ಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆ
ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರ ಅನುಭವವೇ ಈ ಲೇಖನ. ಯಾವ ಕಂಪೆನಿಯ ಕ್ಯಾಬ್ ಅನ್ನೋದನ್ನು ಬಹಿರಂಗ ಪಡಿಸುತ್ತಿಲ್ಲ. ಆದರೆ ಅವರು ಹೇಳಿಕೊಂಡ ದುಃಖ-ದುಮ್ಮಾನವನ್ನು ನಿಮ್ಮೆದುರು ಇಡಲಾಗುತ್ತಿದೆ. ಇನ್ನು ಮುಂದಿನ ಮಾತುಗಳು ಅವರವು.
ಶುರುವಿನಲ್ಲಿ ಕೊಡ್ತಿದ್ದ ಇನ್ಸೆಂಟಿವ್ ನೋಡಿ ಸಿಕ್ಕಾಪಟ್ಟೆ ಜನ ಕಾರುಗಳನ್ನು ಹಾಕಿಬಿಟ್ಟರು. ಅದೆಷ್ಟೋ ಸಾವಿರ ಜನ ಬ್ಯಾಂಕ್ ಸಾಲ ಮಾಡಿಕೊಂಡು ಕಾರುಗಳನ್ನು ಖರೀದಿಸಿ, ಚಾಲಕರಾದರು. ಆದರೆ ಈಚೆಗೆ ಕಂಪೆನಿಯ ನಿಯಮಗಳು ಬದಲಾಗಿವೆ. ಮುಂಚಿನ ರೀತಿ ಇನ್ಸೆಂಟಿವ್ ಸಿಗ್ತಿಲ್ಲ.
ಈ ಬೆಂಗಳೂರಿನ ಟ್ರಾಫಿಕ್ ನಲ್ಲಿ ಅವರು ಹೇಳಿದಷ್ಟು ಟ್ರಿಪ್ ಮಾಡುವುದು ಅಸಾಧ್ಯ ಅನ್ನೋ ಹಾಗಿದೆ. ಆದರೆ ಬ್ಯಾಂಕ್ ಸಾಲ ತೀರಿಸಬೇಕು, ಸಂಸಾರ ನಡೆಯಬೇಕು, ಜತೆಗೆ ಕಾರಿನ ಡೀಸೆಲ್, ರಿಪೇರಿ ಅದೂ ಇದೂ ಅಂತೆಲ್ಲ ಸೇರಿ ಭಾರೀ ಒತ್ತಡ ಆಗಿಬಿಟ್ಟಿದೆ.
ಮುಂಚೆಲ್ಲ ಟ್ರಾವೆಲ್ಸ್ ಗಳಿಗೆ ಕೆಲಸ ಮಾಡುವಾಗ ಸೀಸನ್ ಗಳಲ್ಲಿ ವಿಪರೀತ ಕೆಲಸ ಇರ್ತಿತ್ತು. ಉಳಿದ ಸಮಯದಲಿ ಹಾಗೂ-ಹೀಗೂ ನಡೆಯುತ್ತಿತ್ತು. ಈಗ ಈ ಕಡೆ ಬಂದ ಮೇಲೆ ಅಲ್ಲೂ ಹೊಸ ಜನ ಬಂದಿದ್ದಾರೆ. ವಾಪಸ್ ಹೋಗೋದಿಕ್ಕೆ ಆಗ್ತಿಲ್ಲ. ಇಲ್ಲಿ ಬರುತ್ತಿರುವ ಆದಾಯ ಸಾಕಾಗ್ತಿಲ್ಲ. ನಾನು ಮನೆಗೆ ಹೋಗೇ ಎರಡು ದಿನ ಆಯಿತು.

ರಾತ್ರಿ ಕಳೆಯುವ ರೀತಿ
ನೀವು ಬನಶಂಕರಿಯಿಂದ ಮುಂದೆ ಜೆಪಿ ನಗರ ರಸ್ತೆಯಲ್ಲಿ ಹೋಗಿ ರಾತ್ರಿ ಹೊತ್ತು ನೋಡಿದರೆ ಉದ್ದಕ್ಕೂ ಕ್ಯಾಬ್ ಡ್ರೈವರ್ ಗಳೇ ಕಾರಿನಲ್ಲಿ ಮಲಗಿರ್ತಾರೆ. ಮನೆಗಳಿಗೂ ಹೋಗದೆ ದುಡಿಯುವ ತುರ್ತಿನಲ್ಲಿ ಅವರು ರಾತ್ರಿ ಕಳೆಯುವ ರೀತಿ ಅದು.

ಶನಿವಾರ-ಭಾನುವಾರದ ದಿನ ಮಾತ್ರ ಡ್ರೈವಿಂಗ್ ಕೆಲಸ
ಇನ್ನು ಬೆಂಗಳೂರಿಗೆ ಹತ್ತಿರ ಇರುವ ತುಮಕೂರು, ಮಂಡ್ಯ, ಮದ್ದೂರು, ರಾಮನಗರ, ಕೋಲಾರ, ಹೊಸೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದಿಂದ ಶನಿವಾರ-ಭಾನುವಾರದ ದಿನ ಮಾತ್ರ ಡ್ರೈವಿಂಗ್ ಕೆಲಸಕ್ಕೆ ಅಂತ ನೂರಾರು ಜನ ಬರ್ತಾರೆ.

ಸುಲಭ್ ಶೌಚಾಲಯಗಳಲ್ಲಿ ಸ್ನಾನ-ನಿತ್ಯ ಕರ್ಮ
ರಸ್ತೆ ಬದಿಯಲ್ಲೆಲ್ಲೋ ಊಟ ಮಾಡಿಕೊಳ್ತಾರೆ. ಸುಲಭ್ ಶೌಚಾಲಯಗಳಲ್ಲಿ ಸ್ನಾನ-ನಿತ್ಯ ಕರ್ಮಗಳನ್ನು ಮುಗಿಸಿಕೊಳ್ತಾರೆ. ಎರಡು ದಿನ ಬಿಡುವಿಲ್ಲದೆ ದುಡಿದು, ಒಂದಿಷ್ಟು ದುಡ್ಡು ಮಾಡಿಕೊಂಡು ವಾಪಸ್ ತಮ್ಮ ಊರುಗಳಿಗೆ ಹೋಗ್ತಾರೆ.

ಈ ಕಾರನ್ನು ಮಾರಿ ನೆಮ್ಮದಿಯಾಗಿ ಬಿಡ್ತೀನಿ
ಯಾರ ಹತ್ತಿರ ಆದರೂ ಡ್ರೈವರ್ ಕೆಲಸ ಸಿಕ್ಕರೂ ಸಾಕು, ಈ ಕಾರನ್ನು ಮಾರಿ ನೆಮ್ಮದಿಯಾಗಿ ಬಿಡ್ತೀನಿ. ನಮ್ಮ ಜನರೇ ಹೀಗೆ. ನನ್ನನ್ನೂ ಸೇರಿಸಿಕೊಂಡು ಹೇಳ್ತಿದೀನಿ: ಸಂಪಾದನೆ ಜಾಸ್ತಿ ಆಗುತ್ತದೆ ಅಂತ ಅನ್ನಿಸಿದ ತಕ್ಷಣ ಹಿಂದೆ-ಮುಂದೆ ನೋಡದೆ ನುಗ್ಗಿ ಬಿಡ್ತಾರೆ.

ಶುರುವಿನಲ್ಲಿ ಒಳ್ಳೆ ದುಡ್ಡು ಕೊಟ್ಟರು
ಶುರುವಿನಲ್ಲಿ ಕ್ಯಾಬ್ ಕಂಪೆನಿಗಳವರು ನಿಜಕ್ಕೂ ತುಂಬ ಒಳ್ಳೆ ದುಡ್ಡು ಕೊಟ್ಟರು. ಆದರೆ ಕ್ರಮೇಣ ಕಡಿಮೆ ಆಗುತ್ತಾ ಹೋಯಿತು. ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡವರು ನಮ್ಮಂಥವರು. ಈಗ ಮುಂಚಿನ ರೀತಿಯಲ್ಲಿ ದುಡ್ಡಿಲ್ಲ. ಆದರೆ ವಿಪರೀತ ಜವಾಬ್ದಾರಿಗಳನ್ನು ಮೈ ಮೇಲೆ ಹೊತ್ತುಕೊಂಡು ಭಾರಕ್ಕೆ ಕುಸಿದು ಹೋದ ಹಾಗೆ ಆಗ್ತಿದೆ.

ಚಕ್ರವ್ಯೂಹದೊಳಗೆ ಬಂದಿದ್ದೀವಿ
ಅದೇನೋ ಚಕ್ರವ್ಯೂಹ ಅಂತಾರಲ್ಲ, ಹಾಗೆ. ಇದರೊಳಗೆ ಬಹಳ ಸಲೀಸಾಗಿ ಬಂದು ಬಿಟ್ಟಿದ್ದೀವಿ. ಹೊರಗೆ ಬರುವುದಕ್ಕೆ ದಾರಿಯೇ ಗೊತ್ತಾಗ್ತಿಲ್ಲ. ಮತ್ತೀಗ ಡ್ರೈವಿಂಗ್ ಕೆಲಸಕ್ಕೆ ಬರುತ್ತಿರುವವರನ್ನು ನೋಡಿ, ಎಸ್ಸೆಸ್ಸೆಲ್ಸಿ ಮುಗಿದಿಲ್ಲ ಅಂದರೆ ಡ್ರೈವಿಂಗ್ ಕಲಿತು ಬಿಡು ಅಂತ ಸಲಹೆ ಕೊಡುವವರೇ ಜಾಸ್ತಿ.

ಎಂಟನೇ ದಿನಕ್ಕೆ ಆಗಲೇ ಸಂಪಾದನೆಗೆ ಇಳಿದು ಬಿಡ್ತಾರೆ
ಒಂದು ವಾರ ಡ್ರೈವಿಂಗ್ ಕಲೀತಾರೆ. ಎಂಟನೇ ದಿನಕ್ಕೆ ಆಗಲೇ ಸಂಪಾದನೆಗೆ ಇಳಿದು ಬಿಡ್ತಾರೆ. ಎಷ್ಟು ಭಯಂಕರವಾಗಿ ಓಡಿಸ್ತಾರೆ ಅಂದರೆ, ನಾವೆಷ್ಟೇ ಸರಿಯಾಗಿ ಓಡಿಸ್ತಿವಿ ಅಂದರೂ ರಸ್ತೆಗಿಳಿಯುವುದಕ್ಕೆ ಭಯ ಪಡುವ ಸ್ಥಿತಿ ಇದೆ. ಈ ಜನ್ಮದಲ್ಲಿ ನನ್ನ ಹಣೆ ಮೇಲೆ ಡ್ರೈವರ್ ಅಂತ ಬರೆದಾಗಿದೆ. ಆದರೆ ಮತ್ಯಾರಿಗೂ ಡ್ರೈವರ್ ಆಗಬೇಡಿ ಅಂತಲೇ ಹೇಳ್ತೀನಿ.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications