ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಲವ್ ಜಿಹಾದಿಗಳ ಹಾವಳಿ

|
Google Oneindia Kannada News

Love Jihad ramapant in Karnataka
ಬೆಂಗಳೂರು, ಅ. 13 : ಎಕೆ 47, ಸರಣಿ ಬಾಂಬ್ ಸ್ಫೋಟ, ಸೈಬರ್ ವಾರ್ ಹಳತಾಯ್ತು. ಈಗ ಏನಿದ್ದರೂ ಗಾಂಧಿಗಿರಿ. ಪ್ರೀತಿ'ಯೇ ಆಯುಧವಾಗುಳ್ಳ ಧರ್ಮ ಯುದ್ಧ (ಜಿಹಾದ್) ಕರ್ನಾಟಕದಲ್ಲಿ ಹರಡುತ್ತಿರುವ ಆಘಾತಕಾರಿ ಅಂಶ ಹೈಕೋರ್ಟ್‌ ಮುಖಾಂತರ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡದಲ್ಲಿ ಕೇಳಿ ಬಂದ ಈ ಲವ್ ಅಥವಾ ರೋಮಿಯೊ ಜಿಹಾದ್' ಮೂಲ ಕೇರಳ. ಇಲ್ಲಿನ ಒಂದು ವರ್ಗದ ಮುಸ್ಲಿಮರು ಇದನ್ನು ಸಂಘಟಿಸುತ್ತಿದ್ದಾರೆ ಕಾಸರಗೋಡು ಮೂಲಕ ಸಾಗಿಬಂದ ಇದರ ಮುಂದಿನ ಟಾರ್ಗೆಟ್ ಕೊಡಗು, ಬೆಳಗಾವಿ, ರಾಯಚೂರು ಹಾಗೂ ಚಾಮರಾಜನಗರ ಎನ್ನಲಾಗಿದೆ. ಕೇರಳ ಹೈಕೋರ್ಟ್, ಲವ್ ಜಿಹಾದ್‌ಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಸೆ.30ರಂದು ಕೇರಳ ಸರಕಾರಕ್ಕೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಪೋಷಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಖೆಡ್ಡಾ ಪ್ರೀತಿಯ ನೆಪದಲ್ಲಿ ಅನ್ಯ ಧರ್ಮಿಯರ ಅಂದರೆ ಹಿಂದು ಹುಡುಗಿಯರ ಮನ ಒಲಿಸಿ, ಮದುವೆ ನಂತರ ಇಸ್ಲಾಂಗೆ ಮತಾಂತರಗೊಳಿಸುವುದು. ಕೇರಳದ ಕೆಲ ಮದರಸಗಳಲ್ಲಿ ಈ ಚಟುವಟಿಕೆ ಕಂಡು ಬಂದಿದ್ದು, ಇದಕ್ಕೆ ವಿದೇಶಿ ಹಣ ಹರಿದು ಬರುತ್ತಿದೆ. ಲವ್ ಜಿಹಾದ್‌ನ ಮಂಚೂಣಿಯಲ್ಲಿರುವುದು ನಿರುದ್ಯೋಗಿ ಯುವಕರು.

ಸಣ್ಣ ಕೆಲಸದಲ್ಲಿದ್ದರೂ, ಶೋಕಿಲಾಲರಂತೆ, ಹಣವಂತರಂತೆ ಬಿಂಬಿಸಿಕೊಂಡು ಉದ್ಯೋಗಿ ಯುವತಿಯರಿಗೆ ಗಾಳ ಹಾಕುವುದು. ತಮ್ಮ ಧರ್ಮದ ಯುವತಿಯರ ಮೂಲಕ ಅನ್ಯ ಧರ್ಮೀಯರ ಪರಿಚಯ ಮಾಡಿಕೊಳ್ಳುತ್ತಾರೆ. ಕೆಲ ದಿನಗಳ ಪ್ರೀತಿ ನಂತರ ಮದುವೆ, ನಂತರ ಮತಾಂತರ. ಮುಂಬಯಿಯಲ್ಲಿ ಪ್ರಾಥಮಿಕ ತರಬೇತಿ ನಂತರ ಯುವ ಪಡೆಗೆ ಕಾಶ್ಮೀರದಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತದೆ ಎನ್ನಲಾಗಿದೆ.

ತರಬೇತಿಗೆ ಆಯ್ಕೆಯಾದವರು ಅನ್ಯ ಧರ್ಮದ ಯುವತಿಯನ್ನು ಮತಾಂತರಗೊಳಿಸಬೇಕೆಂದು ಷರತ್ತು ಒಡ್ಡಲಾಗುತ್ತದೆ. ವರದಿಗೆ ಆಗ್ರಹ ಲವ್ ಜಿಹಾದ್' ಚಟುವಟಿಕೆ ಕುರಿತು ಮೂರು ವಾರದಲ್ಲಿ ವರದಿ ನೀಡುವಂತೆ ಕೇರಳ ಹೈಕೋರ್ಟ್, ಸರಕಾರಕ್ಕೆ ನಿರ್ದೇಶಿಸಿದೆ. ಮತಾಂತರಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯದ ಅಭಿಪ್ರಾಯವನ್ನೂ ಪೀಠ ಕೇಳಿದೆ. ಯುವತಿಯರ ಅಪಹರಣ ಹಾಗೂ ಮತಾಂತರಕ್ಕೆ ಸಂಬಂಧಿಸಿದಂತೆ ಇಬ್ಬರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾ.ಕೆ.ಟಿ.ಶಂಕರನ್ ಅವರ ಪೀಠ ಈ ನಿರ್ದೇಶನ ನೀಡಿದೆ.

ಇಂತಹ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಘಟನೆ ಯಾವುದು, ಇದಕ್ಕೆ ಹಣ ಎಲ್ಲಿಂದ ಹರಿದುಬರುತ್ತಿದೆ, ಎಷ್ಟು ಮಂದಿ ಮತಾಂತರವಾಗಿದ್ದಾರೆ, ಇದು ಅಖಿಲ ಭಾರತ ಸಂಘಟನೆಯೇ? ಯಾವುದಾದರೂ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆಯೇ ಎಂಬ ಮಾಹಿತಿ ನೀಡುವಂತೆ ಪೀಠ ಆದೇಶಿಸಿರುವುದು ಪ್ರಕರಣದ ತೀವ್ರತೆಯನ್ನು ತೋರಿಸುತ್ತಿದೆ.

ರಾಜ್ಯದ ಪ್ರಕರಣ ಚಾಮರಾಜನಗರ ಕುವೆಂಪು ನಗರದ ಸೆಲ್ವರಾಜ್, ತಮ್ಮ ಮಗಳು ಕಳೆದ ಆ. 8ರಂದು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರು. ಅಸ್ಗರ್ ಎಂಬಾತ ಆ.15ರಂದು ಫೋನ್ ಮಾಡಿ, ನಿಮ್ಮ ಪುತ್ರಿಯನ್ನು ಮದುವೆಯಾಗುವುದಾಗಿ ಹೇಳಿದ್ದಾನೆ. ಅನಂತರ ಕೆ.ಪಿ. ಪರಿತ್ ಕುಟ್ಟಿ ಎಂಬುವರು ಇನ್ನು ಮುಂದೆ ನೀವು ಮಗಳೊಂದಿಗೆ ಮಾತನಾಡುವಂತಿಲ್ಲ. ಆಕೆ ಮತಾಂತರಗೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಮಗಳನ್ನು ಹುಡುಕುತ್ತ ಪೊಲೀಸರೊಂದಿಗೆ ಕೇರಳದ ಕೊಟ್ಟಾಯಂನ ಎರತ್ತುಪಟ್ಟಿಗೆ ತೆರಳಿದಾಗ ತಂಡವೊಂದು ಇವರನ್ನು ಹಿಂಬಾಲಿಸಿತು. ವಿಧಿಯಿಲ್ಲದೆ ಅಲ್ಲಿಂದ ಹಿಂದಿರುಗಿದೆವು ಎನ್ನುತ್ತಾರೆ ಸೆಲ್ವರಾಜ್.

ಸೆಲ್ವರಾಜ್ ಮಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪೀಠ, ಲವ್ ಜಿಹಾದ್ ಬಗ್ಗೆ ಮಾಹಿತಿ ಇರುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದು ನಿರ್ದೇಶಿಸಿ, ಅರ್ಜಿದಾರರ ಮಗಳನ್ನು ಹಾಜರು ಪಡಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿದೆ.

(ಸ್ನೇಹಸೇತು - ವಿಜಯ್ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X