ಕರ್ನಾಟಕದ ವಿಚಕ್ಷಣ ವಿದ್ವಾಂಸ ಹಾವನೂರು

ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ಅವರ ಜೀವನ ಶೈಲಿಗೆ ವಿಧಿ ಅಂತ್ಯ ಹಾಡಿದೆ. ಸೋಮವಾರ ಹೃದಯಾಘಾತದಿಂದ ಹಾವನೂರರ ವಿಧಿವಶರಾದರು. ಬಸವನಗುಡಿಯ ಸ್ವಗೃಹದಲ್ಲಿ ಬುಧವಾರ ಬೆಳಗ್ಗೆ ವರೆಗೂ ಅವರ ಭೌತಿಕ ಶರೀರ ಸಾರ್ವಜನಿಕ ದರ್ಶನಕ್ಕೆ ಲಭ್ಯ ನಂತರ ಸಾಂಪ್ರದಾಯಿಕ ವಿಧಿ ವಿಧಾನದೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ. ಪತ್ನಿ, ಮಕ್ಕಳಾದ ನಾಗೇಶ್ , ಸಂಜಯ್ ಹಾಗೂ ನಿವೇದಿತಾ ಅವರನ್ನು ಮೃತರು ಅಗಲಿದ್ದಾರೆ.
ಯಾವುದೇ ಒಂದು ಸ್ಥಳ ಅಥವಾ ವೃತ್ತಿ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಹಾವನೂರರು ಲೋಕ ಸಂಚಾರಿಯಾಗಿ ಅಪಾರ ಜ್ಞಾನ ಸಂಪಾದಿಸಿದವರು. ಭಾರತದ ಹಲವು ರಾಜ್ಯಗಳಲ್ಲದೆ, ಅಮೆರಿಕ, ಇಂಗ್ಲೆಂಡ್ ಹಾಗೂ ಜರ್ಮನಿಯನ್ನು ಸುತ್ತಿಬಂದಿದ್ದರು. ಅವರ ಹೊಸಗನ್ನಡದ ಅರುಣೋದಯ ಸಂಶೋಧನಾ ಗ್ರಂಥವನ್ನು ಕನ್ನಡ ಸಾಹಿತ್ಯ ಸಂಶೋಧಕರ ಪಾಲಿಗೆ ಅಮೂಲ್ಯ ಕೃತಿ. ಬ್ರಿಟಿಷ್ ಇಂಡಿಯಾದಲ್ಲಿದ್ದ ಎಲ್ಲ ಕನ್ನಡ ಕವಿಗಳ, ಕಾದಂಬರಿಕಾರರ, ಮುದ್ರಣ ಶಾಲೆಗಳ, ವಿಶೇಷ ಲೇಖನಗಳ ಸಂಶೋಧನೆ ಕಾರ್ಯ ಇವತ್ತಿಗೂ ಉಲ್ಲೇಖನೀಯವಾಗಿವೆ.
ಪೂರ್ವ ತರಬೇತಿ ಇಲ್ಲದೆ ವೃತ್ತಿಯಿಂದ ವೃತ್ತಿಯಿಂದ ಹಾರುತ್ತಿದ್ದ ಹಾವನೂರರು, ಎಲ್ಲದರಲ್ಲೂ ಉತ್ತಮ ಸಾಧನೆ ಮೆರೆದವರು.ಸುಮಾರು ಕಾಲು ಶತಮಾನಗಳಷ್ಟು ಕಾಲ ಮುಂಬೈಯ ಬಾಬಾ ಇನ್ಸ್ ಸ್ಟಿ ಟ್ಯೂಟ್ ಆಫ್ ರಿಸರ್ಚ್ ನಲ್ಲಿ ಗ್ರಂಥಪಾಲಕರಾಗಿ ದುಡಿದ ಮೇಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಇಳಿದರು. ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದ ಅಂಗಳಕ್ಕೆ ಬಂದಿಳಿದವರೇ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಸಾರ್ವಜನಿಕರಿಗೆ ಪತ್ರಿಕೋ ದ್ಯಮದ ವಿಚಾರಗಳನ್ನು ತಿಳಿಸುವ ಉಮೇದಿನಿಂದ ಕನ್ನಡ ಪತ್ರಿಕಾ ಅಭಿಸರಣ ಸಂಸ್ಥೆಯನ್ನು ಸ್ಥಾಪಿಸಿದ್ದು ಒಂದು ಉತ್ತಮ ಕಾರ್ಯ ಎನ್ನಬಹುದು.
ಡಾ. ಶ್ರೀನಿವಾಸ ಹಾವನೂರ ಅವರ ಜೀವನದ ಸಂಕ್ಷಿಪ್ತ ಅವಲೋಕನ:
*ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ 1928ರಲ್ಲಿ ಜನನ.
*ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಣೆ.
*1984 ರಲ್ಲಿ ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದರು.
*1986ರಲ್ಲಿ ಬಾಂಬೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದರು.
*ಮಂಗಳೂರಿಗೆ ಹಿಂದುರಿಗಿ ಬಾಸಿಲ್ ಮಿಷನ್ ಕಾಲೇಜ್ ನಲ್ಲಿ ಸಂಶೋಧನೆ.
* ಗ್ರಂಥಪಾಲಕ, ಪ್ರಾಧ್ಯಾಪಕ, ಸಂಶೋಧಕರಾಗಿ ಮುಂಬಯಿ, ಮಂಗಳೂರು, ಪುಣೆ, ಬೆಂಗಳೂರುಗಳಲ್ಲಿ ದೀರ್ಘ ಕಾಲದ ವಾಸ್ತವ್ಯ
* ರಾಜ್ಯೋತ್ಸವ, ನಾಡೋಜ, ಆಳ್ವಾಸ್ ನುಡಿಸಿರಿ, ಮುಳಿಯ ತಿಮ್ಮಪ್ಪಯ್ಯ, ಸಂದೇಶ ಪ್ರತಿಷ್ಠಾನ,ಚಿದಾನಂದ ಪ್ರಶಸ್ತಿ ಪುರಸ್ಕೃತರು.
* ಪುಣೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
* ರಾಜ್ಯ ಸಾಹಿತ್ಯ ಅಕಾಡೆಮಿ, ರಾಜ್ಯ ಇತಿಹಾಸ ಮಹಾ ಪರಿಷತ್ ಗೌರವ.
*65ಕ್ಕೂ ಹೆಚ್ಚು ಕೃತಿ ರಚನೆ, 'ಹೊಸಗನ್ನಡದ ಅರುಣೋದಯ' ಮಹತ್ವದ ಕೃತಿ.












Click it and Unblock the Notifications