‘ಸಾಹಿತ್ಯ ಸಾರಥಿ’ಹರಿಕೃಷ್ಣ ಪುನರೂರು
‘ಸಂಘಟನೆ’ ಶಕ್ತಿಯೇ ಪುನರೂರು ಅವರ ಗುರಾಣಿ. ಪುನರೂರು ಅವರಿಗೆ ಕೆಲಸ ಮಾಡಲು ಸಂಘಟನೆಗಳು ವೇದಿಕೆಗಳಿಗೆ ಮಿತಿಯೂ ಕಾಣುವುದಿಲ್ಲ . ಈ ಸಾಲಿಗೆ ಹೊಸ ಸೇರ್ಪಡೆ- ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಟ್ಟ.
ಮೂಲ್ಕಿ ಬಳಿಯ ಪುನರೂರು ಮೂಲದ ಹರಿಕೃಷ್ಣ , ಪುನರೂರಿನಿಂದ ಬಿಜಾಪುರದ ಬಡ ಕುಟುಂಬದವರೆಗೆ ಅಭಿವೃದ್ಧಿ ಕಾರ್ಯಗಳ ಚಟುವಟಿಕೆಗಳನ್ನು ಕೈಗೆತ್ತಿಕೊಂಡವರು. ‘ಯಥಾನುಶಕ್ತಿ ಕೆಲಸ ಮಾಡುವುದು ನಮ್ಮ ಧರ್ಮ ’ ಅಂತ ಅಚ್ಚಾ ಧರ್ಮದರ್ಶಿಗಳ ಶೈಲಿಯಲ್ಲಿ ಮಾನಾಡುತ್ತಾ ಸಾಹಿತ್ಯ ಸಂಘಟನೆಯ ಕಾರ್ಯಗಳಿಗೆ ಹೆಗಲು ನೀಡಿದವರು.
ದಕ್ಷಿಣ ಕನ್ನಡದ ದೇವಳಗಳಲ್ಲಿ , ಶಾಲೆ ಕಾಲೇಜುಗಳಲ್ಲಿ, ಕೊಂಕಣಿ, ತುಳು ಸಾಹಿತ್ಯ ಅಕಾಡೆಮಿಗಳಲ್ಲಿ ಹರಿಕೃಷ್ಣ ಪುನರೂರು ಎಂದರೆ ‘ಓಹ್ ಅವರಾ... ನಮ್ಮ ಶಾಲೆಗೆ ಸಭಾಂಗಣ ಮಾಡಿಸಿಕೊಟ್ಟಿದ್ದಾರೆ, ನಮ್ಮ ಅಕಾಡಮಿಯ ಪುಸ್ತಕ ಮುದ್ರಿಸಿಕೊಟ್ಟಿದ್ದಾರೆ... ಮೊನ್ನೆಯಷ್ಟೇ ನನ್ನ ಮಗನಿಗೆ ಸಮವಸ್ತ್ರ ಕೊಡಿಸಿದರು....’ ಹೀಗೆ ಪುನರೂರು ವ್ಯಾಪ್ತಿ ದೊಡ್ಡದು.
ಕನ್ನಡ- ಪುಸ್ತಕ- ಪರಿಸರ ಎಲ್ಲ ಕಡೆ ಸಂದವರು
ಪ್ರಸ್ತುತ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೀಠದಲ್ಲಿರುವ ಪುನರೂರು, 50ಕ್ಕೂ ಹೆಚ್ಚು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದವರು ಅಂತ ಆಫಿಶಿಯಲ್ ಆಗಿ ಹೇಳುವುದಕ್ಕಿಂತ ಹೆಚ್ಚು ಕನ್ನಡಕ್ಕಾಗಿ ದುಡಿದವರು ಅನ್ನುವುದು ಹೆಚ್ಚು ಸೂಕ್ತ .
ಕನ್ನಡವೊಂದೇ ಸಲ್ಲಬೇಕು ಎಂಬ ಧೋರಣೆಯನ್ನು ಅವರು ಎಂದೂ ಅಪ್ಪಿಕೊಂಡವರಲ್ಲ. ಕರಾವಳಿಯ ಕೊಂಕಣಿ, ತುಳುನಾಡಿನ ತುಳು ಸಾಹಿತ್ಯ ಅಭಿವೃದ್ಧಿಗೆ ಭೂಮಿಕೆಯನ್ನು ಹಸನಾಗಿಸಿಕೊಟ್ಟ ಹರಿಕೃಷ್ಣ ಎಂಬ ವ್ಯಕ್ತಿಯೇ ಸಾಹಿತ್ಯ ಬೆಳೆಗೆ ಸಮೃದ್ಧ ಪ್ರೋತ್ಸಾಹ. ಪುಸ್ತಕವೊಂದು ಪ್ರಕಟಣೆಯನ್ನು ಕಾಣಬೇಕಿದ್ದರೆ ಬರೆದಾತ ಪಡಬೇಕಾದ ಪಾಡು ಪುನರೂರು ಅವರಿಗೆ ಗೊತ್ತಿದೆ. ಎಷ್ಟೋ ಉದಯೋನ್ಮುಖ ಬರಹಗಾರರ ಪುಸ್ತಕಗಳು ಅವರ ನೆರವಿನಿಂದ ಅಚ್ಚಾಗಿವೆ. ಸಾಹಿತ್ಯ ಸಮ್ಮೇಳನಗಳಿಗೆ ಬಂದರೆ ಅಚ್ಚುಕಟ್ಟುತನಕ್ಕೆ ಹೆಸರಾದ ಮಂಗಳೂರಿನಲ್ಲಿ ನಡೆದ 66ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನ ರೂವಾರಿ ಇವರೇ.
ಪರಿಸರ ಚಟುವಟಿಕೆಗಳಲ್ಲೂ ಪುನರೂರು ಅವರದ್ದು ಎದ್ದು ಕಾಣುವ ಹೆಸರು. ಸಾಲು ಮರಗಳು, ಪರಿಸರ ಪರ ಹೋರಾಟಗಳು, ಬಹುರಾಷ್ಟ್ರೀಯ ಕಂಪೆನಿಗಳ ಯದ್ವಾ ತದ್ವಾ ಕೆಲಸಗಳನ್ನು ವಿರೋಧಿಸುವವರ ಬೆನ್ನು ಚಪ್ಪರಿಸಿದ ಪುನರೂರು, ಶಿವರಾಮ ಕಾರಂತರಿಂದ ‘ಪರಿಸರ ಪ್ರೇಮಿ’ ಪುರಸ್ಕಾರದ ಗರಿ ಮುಡಿಗೇರಿಸಿಕೊಂಡವರು. ವರನಟ ರಾಜ್‌ಕುಮಾರ್‌ರಿಂದ ‘ಕನ್ನಡದ ಕಣ್ಮಣಿ’ ಬಿರುದು ಬಗಲಿಗೇರಿಸಿಕೊಂಡವರು.
ವಿದ್ಯಾರ್ಥಿಗಳ ಹರಕೆಗಳೆಷ್ಟಿವೆಯೋ ತಿಳಿಯದು
ಮುಲ್ಕಿಯಲ್ಲಿ ಐಟಿಐ ಸ್ಥಾಪನೆ, ಶಾರದಾ ವಿದ್ಯಾಲಯದ ಅಧ್ಯಕ್ಷರಾಗಿದ್ದುಕೊಂಡು ಹೈಸ್ಕೂಲ್ ಸ್ಥಾಪನೆ, ಉಪ್ಪೂರು, ತೋಕೂರುಗಳಲ್ಲಿ ಮಾಧ್ಯಮಿಕ ಶಾಲೆಗಳ ಆರಂಭ .... ಇಂತಹ ನೂರಾರು ಸಾಧನೆಗಳ ನಡುವೆಯೂ, ಮೂಲ್ಕಿಯ ಪೆಟ್ರೋಲ್ ಬಂಕ್‌ನಲ್ಲಿ ಪೂರ್ವಾ ಹ್ನ ಹೊತ್ತು ಕುಳಿತುಕೊಳ್ಳುವ ಹರಿಕೃಷ್ಣರ ಬಳಿ ಬಂದು ಫೀಸು ಇಸಿದುಕೊಂಡು ಹೋಗಿ ಡಿಗ್ರಿ ಕಲಿತವರೆಷ್ಟು ಮಂದಿಯೋ ಗೊತ್ತಿಲ್ಲ. ಯೂನಿಫಾರ್ಮ್ ಪಡಕೊಂಡು ಹೋದ ವಿದ್ಯಾರ್ಥಿಗಳ ಹರಕೆಗಳೆಷ್ಟಿವೆಯೋ ತಿಳಿಯದು. ಹಾಗೆ ಮಂಗಳೂರಿನ ಸ್ವಾಗತ ಹೋಟೆಲಿಗೆ ಬಂದು ಮಗಳ ಮದುವೆ ಖರ್ಚು ತೆಗೆದುಕೊಂಡು ಹೋದವರ ಪಟ್ಟಿ ಇಲ್ಲ. ಮಕ್ಕಳಿಗೆ ಸಂಗೀತ ನೃತ್ಯ ನಾಟಕ ಕಲಿಸುತ್ತಿರುವ ‘ರಾಗತರಂಗ’ ಸಂಸ್ಥೆಯ ಸ್ಥಾಪಕ ಮತ್ತು ಪ್ರಸ್ತುತ ನಿರ್ವಾಹಕ ಕೂಡ.
ಸಮಸ್ಯೆಗಳ ಸುಳಿಯಲ್ಲಿರುವ ಪರಿಷತ್ತಿಗೆ ಹೊಸ ನಾವಿಕ
ಉದ್ಯಮಿಯಾಗಿ ಮಂಗಳೂರಿನ ಕಂಪೆನಿ- ಸಂಸ್ಥೆಗಳ ಸರ್ವ ಸದಸ್ಯ ಸಭೆಯಲ್ಲಿ ಪುನರೂರರ ಹೆಸರು ಉಲ್ಲೇಖವಾಗುತ್ತದೆ. ಮಂಗಳೂರಿನ ಯೋಗ ಪೀಠ, ಶ್ರೀದೇವಿ ನೃತ್ಯ ಕೇಂದ್ರಗಳ ವ್ಯವಸ್ಥಿತ ನಿರ್ವಹಣೆ. ಕರ್ನಾಟಕ ಬ್ಯಾಂಕ್ ಅಧ್ಯಕ್ಷಗಿರಿಯಲ್ಲಿ ಕೆಲಸ, ಭಾರತ ಸೇವಾಶ್ರಮ, ಅನಾಥಾಶ್ರಮಗಳನ್ನು ನಿರ್ವಹಿಸಿದ, ನಿರ್ವಹಿಸುತ್ತಿರುವ ಹರಿಕೃಷ್ಣ ಪುನರೂರು ಎಂಬ ಸಂಘಟಕ ಪ್ರತಿಭಯ ಕೈಗೆೆ ಈ ಹೊತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಲಗಾಮು ಸಿಕ್ಕಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಪರಿಷತ್ತಿಗೆ ಉತ್ತಮ ಸಂಘಟಕನೊಬ್ಬ ಕಾಲಿಟ್ಟಾಗಿದೆ. ಹರಿವ ನದಿಯ ಯಾವುದೋ ಮೂಲೆಯಲ್ಲಿ ಸಿಕ್ಕಿ ಹಾಕಿಕೊಂಡು ನಿಂತ ದೋಣಿಯಂತಿರುವ ಪರಿಷತ್ತನ್ನು ಪುನರೂರು ಉನ್ನತಿಯತ್ತ ಸಾಗಿಸುತ್ತಾರೆಯೇ? ಎನ್ನುವ ಪ್ರಶ್ನೆ ಈಗ ಕನ್ನಡಿಗರ ಎದುರಿಗಿದೆ. ‘ಕನ್ನಡ ರಥ ಎಳೆಯಲಿಕ್ಕೆ ನಾನು ತಯಾರು’ ಎಂದು ಪುನರೂರು ಅವರೇನೋ ಗೆಲುವಿನ ಹುಮ್ಮಸ್ಸಿನಲ್ಲಿ ಹೇಳಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications