ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನ ನೆನಪಲಿ....

By Staff
|
Google Oneindia Kannada News
Girish Prabhup;#3246;ನವ ಕರಗಿಸಿ
ವಿರಹ ಸಹಿಸಿ ನೋವ ನುಂಗಿ
ಎತ್ತ ಹೋದೆನು ನಾ ?।।

ಹಿರಿಯರಾಡುವ ಬುದ್ಧಿ ಮಾತು
ಎನ್ನ ಕಿವಿಗೆ ಕೇಳದಾಯಿತು
ಕಿವುಡನಾದೆನು ನಾ ।।

ನೂರು ಸಾವಿರ ಪ್ರಶ್ನೆಗಳಿಗೆ
ಮರಳಿ ನುಡಿಯು ಹೊರಡದಾಯಿತು
ಮೂಗನಾದೆನು ನಾ ।।

ನಿನ್ನ ಧ್ಯಾನದಿ ನಿಂತ ನನಗೆ
ಬೇರೆ ಏನು ಕಾಣದಾಯಿತು
ಕುರುಡನಾದೆನು ನಾ ।।

ನಿನ್ನನುಳಿದು ಅನ್ಯ ವಿಷಯವು
ಎನ್ನ ಬುದ್ಧಿಗೆ ತಿಳಿಯದಾಯಿತು
ಮೂಢನಾದೆನು ನಾ ।।

ನೀನು ಎದುರು ಬಂದು ನಿಲ್ಲಲು
ಎನ್ನ ಪಾದವು ಚಲಿಸದಾಯಿತು
ಕುಂಟನಾದೆನು ನಾ ।।

ನಿನ್ನ ಚಿಂತೆಯು ಮನವ ಕೊರೆದು
ಎನ್ನ ಕರವು ಕದಲದಾಯಿತು
ಹೆಳವನಾದೆನು ನಾ ।।

p;#3244;ುದ್ಧಿ ಕನಲಿ
ದೇಹ ಸೊರಗಿ ಆತ್ಮ ಸೋತು
ಹುಚ್ಚನಾದೆನು ನಾ ।।

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು / ಕವನ ಸಿಂಚನ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X