ಶುರುವಾದರೆ ಸೋಮವಾರ, ಎಲ್ಲರ ಮುಖಗಳು ಭಾರ
*ಫಣಿಶ್ರೀ, ಸಿಲ್ವರ್ ಸ್ಪ್ರಿಂಗ್, ಮೇರಿಲ್ಯಾಂಡ್
ಯಾಂತ್ರಿಕತೆಯೆ ಇಲ್ಲಿನ ಬದುಕು
ವಿರಾಮಿಸಲಿಲ್ಲಿ ವಾರಾಂತ್ಯಕೆ ಕಾಯಬೇಕು!
ಶುರುವಾದರೆ ಸೋಮವಾರ
ಇಲ್ಲಿ ಎಲ್ಲರ ಮುಖಗಳು ಭಾರ
ನಿಟ್ಟುಸಿರಲೇ ಬಂತು ಮಂಗಳವಾರ
ಹೇಳುತಲಿ ವಾರಾಂತ್ಯವಿದೆ ಬಹಳ ದೂರ
ನಟ್ಟ ನಡುವಿನ ಈ ಬುಧವಾರ
ಕಾಯುವಿಕೆಯ ಮಾಡಿಹುದು ಕೊಂಚ ಹಗುರ
ತಂದಿತು ಗೆಲುವು ಗುರವಾರದಲ್ಲಿ
ವಾರಾಂತ್ಯವಿದೆ ಇನ್ನೊಂದು ದಿನದ ಅಂತರದಲ್ಲಿ
ಬಂದಿತೊ ಕಡೆಗೆ ಕಾಯ್ದ ಶುಕ್ರವಾರ
ಅಂದು ಸಂಜೆಗಿಳಿವುದು ಕೆಲಸದ ಚಿಂತೆಯ ಭಾರ
ಆಯಿತೊ ಕಾಯುವಿಕೆಯ ಅಂತ್ಯ
ಬಂದಾಗ ಮೋಜಿನ ವಾರಾಂತ್ಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications