ಉತ್ತರ ಕನ್ನಡದ ಜೇನುಗಳ ಜಾತ್ರೆಗೆ ಹೋಗಿದ್ರಾ?

ನೀವು ಎಣಿಸುತ್ತಿರುವಂತೆಯೇ ಕನಿಷ್ಠವೆಂದರೂ ಎರಡು ಹೊಸ ಜೇನು ಸಂಸಾರಗಳು ಅದೇ ಮರದ ಯಾವುದೋ ಟೊಂಗೆಯಲ್ಲಿ ಗೂಡು ಹೆಣೆಯಲು ಜಾಗವರಸುತ್ತಿರುತ್ತವೆ. ನಂಬಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಶತಶತಮಾನಗಳಿಂದ ಬೇಡ್ತಿ ಸೇತುವೆಯ ಸಮೀಪದ ಈ ಮರಕ್ಕೆ ಅಸಂಖ್ಯಾತ ಜೇನು ಗೂಡುಗಳು ಕಟ್ಟುತ್ತವೆ. ಸೋಜಿಗವೆಂದರೆ, ಬಿಡುವೇ ಇಲ್ಲದಂತೆ ವರ್ಷಪೂರ್ತಿ ಗೂಡು ಹೆಣೆಯುತ್ತಲೇ ಇರುತ್ತವೆ!
ಪ್ರಕೃತಿ ವೈಚಿತ್ರ್ಯ : ಬೇಡ್ತಿ ಸೇತುವೆಯನ್ನು ದಾಟಿ ಶಿರಸಿಯೆಡೆಗೆ ಸಾಗುವಲ್ಲಿ ಸೇತುವೆಯಿಂದ ಸ್ವಲ್ಪೇ ದೂರದಲ್ಲಿ ರಸ್ತೆಯ ಎಡ ಭಾಗದಲ್ಲಿಯೇ ಗೋಚರಿಸುತ್ತದೆ ಈ "ಜೇನ್ಮರ"ದ ಸೋಜಿಗ. ಅಲ್ಲಿ ಸಂಸಾರ ಹೂಡಿರುವ ನೂರಕ್ಕೂ ಅಧಿಕ ಜೇನುಗೂಡುಗಳನ್ನು ನೋಡಿ ಕಣ್ತುಂಬಿಕೊಳ್ಳುವುದೇ ಮುದ. ಸುತ್ತಲಿನ 2-3 ಕಿ.ಮೀ ವ್ಯಾಪ್ತಿಯಲ್ಲಿಯೂ ಜೇನಿನ ಮಧುರ ಘಮಘಮ. ಇದರೊಟ್ಟಿಗೆ ಪಕ್ಕದಲ್ಲಿಯೇ ಇರುವ ಇನ್ನೊಂದು ಮರವನ್ನು ಕೂಡ ಜೇನುಗಳು ಆಶ್ರಯಿಸಿ ಗೂಡು ಕಟ್ಟುತ್ತವೆ. ಅಂತೆಯೇ ತಾಲೂಕಿನ ಸವಣಗೇರಿ, ಕಮ್ಮಾಣಿ, ಲಾಲಗುಳಿಯ ಕಗ್ಗಾಡುಗಳಲ್ಲಿಯೂ ಇಂಥಹುದೇ ಜೇನ್ಮರಗಳು ಕಂಡುಬರುತ್ತವೆಯಾದರೂ ಜೇನುಗಳ ಸಂಖ್ಯೆ ಕಡಿಮೆ.
ಈ ಜೇನುಗಳು ಸೇಫ್! : ಕಳೆದೊಂದು ದಶಕದೀಚೆಗೆ ಜೇನುಕಂದುಗಳಿಗೆ ಕಳ್ಳರ ಕಾಟ ಹೆಚ್ಚೆಂದೇ ಹೇಳಬೇಕು. ಚಿಕ್ಕಪುಟ್ಟ ಜೇನುಗಳನ್ನೂ ಅವೈಜ್ಞಾನಿಕವಾಗಿ ಕೊಯ್ದು ಸಂಗ್ರಹಿಸುತ್ತಾರೆ. ಆದರೆ ಈ ಮರವನ್ನಾಶ್ರಯಿಸಿದ ಜೇನುಗಳಿಗೆ ಜೀವಭಯವಿಲ್ಲ. ಕಾರಣ, ಮರದ ಏರಲಾಗದ ಎತ್ತರ ಹಾಗೂ ಮರದ ಆಕಾರ. ಉಪಾಯದಿಂದ ಅಕ್ಕ-ಪಕ್ಕದ ಮರವನ್ನೇರಿ ಮುಖ್ಯ ಜೇನು ಮರಕ್ಕೆ ಹಗ್ಗ ಎಸೆದು ಸರ್ಕಸ್ ಮಾಡುವವರೂ ಇಲ್ಲ.
ಸುತ್ತಲಿನ ಪ್ರದೇಶಗಳಲ್ಲಿ ಈ ಮರವನ್ನು ದೇವರ ಮರವೆಂದೇ ಕರೆಯಲಾಗುತ್ತದೆ. ಹಾಗಾಗಿ ಎಂಥಹ ಅನುಭವೀ ಜೇನು ಕೊಯ್ಲುಗಾರನೂ ಈ ಮರವನ್ನು ಕತ್ತೆತ್ತಿ ನೋಡಿಯಾನೇ ಹೊರತು ಗೂಡಿಗೆ ಕೈಹಾಕುವ ಸಾಹಸ ಮಾಡಲಾರ. ಹಿರಿಯರು ನೆನಪಿಸಿಕೊಳ್ಳುವಂತೆ ಹಿಂದೊಮ್ಮೆ ವ್ಯಕ್ತಿಯೊಬ್ಬ ಈ ಮರವನ್ನೇರಿ ಜೇನು ಕೊಯ್ಯಲು ಪ್ರಯತ್ನಿಸಿದ್ದ. ಇದಕ್ಕಾಗಿ ಆತ ತೆತ್ತ ಬೆಲೆ ಆತನದೇ ಪ್ರಾಣ! ಈ ಎಲ್ಲಾ ಕಾರಣಗಳಿಂದ ಈ ಜೇನುಗಳು ಸೇಫ್! ಇತ್ತೀಚಿನ ದಿನಗಳಲ್ಲಿ ಅರಣ್ಯ ಲಾಖೆ ಗುತ್ತಿಗೆ ಆಧಾರದಲ್ಲಿ ಈ ಜೇನುಗಳ ಕೊಯ್ಲಿಗೆ ಅನುಮತಿ ನೀಡಿದೆ.
ಹಾಗೆಯೇ ಈ ಮರಕ್ಕೆ ವರ್ಷದ ಎಲ್ಲ ಕಾಲದಲ್ಲಿಯೂ ಜೇನುಗಳ ಆಗಮನವಾಗುವದೂ ಮತ್ತೊಂದು ವಿಶೇಷ. ಹತ್ತಿರವೇ ನೀರಿನ ಲಭ್ಯತೆ, ಅನುಕೂಲಕರವಾದ ವಾತಾವರಣ, ದಟ್ಟ ಕಾಡು ಇವೆಲ್ಲವೂ ಈ ಮರಕ್ಕೆ ಇಷ್ಟೊಂದು ಜೇನುಗಳು ಗೂಡು ಕಟ್ಟಲು ಕಾರಣವೆಂದು ಹೇಳಬಹುದು. ಹಾಗಾಗಿಯೇ ಇಲ್ಲಿ ಪ್ರತೀ ವರ್ಷವೂ ಜೇನುಗಳ ಹಬ್ಬ. ಜೊತೆಗೆ ನೋಡಿ ಆಸ್ವಾದಿಸಿ ಕಣ್ತುಂಬಿಕೊಳ್ಳುವ ಕಂಗಳಿಗೂ!
;-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications