ಹಾವೇರಿ ಶಾಸಕ ಬಸವರಾಜ್ ಶಿವಣ್ಣಗೆ ಲಘು ಹೃದಯಾಘಾತ, ಹುಬ್ಬಳ್ಳಿ ಆಸ್ಪತ್ರೆಗೆ ದಾಖಲು
ಹಾವೇರಿ: ಹಾವೇರಿ ಶಾಸಕ ಬಸವರಾಜ್ ಶಿವಣ್ಣಗೆ ಲಘು ಹೃದಯಾಘಾತವಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಶಿವಣ್ಣನವರಿಗೆ ಲಘು ಹೃದಯಾಘಾತವಾಗಿದೆ. ಬಸವರಾಜ್ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಹಾವೇರಿಯಲ್ಲಿ ಕಾಂಗ್ರೆಸ್‌ನ ಸಾಧನಾ ಸಮಾವೇಶ ನಡೆಯುತಿತ್ತು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಶಿವಣ್ಣನವರಿಗೆ ಎದೆಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಕಾಂಗ್ರೆಸ್‌ನ ನಾಯಕರು ಹಾವೇರಿಯಿಂದ ಹುಬ್ಬಳ್ಳಿಗೆ ತೆರಳಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಧನ ಸಮಾವೇಶ ಹಿನ್ನೆಲೆ ಹಾವೇರಿಯಲ್ಲಿ ಕಾಂಗ್ರೆಸ್ ನಾಯಕರು ಸೇರಿದ್ದರು. ವಿಷಯ ತಿಳಿದ ಬೆನ್ನಲ್ಲೇ ಶಾಸಕರ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಹಾವೇರಿ ಶಾಸಕ ಬಸವರಾಜ್ ಶಿವಣ್ಣ ಆರೋಗ್ಯ ಸ್ಥಿರ
ಇನ್ನು ಲಘು ಹೃದಯಾಘಾತ ಸಂಭವಿಸಿರುವ ಹಾವೇರಿ ಜಿಲ್ಲೆಯ ಶಾಸಕ ಬಸವರಾಜ್ ಶಿವಣ್ಣನವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಕೂಡಲೇ ಸೇರಿಸಲಾಗಿದೆ. ಶಾಸಕರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಸಾಧನಾ ಸಮಾವೇಶಕ್ಕೆ ಆಹ್ವಾನಿಸಿದ್ದ ವಿಡಿಯೋ ವೈರಲ್
ಇನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ನೀ. ಶಿವಣ್ಣನವರ ಅವರಿಗೆ ಹೃದಯಾಘಾತ ಸಂಭವಿಸಿದ ಬೆನ್ನಲ್ಲೇ ಅವರು ಸಾಧನಾ ಸಮಾವೇಶ / ಸಮರ್ಪಣಾ ಸಮಾವೇಶಕ್ಕೆ ಕಾರ್ಯಕರ್ತರನ್ನು ಆಹ್ವಾನಿಸಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾವೇರಿಯಲ್ಲಿ ಫೆಬ್ರವರಿ 14ರಂದು ಸಾಧನಾ ಸಮಾವೇಶ ಇದೆ. ನಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಒಂದು ಸಾವಿರ ದಿನಗಳನ್ನು ಪೂರೈಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಸಾವಿರ ದಿನಗಳಲ್ಲಿ ಪೂರೈಸಿದೆ.
ಸಾಧನಾ ಸಮಾವೇಶವನ್ನು ಹಾಗೂ ಹಾವೇರಿ ಜಿಲ್ಲೆಯ ಬಡವರು ಸುಮಾರು ದಿನಗಳಿಂದ ಸರ್ಕಾರಿ ಜಾಗ, ಇನ್ಯಾವುದೇ ಜಾಗ, ಸರ್ವೇ ನಂಬರ್‌ಗಳಲ್ಲಿ ಕಟ್ಟಿಕೊಂಡಿರುವ ಮನೆಗಳಿಗೆ ಅವರಿಗೇ ಆದ ಸ್ವಂತ ಜಾಗ ಇಲ್ಲ. ಇದು ಈ ಭಾಗದ ಬಡವರ ಆಶಯವಾಗಿತ್ತು. ತಮ್ಮದೇ ಸ್ವಂತ ಜಾಗಬೇಕು ಎಂದು ಈ ಭಾಗದ ಬಡವರು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಅವರಿಗೆ ಭೂಮಾಲಿಕತ್ವ ಕೊಡುವಂತಹ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದು ಬಸವರಾಜ ನೀ. ಶಿವಣ್ಣನವರ ಅವರು ಹೇಳಿದ್ದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications