಪಿಸ್ಬೋದ್
ಸಂಜಿ ಐದಾತೂಂದ್ರೆ ಜಗ್ಗಿ ಸುರ್ಯೋ ಈ
ಬೆಂಗ್ಳೂರ್ನ್ ಆಫೀಸ್ ಮಳೀ ಕೈಯಿಂದ್
ತಪ್ಪ್ಸೋದು ಭಾರಿ ತ್ರಾಣಾ ಆಗೈತ್ರೀ !
ಮಳೀಗ್ಯಾಕ್ ಈ ಪಾಟಿ ಪ್ರೀತೀನೋ ಕಾಣಿ
ಬೆಂಗ್ಳೂರ್ನ್ ಮಂದೀ ಮ್ಯಾಗೆ !
ಬ್ಯಾಡಾ ಅಂದ್ರೂ ಜಗ್ಗಿ ಜಗ್ಗಿ ಸುರೀತೈತಿ
ದುಮ್ದುಮುಕಿ ನಗಿಸ್ತೈತಿ
ಜಿದ್ದಾ ಜಿದ್ದಿ ಸೆಡ್ಡ್ ಹೊಡ್ದ್ ಅಳಿಸ್ತೈತಿ !
ಈ ಮಳೀರಾಯ್ನ್ ಪ್ರೀತಿನೋ ನಮ್
ಧರ್ಮಪ್ಪನ್ ಪ್ರೀತಿಯಂಗ್ರೀ, ಅವ ತನ್ಕಡೀ
ಮಂದೀ, ತನ್ನೂರ್ನ್ ಮರೆತ್ರೂ ಆ ದೇವಪ್ಪನ
ಈ ಬೆಂಗ್ಳೂರ್ನ ಮರಿಯಾಂಗಿಲ್ಲ ನೋಡ್ರೀ !
ಈ ಮಳಿಯೂ ಅವ್ನ ಹಾದಿಯೇ ಹಿಡಿದೈತ್ರೀ
ಬಾಳೇ ಸುರಿದು ಬೆಂಗ್ಳೂರು ಗಟಾರ ಸೇರಿದ್ರೂ
ನಾ ಬಿಡಂಗಿಲ್ಲ ಅನ್ನುತ್ರೀ,
ಬೀದರ್ದಾಗೋ ಗುಲ್ಬರ್ಗಾ ಕಡೀನೋ ಸುರಿದ್ರೆ
ಬತ್ತಿರೋ ಬಾಳ ಬೆಳಗ್ತೈತಿ ಅಂದ್ರೂ
ಕೇಳಂಗಿಲ್ಲ ನೋಡ್ರೀ ಈ ಹಾಳ್ ಮಳೀ !
ತೆಗೀರೀ ಈ ಬೆಂಗ್ಳೂರ್ ಜನ
ಬಾಳ ಶಾಣೆ ಇದ್ದಾರ್ ಬಿಡ್ರೀ !
ನಮ್ ಧರ್ಮ್ಪ್ಪ್ನ್ ಮರುಳ್ ಮಾಡ್ದಂಗೆ
ಈ ಮಳೀನೂ ಬಿಟ್ಟಿಲ್ಲ ನೋಡ್ರೀ !
ನಿಮ್ಮ ಕಡೀ ಯಾರಾದ್ರೂ ಇದ್ರೆ
ಬೇಗ ಬನ್ರಲಾ ಬಿಡಿಸೋಣ್
ಧರ್ಮ್ಪ್ಪ್ನ್ ಮೋಡಿ ಮಳೀರಾಯ್ನ್ ಬೇಡಿ !!
More From
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications