ಬನ್ನಂಜೆಗೆ ನಮನ, ಬನ್ನಂಜೆಗೆ ಸ್ವಾಗತ
- ಜಗದೀಶ್ ಮಯ್ಯ
ಇರವಿನ ಅರಿವಿರದ, ಜಡ್ಡುಗಟ್ಟಿದ, ನಿಷ್ಕಿೃಯ ಜನಾಂಗಕೆ ಮೈನಾಕದ ಗಂಧವ ಪಸರಿಸಿ ಬಡಿದೆಬ್ಬಿಸಿದ ರಾಮದೂತ, ಮಹಾ ಧೀಮಂತ,
ದೇಹ ಧರ್ಮವ ಲೆಕ್ಕಿಸದೆ ಧರ್ಮ ಪ್ರವಚನ ನೀಡುವ ದಯಾವಂತ !
ಪಶ್ಚಿಮದ ಭಾರತೀಯರಿಗೆ ಪೂರ್ವದ ಹಿತ್ತಲಗಿಡದ ಮದ್ದನ್ನು ಮುದ್ದಾಗಿ ತಿನ್ನಿಸುವ,
ಭವರೋಗ ವೈದ್ಯನ ಪ್ರತಿಬಿಂಬ, ಒಳಗಣ್ಣು ತೆರೆದ ಸಾಂಬ, ಒಳಗಣ್ಣ ತೆರೆಸುವನೆಂಬ !
ಪ್ರತಿಯಾಬ್ಬರೂ ವಿಶಿಷ್ಟ ಬೀಜದಂತೆ, ಸಸಿ ಗಿಡಗಳಂತೆ, ಭಗವಂತ ತೋಟಗಾರನಂತೆ- ಬನ್ನಂಜೆ ಉವಾಚ
ಬನ್ನಂಜೆಯೋ ಅರಳಿ ಮರದಂತೆ ! ತೋಟಗಾರನಿಂದ ಹೆಚ್ಚುವಾರಿ ಹರಿಸಿಕೊಂಡವರು, ಹರಸಿಕೊಂಡವರು, ದಿಕ್ ದಿಗಂತಗಳಲಿ ಅರಳಿ ನಿಂತವರು ಬುದ್ದುಗಳ ಬುದ್ಧರಾಗಿಸುತ ಜ್ಞಾನೋದಯದ ಫಲವೀಯುವರು !
ಬನ್ನಂಜೆ ! ಬಂಜೆ ತಲೆಗಳಿಗೆ ಜ್ಞಾನಗಂಗೆ, ಬತ್ತಿದೆದೆಗಳಿಗೆ ಹಾಲ್ಜೇನು ಸುರಿದ್ಹಾಂಗೆ !
ಸನಾತನ ಧರ್ಮ ಸಾರಿ ಸಾರಿ ಸಾವಿರ ಬಾರಿ ಬಿತ್ತಿದವರು, ಕೊಳೆ ಕಳೆ ಕಳೆದವರು, ಆಧ್ಯಾತ್ಮಿಕತೆ, ಸತ್ವ ಸ್ವಾಭಿಮಾನವ ಬೆಳೆಸಿದವರು.
ತಿಳಿದು ಮಾಡೆಂಬರು ಬನ್ನಂಜೆ, ನನಗೇನೂ ತಿಳಿಯದು ಎಂದು ತಿಳಿದಿರಲಿ ಎಂಬರು !
ತಿಳಿಸಿ ತಿದ್ದುವರು, ಗೊಡ್ಡುತನವ ಗುದ್ದುವರು, ಒಣ ವೇದಾಂತವ ಹಸಿರಾಗಿಸಿ, ಉಸಿರಾಗಿಸುವರು
ಹಲವು ಗೊಂದಲಗಳ ರಾಡಿ ತಲೆ ಕೊಳೆವ ತಿಳಿಗೊಳವಾಗಿಸಿ ಆತ್ಮತತ್ವವ, ಸರಳ ಸತ್ಯವ ಪ್ರತಿಫಲಿಸುವರು !
ವೇದೋಪನಿಷದ್ ಕಾಲದ ಯಾವನೋ ದಾರ್ಶನಿಕ, ಕವಿ, ಋಷಿ ವರೇಣ್ಯ
ಈ ಜನ್ಮದಿ ಆಚಾರ್ಯ ಬನ್ನಂಜೆ, ಹೀಗನ್ನಲು ನಾನಂಜೆ, ಭೂತಾಯಿಯಲ್ಲ ಬಂಜೆ !
ಬನ್ನಂಜೆಯವರೇ ನಿಮಗಿದೋ ಸ್ವಾಗತ ! ಕೃಷ್ಣನ, ಕೃಷ್ಣ ದ್ವೆ ೖಪಾಯನರ ಮೇಲಣ
ನಿಮ್ಮ ವಿಚಾರ ರಸಾಮೃತ ಧಾರೆಗೆ ನಮ್ಮ ತೆರೆದ ಹೃದಯದ ಸ್ವಾಗತ !
ಕ್ಷೀರ ಸಾಗರ ನೀವು, ಹಾಲು ಬಯಸಿದ ರೋಗಿ ನಾವು !












Click it and Unblock the Notifications