ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ

By ಮಪ
|
Google Oneindia Kannada News

ಆಕೆಯದ್ದು ನಾಲ್ಕು ವರ್ಷಗಳ ನಿರಂತರ ಹೋರಾಟ. ಆಕೆಗೆ ನ್ಯಾಯ ನೀಡಲು ಇಲ್ಲಿ ಯಾವ ನ್ಯಾಯಾಧೀಶರಿಲ್ಲ. ಪೊಲೀಸರು ದೂರು ದಾಖಲು ಮಾಡಿಕೊಂಡಿಲ್ಲ. ಆದರೆ ಹೋರಾಟ ಮಾತ್ರ ನಿರಂತರ. ಅದಕ್ಕೆ ಕೊನೆಯೇ ಇಲ್ಲ.

ಮಾಲೀಕನ ಪ್ರೀತಿಗೆ ಮರುಗುವ ಶ್ವಾನ, ಒಡೆಯನ ಸಾವಲ್ಲಿ ಕಣ್ಣೀರು ಸುರಿಸುವ 'ನಾರಾಯಣ' ನನ್ನು ಕಂಡಿದ್ದೇವೆ. ಹಾವಿನ ದ್ವೇಷ 12 ವರುಷ ಎಂಬ ಮಾತನ್ನು ಕೇಳಿದ್ದೇವೆ. ಆದರೆ ನಮ್ಮ ಈ ನೈಜ ಕಥೆಯ ಕಥಾನಾಯಕ(ಕಿ) ಒಂದು ಹಸು.

ಜಗತ್ತಿಗೆ ಸತ್ಯದ ಸಂದೇಶ ಸಾರಿದ ಪುಣ್ಯಕೋಟಿಯ ಕಥೆ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಈ ಪುಣ್ಯಕೋಟಿಯದ್ದು ಕೊಂಚ ಭಿನ್ನವಾದ ವರ್ತನೆ. ನ್ಯಾಯದ ಸಂದೇಶವನ್ನು ಜಗತ್ತಿಗೆ ಸಾರಹೊರಟ ಪುಣ್ಯಕೋಟಿ ಇದು.

ದೇಶಾದ್ಯಂತ ಗೋಮಾಂಸ ವಿವಾದ ತಾರಕಕ್ಕೆ ಏರಿದ್ದರೆ ಇಲ್ಲೊಂದು ಹಸು ನ್ಯಾಯಕ್ಕಾಗಿ ವರ್ಷಗಳಿಂದ ಹೋರಾಡುತ್ತಿದೆ. ತನ್ನ ಕಂದನನನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಲೇ ಇದೆ. ಆಕ್ರೋಶ ಹೊರಹಾಕುತ್ತಲೇ ಇದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹಸುವೊಂದು ಕಳೆದ ನಾಲ್ಕು ವರ್ಷದಿಂದ ಮೌನ ಪ್ರತಿಭಟನೆ ನಡೆಸಿಕೊಂಡೆ ಬಂದಿದೆ. ತನ್ನ ಕರುವನ್ನು ಕೊಂದ ಬಸ್ ಅನ್ನು ಅಡ್ಡ ಹಾಕುವ ಹಸು ಯಾವ ಟೈರ್ ಕರುವಿನ ಮೇಲೆ ಹತ್ತಿತ್ತೋ ಅದೇ ಜಾಗಕ್ಕೆ ತಿವಿಯುತ್ತದೆ. ಬಸ್ ಮುಂದೆ ಹೋಗದಂತೆ ತಡೆಯುತ್ತದೆ.[ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?]

cow

ನಾಲ್ಕು ವರ್ಷದ ಹಿಂದೆ, ಶಿರಸಿ-ದಾಂಡೇಲಿ ಡಿಪೋದ ಕೆ.ಎ.-31 ಎಫ್-857 ಸಂಖ್ಯೆಯ ಕರ್ನಾಟಕ ವಾಯುವ್ಯ ಸಾರಿಗೆ ಬಸ್ ವೇಗವಾಗಿ ಬರುತ್ತಿತ್ತು. ಶಿರಸಿಯ ಶಿವಾಜಿ ಚೌಕದ ಬಳಿಯಲ್ಲಿ ಬಸ್ ಆಕಳ ಕರುವಿನ ಮೇಲೆ ಹತ್ತಿತ್ತು. ಅನತಿ ದೂರದಲ್ಲಿ ಇದ್ದ ತಾಯಿ ಹಸು ಕಂದನ ಸಾವನ್ನು ಕಣ್ಣಾರೆ ಕಂಡಿತ್ತು. ಅಂದಿನಿಂದಲೇ ಹಸುವಿನ ಮೌನ ಹೋರಾಟ ಆರಂಭವಾಯಿತು.[ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಬಸ್‌ ಬಣ್ಣ ಬದಲಿಸಿದರು
ಹಸು ವರ್ತನೆಯಿಂದ ಕಂಗಾಲಾದ ಕೆಎಸ್ ಆರ್ ಟಿಸಿ ಸಿಬ್ಬಂದಿ ಕೆಲ ದಿನ ಬಸ್ ನ್ನು ಡಿಪೋದಲ್ಲಿಟ್ಟರು. ನಂತರ ಬಣ್ಣ ಬದಲಾಯಿಸಿ ಚಾಲನೆಗೆ ಬಿಟ್ಟರು. ಆದರೂ ಹಸು ಮಾತ್ರ ಬಸ್ ನ ಮೇಲಿನ ದ್ವೇಷವನ್ನು ಬಿಟ್ಟಿಲ್ಲ. ಈ ಬಸ್ ಕರುವನ್ನು ಕೊಂದ ಜಾಗಕ್ಕೆ ಬಂದ ತಕ್ಷಣ ತನ್ನ ಮೂಕ ಹೋರಾಟ ಆರಂಭ ಮಾಡುತ್ತದೆ, ಬಸ್ಸಿಗೆ ಅಡ್ಡಲಾಗಿ ನಿಲ್ಲುತ್ತದೆ. ತನ್ನ ಕಂದನಿಗೆ ಆದಂತೆ ಬೇರೆಯವರಿಗೆ ಆಗಬಾರದು ಎಂಬ ಕಾಳಜಿಯೂ ಇದರ ಹಿಂದೆ ಇದೆಯೇ? ಮೂಕ ಪ್ರಾಣಿ ಬಳಿ ಕೇಳುವವರು ಯಾರು? [ಕಲ್ಲು ಹೃದಯವನ್ನು ಕರಗಿಸಬಲ್ಲ ಚರಮಗೀತೆ ವಿಡಿಯೋ]

ಶಿರಸಿ ನಾಗರಿಕರಿಗೆ ಹೊಸದಲ್ಲ
ಶಿರಸಿ ನಾಗರಿಕರಿಗೆ ಮತ್ತು ಕೊಲೆಗಾರ ಬಸ್ ನ ಚಾಲನೆ ಮಾಡುವ ಚಾಲಕರಿಗೆ ಇದು ಹೊಸದಾಗಿ ಉಳಿದಿಲ್ಲ. ಪ್ರತಿದಿನ ಶಿವಾಜಿ ಚೌಕದ ಬಳಿ ಬಂದ ತಕ್ಷಣ ಬಸ್ ನ್ನು ನಿಧಾನವಾಗಿಯೇ ಚಾಲನೆ ಮಾಡಲಾಗುತ್ತದೆ. ಹಸು ಬೇರೆ ಯಾವ ವಾಹನಗಳನ್ನು ಅಡ್ಡ ಹಾಕಲ್ಲ.

ಗೋವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಿ, ಗೋ ಮಾಂಸ ಸೇವನೆ ಸರಿಯೇ? ತಪ್ಪೆ? ಅಸಹಿಷ್ಣುತೆ! ಮುಂದಾದ ಪದ ಬಳಕೆ ಮಾಡುವವರಿಗೆ ಈ ಆಕಳು ತನಗೂ ಒಂದು ಮನಸಿದೆ. ನನ್ನ ಕಂದನ ಸಾವಿಗೆ ನ್ಯಾಯ ಕೊಡಿ ಎಂದು ಬೊಬ್ಬಿಡುತ್ತಿರುವ ಮೌನ ಕೂಗು ಎಂದಿಗೆ ಕಿವಿಗೆ ಬೀಳುವುದೊ???

ಹಸುವಿನ ಮೌನ ಹೋರಾಟದ ವಿಡಿಯೋ ನೋಡಿಕೊಂಡು ಬನ್ನಿ

English summary
If you have heart this story will touch your soul, will leave you in tears. A cow has been blocking the bus (driver) who had killed it's child month ago in an accident. Though it has no voice to protest against the killer, it is asking for justice everyday in Sirsi, Uttaka Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X