99736karnatakaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg99736karnatakaಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ/recipe/shelf/2006/311006chilli_powder.htmlಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆ ವಿಧಾನ ಇಲ್ಲಿದೆ.ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ 6224http://kannada.oneindia.com/img/2009/07/14-redchillies1.jpg99736karnatakaಗೋಕಾಕ್‌ ಕನ್ನಡದ ಪೀಕಾಕ್‌/literature/jnanapeetha/2001/gokak.htmlಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂದವರು ಎಲ್ಲವೂ ಆಗಿದ್ದು ಎಲ್ಲಿಯೂ ನಿಲ್ಲದಂತಿದ್ದರು. *ಸತ್ಯವ್ರತ ಹೊಸಬೆಟ್ಟುವಿನಾಯಕ ಕೃಷ್ಣ ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕರು ಹುಬ್ಬೇರಿಸಿದ್ದುಂಟು. ವೈಎನ್ಕೆಯವರಂತೂ ಜ್ಞಾನವಿರುವುದು ಪೀಠದಲ್ಲಲ್ಲ , but at the other end ಎಂದು ಗೇಲಿ ಮಾಡಿದ್ದೂ ಉಂಟು. ಇದು ತನ್ನನ್ನು ಕುರಿತಾದ ತಮಾಷೆ 7766http://kannada.oneindia.com/img/2009/08/03-vk-gokak4.jpg99736karnatakaಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg99736karnatakaಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg191140mediaಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ/mixed-bag/lifestyle/2009/0208-valentines-day-celebrations-ktaka-sriram-sene.htmlವ್ಯಾಲೆಂಟೈನ್ ಡೇ ಇನ್ನೇನು ಸಮೀಪಿಸುತ್ತಿದೆ. ಅನೇಕ ದಿನಗಳಿಂದ ಮುಚ್ಚಿಟ್ಟಿಕೊಂಡಿದ್ದು ಪ್ರೀತಿ ನಿವೇದಿಸಿಕೊಳ್ಳಲು ಇದೊಂದು ಸಕಾಲ. ದೇಶದ್ಯಾಂತ ಯುವಜನತೆ ಈ ದಿನಕ್ಕಾಗಿ ಕಾತುರದಿಂದ ಕಾಯತೊಡಗಿದೆ. ಏನಾದರೂ ಸರಿ ಮಗಾ (ಕಣೆ), ಅವಳಿ(ನಿ)ಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಬಿಡುವೆ ಎನ್ನುವ ಸಾವಿರಾರು ಮನಸ್ಸುಗಳು ಈ ದಿನವನ್ನು (ಫೆ.14) ಎದುರು ನೋಡುತ್ತಿವೆ. *ಮೃತ್ಯುಂಜಯ ಕಲ್ಮಠಪ್ರೇಮಿಗಳ ದಿನ ಯಾವ ದೇಶದ್ದು, ಎಲ್ಲಿಂದ ಬಂತು, 34540http://kannada.oneindia.com/img/2009/02/08-red-rose-bunch1.jpg191140mediaಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ/news/2009/02/17/media-contribution-to-agricultural-development.htmlಬೆಂಗಳೂರು, ಫೆ. 17 : ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಕೂಡ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದೆ. ಇಂಟರ್ನೆಟ್ ಸೇರಿದಂತೆ ಮಾಧ್ಯಮಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಅದರಲ್ಲೂ ಅಂತರ್ಜಾಲ ಮಾಧ್ಯಮ ಮತ್ತು ಮೊಬೈಲ್ ತಂತ್ರಜ್ಞಾನ ಕೃಷಿಗೆ ವರದಾನವಾಗಿ ಪರಿಣಮಿಸಿವೆ. ಕೃಷಿಕರು ಮೊಬೈಲ್ ಸಹಾಯದಿಂದ ಬೆರಳತುದಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಲು ಸಾಧ್ಯವಾಗುತ್ತಿದೆ.ಈ ನಿಟ್ಟಿನಲ್ಲಿ ಕೃಷಿ 34704http://kannada.oneindia.com/img/2009/02/17-mobile-sms1.jpg191140media'ಸ್ಲಂಡಾಗ್..': ನೋ ಆಸ್ಕರ್, ನೋ ಟೆಲ್ಲರ್!/movies/review/2009/03/10-slum-dog-millionaire-review-anandram-sastri.htmlಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ರೆಹಮಾನ್ ಮತ್ತಿತರರಿಗೆ ಆಸ್ಕರ್ ಬಂದಿದ್ದು ಸಂತೋಷವೆ. ಆದರೆ, ಆ ಚಿತ್ರ ಅಷ್ಟು ಹೊಗಳಿಕೆಗೆ ಅರ್ಹವೆ? ಖಂಡಿತ ಇಲ್ಲ. ನಮ್ಮ ಭಾರತೀಯ ಚಿತ್ರರಂಗ ಅದಕ್ಕಿಂತಲೂ ಅತ್ಯದ್ಭುತ ಸಾಧನೆ ಮಾಡಿದೆ. ಅಜರಾಮರ ಅನ್ನಿಸುವಂಥ ಸಂಗೀತ ನೀಡಿದವರಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಒಂದು ಹೆಜ್ಜೆ ಮುಂದೇ ಹೋಗಿ ಸ್ಲಂಡಾಗ್ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂಬಂತೆ ಬಿಂಬಿಸುತ್ತಿವೆ. 35136http://kannada.oneindia.com/img/2009/03/10-slum-dog-millionaire1.jpg191140mediaಕುರುಬರಿಗೇ ಒಂದು ರೇಡಿಯೋ ಚಾನಲ್!/literature/my-karnataka/2009/0828-community-radio-network-in-karnataka.htmlಸಮುದಾಯ ರೇಡಿಯೋ ಅಂದರೇನು? ಒಂದು ಉದಾಹರಣೆ : ಕರ್ನಾಟಕದಲ್ಲಿ 50 ಲಕ್ಷ ಕುರುಬರಿದ್ದಾರೆ ಎಂದಿಟ್ಟುಕೊಳ್ಳಿ. ಕುರಿಸಾಕಾಣಿಕೆ, ಉಣ್ಣೆ ಉತ್ಪನ್ನ, ವ್ಯಾಪಾರ, ಮಾಂಸ, ಕುರಿ ರೋಗರುಜಿನ, ಬ್ಯಾಂಕ್ ಸಾಲ, ವಧೂವರ ಸಮ್ಮಿಲನ, ಹಬ್ಬ ಜಾತ್ರೆ, ಶಿಕ್ಷಣ, ಅನಾಥಾಲಯ, ವೃದ್ಧಾಶ್ರಮ ಮುಂತಾದ ಕುರುಬ ಜನಾಂಗಕ್ಕೆ ಸಲ್ಲುವ ಎಲ್ಲ ವಿವರಗಳನ್ನು ಪ್ರಸಾರ ಮಾಡಿದರೆ ಕುಲಕ್ಕೆ ಸೇರಿದ ಜನಾಂಗಕ್ಕೆ ಎಷ್ಟೊಂದು ಪ್ರಯೋಜನ ಸಿಗುತ್ತದೆ. 38889http://kannada.oneindia.com/img/2009/08/28-nagaraj1.jpg191140mediaಮಾಧ್ಯಮ ಮುಂದೆ ನಿಲ್ಲುವಾಗ ಸಿದ್ಧತೆ ಇರಲಿ, ಜೈಟ್ಲಿ/news/2009/10/02/bjp-to-make-karnataka-most-developed-jaitely.htmlಮೈಸೂರು, ಅ. 2 : ಪಕ್ಷ ಮತ್ತು ಮಂತ್ರಿಗಳ ಚಿಂತನೆ ಒಂದೇ ಇರಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸರಕಾರಕ್ಕೆ ಧಕ್ಕೆಯಾಗಲಿದೆ. ಮಾಧ್ಯಮಗಳ ಮುಂದೆ ನಿಲ್ಲುವ ಮುನ್ನ ಪೂರ್ವಸಿದ್ಧತೆ ಮಾಡಿಕೊಳ್ಳಿ ಎಂದು ಬಿಜೆಪಿ ಹಿರಿಯ ನಾಯಕ ಅರುಣ ಜೈಟ್ಲಿ ಸಚಿವರಿಗೆ ಕಿವಿಮಾತು ಹೇಳಿದರು. ಗುರುವಾರ ಸುತ್ತೂರಿನಲ್ಲಿ ಸಚಿವರ ಸಹಚಿಂತನಾ ಶಿಬಿರದ ಕೊನೆಯ ದಿನ ನಮ್ಮ ಪ್ರತಿಭೆ, ಸಾರ್ವಜನಿಕ ಸಂಬಂಧ 39476http://kannada.oneindia.com/img/2009/10/02-arun-jaitley2.jpg191703ಆಕಾಶವಾಣಿನೆನಪಿನ ತರಂಗಾಂತರಗಳು!/nri/article/2009/0121-a-walk-down-radio-memory-lane.htmlರೇಡಿಯೋ ಎಂದಾಕ್ಷಣ ಹಿಂದಿನ ಪೀಳಿಗೆಯ ಮಂದಿಯ ಕಂಗಳು ಅರಳಿ ಇಷ್ಟಗಲವಾಗುತ್ತವೆ. ರೇಡಿಯೋ ಶಬ್ದವೊಂದೇ ಸಾಕು ತರಂಗಾತರಗಳ ಅಲೆಅಲೆಯ ಮೇಲೆ ತೇಲಿಸಿಕೊಂಡು ಹೋಗಿ ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ಯಲು. ಎಫ್ಎಂ, ಟೀವಿ ಇಲ್ಲದ ಕಾಲದಲ್ಲಿ ಎಲ್ಲರ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದ ಆ ಪೆಟ್ಟಿಗೆ ನಿಮ್ಮ ಅಟ್ಟದ ಮೇಲಿದ್ದರೆ ಥಟ್ಟನೆ ಒಮ್ಮೆ ಹೋಗಿ ನೋಡಿ, ನೆನಪುಗಳ ತರಂಗಗಳು ಏಳದಿದ್ದರೆ ಕೇಳಿ!* ಗಿರೀಶ್ 34201http://kannada.oneindia.com/img/2009/01/21-radio1.jpg191703ಆಕಾಶವಾಣಿಸಿಡ್ನಿ ರೇಡಿಯೋದಲ್ಲಿ ಶಾಮ್ ಸಂದರ್ಶನ/column/sham/2009/0204-sydney-radio-thatskannada-editor-interview.htmlಸಿಡ್ನಿಯಲ್ಲಿರುವ ಎಸ್ ಬಿ ಎಸ್ ರೇಡಿಯೋ ಆಸ್ಟ್ರೇಲಿಯ ಪ್ರಜೆಗಳಿಗೆ ಒಂದು ಪ್ರಮುಖ ಮಾಧ್ಯಮ. ಇಂಗ್ಲಿಷ್ ಅಲ್ಲದೆ, 68 ವಿವಿಧ ಜಾಗತಿಕ ಭಾಷೆಗಳಲ್ಲಿ ಆಕಾಶವಾಣಿ ನುಡಿಸೇವೆ ಸಲ್ಲಿಸುವ ಹೆಗ್ಗಳಿಕೆ ಈ ಸಂಸ್ಥೆಯದ್ದು. ಆಸ್ಟ್ರೇಲಿಯ ಮತ್ತು ಏಷಿಯ ಪೆಸಿಫಿಕ್ ವಲಯದಲ್ಲಿ ನೆಲೆಸಿರುವ ಆಯಾ ಭಾಷಿಕ ಸಮುದಾಯದ ಶ್ರೋತೃಗಳನ್ನು ತಲಪುವುದು, ತನ್ಮೂಲಕ ಅವರವರ ಮಾತೃ ಭಾಷೆಗೆ ದನಿಯಾಗುವುದು ಆಕಾಶವಾಣಿಯ 34466http://kannada.oneindia.com/img/2009/02/04-sham6.jpg191703ಆಕಾಶವಾಣಿರೈತರಿಂದ ರೈತರಿಗೆ ಕೃಷಿ ತಂತ್ರಜ್ಞಾನ/literature/my-karnataka/2009/0323-technology-reaches-mysore-farmers-akashavani.htmlಕೇಳುವ ಮಾಧ್ಯಮವಾದ ರೇಡಿಯೋವನ್ನು ದೃಶ್ಯಮಾಧ್ಯಮವನ್ನಾಗಿ ಪರಿವರ್ತಿಸಬಹುದೇ? ಹೀಗೊಂದು ಪ್ರಶ್ನೆ ಮುಂದಿಟ್ಟರೆ, ಯಾಕಾಗಬಾರದು, ನಾವೇ ಮಾಡುತ್ತಿದ್ದೇವಲ್ಲಾ , ಕಳೆದ ಮೂರು ವರ್ಷಗಳಿಂದ ಎನ್ನುತ್ತಾರೆ ಮೈಸೂರು ಆಕಾಶವಾಣಿ ಕೃಷಿ ರಂಗ ಕಾರ್ಯಕ್ರಮ ನಿರ್ವಹಿಸುತ್ತಿರುವ ಪ್ರಸಾರ ನಿರ್ವಾಹಕ ಕೇಶವಮೂರ್ತಿ.ರೇಡಿಯೋದಲ್ಲಿ ಕೇಳಿದ್ದನ್ನು ಪ್ರತ್ಯಕ್ಷವಾಗಿ ರೈತರ ಹೊಲದಲ್ಲಿ ನೋಡುವ, ನೋಡಿದ್ದನ್ನು ಅನುಸರಿಸಿ ಮತ್ತೊಬ್ಬರಿಗೆ ತಿಳಿಸುವ, ರೈತರಿಂದ ರೈತರಿಗೆ, ಕೃಷಿ ವಿಜ್ಞಾನಿಗಳಿಂದ ರೈತರಿಗೆ ಕೃಷಿ ತಂತ್ರಜ್ಞಾನ 35439http://kannada.oneindia.com/img/2009/03/23-kisan-vaani-mysore1.jpg191703ಆಕಾಶವಾಣಿಕುರುಬರಿಗೇ ಒಂದು ರೇಡಿಯೋ ಚಾನಲ್!/literature/my-karnataka/2009/0828-community-radio-network-in-karnataka.htmlಸಮುದಾಯ ರೇಡಿಯೋ ಅಂದರೇನು? ಒಂದು ಉದಾಹರಣೆ : ಕರ್ನಾಟಕದಲ್ಲಿ 50 ಲಕ್ಷ ಕುರುಬರಿದ್ದಾರೆ ಎಂದಿಟ್ಟುಕೊಳ್ಳಿ. ಕುರಿಸಾಕಾಣಿಕೆ, ಉಣ್ಣೆ ಉತ್ಪನ್ನ, ವ್ಯಾಪಾರ, ಮಾಂಸ, ಕುರಿ ರೋಗರುಜಿನ, ಬ್ಯಾಂಕ್ ಸಾಲ, ವಧೂವರ ಸಮ್ಮಿಲನ, ಹಬ್ಬ ಜಾತ್ರೆ, ಶಿಕ್ಷಣ, ಅನಾಥಾಲಯ, ವೃದ್ಧಾಶ್ರಮ ಮುಂತಾದ ಕುರುಬ ಜನಾಂಗಕ್ಕೆ ಸಲ್ಲುವ ಎಲ್ಲ ವಿವರಗಳನ್ನು ಪ್ರಸಾರ ಮಾಡಿದರೆ ಕುಲಕ್ಕೆ ಸೇರಿದ ಜನಾಂಗಕ್ಕೆ ಎಷ್ಟೊಂದು ಪ್ರಯೋಜನ ಸಿಗುತ್ತದೆ. 38889http://kannada.oneindia.com/img/2009/08/28-nagaraj1.jpg191703ಆಕಾಶವಾಣಿಎಸ್ಎಸ್ಎಲ್ಸಿ : ಬಾನುಲಿಯಲ್ಲಿ ವಿಶೇಷ ಕಾರ್ಯಕ್ರಮ/news/2009/10/01/akashvani-broadcasting-special-programme-on-sslc.htmlಬೆಂಗಳೂರು, ಅ. 1 : 2010ರ ಮಾರ್ಚ್ ನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಬದಲಾದ ಪ್ರಶ್ನೆಪತ್ರಿಕೆಯ ಸ್ವರೂಪ ಮತ್ತು ಪರೀಕ್ಷೆಯ ಪದ್ಧತಿ ಕುರಿತಂತೆ ವಿದ್ಯಾರ್ಥಿಗಳಿಗೆ ಆಕಾಶವಾಣಿ ವಿಶೇಷ ಕಾರ್ಯಕ್ರಮ ಬಿತ್ತರಿಸಲಿದೆ. ಶಿಕ್ಷಣ ತಜ್ಞರು ಅಕ್ಟೋಬರ್ 6ರಿಂದ 11ರ ವರೆಗೆ ಈ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.ಈ ಸರಣಿ ಮಾಲಿಕೆ ಪ್ರತಿ ಮಂಗಳವಾರ, ಬುಧವಾರ ಮತ್ತು ಗುರುವಾರ 39455http://kannada.oneindia.com/img/2009/10/01-vishveswara-hegde-kageri1.jpgnews"> ಕುರುಬರಿಗೇ ಒಂದು ರೇಡಿಯೋ ಚಾನಲ್! | Community Radio | Karnataka | Universities | Educational Institutions | Nagaraj - ಕುರುಬರಿಗೇ ಒಂದು ರೇಡಿಯೋ! - Kannada Oneindia

ಕುರುಬರಿಗೇ ಒಂದು ರೇಡಿಯೋ ಚಾನಲ್!

Nagaraj, Bengaluru
ಸಮುದಾಯ ರೇಡಿಯೋ ಅಂದರೇನು? ಒಂದು ಉದಾಹರಣೆ : ಕರ್ನಾಟಕದಲ್ಲಿ 50 ಲಕ್ಷ ಕುರುಬರಿದ್ದಾರೆ ಎಂದಿಟ್ಟುಕೊಳ್ಳಿ. ಕುರಿಸಾಕಾಣಿಕೆ, ಉಣ್ಣೆ ಉತ್ಪನ್ನ, ವ್ಯಾಪಾರ, ಮಾಂಸ, ಕುರಿ ರೋಗರುಜಿನ, ಬ್ಯಾಂಕ್ ಸಾಲ, ವಧೂವರ ಸಮ್ಮಿಲನ, ಹಬ್ಬ ಜಾತ್ರೆ, ಶಿಕ್ಷಣ, ಅನಾಥಾಲಯ, ವೃದ್ಧಾಶ್ರಮ ಮುಂತಾದ ಕುರುಬ ಜನಾಂಗಕ್ಕೆ ಸಲ್ಲುವ ಎಲ್ಲ ವಿವರಗಳನ್ನು ಪ್ರಸಾರ ಮಾಡಿದರೆ ಕುಲಕ್ಕೆ ಸೇರಿದ ಜನಾಂಗಕ್ಕೆ ಎಷ್ಟೊಂದು ಪ್ರಯೋಜನ ಸಿಗುತ್ತದೆ. ಯೋಚಿಸಿ. ಸಮುದಾಯ ರೇಡಿಯೋ ಕಲ್ಪನೆ, ಉಪಯೋಗ ಮತ್ತು ರಾಜ್ಯದಲ್ಲಿರುವ ಇಂಥ ರೇಡಿಯೋಗಳ ಬಗೆಗೆ ರೇಡಿಯೋಪ್ರಿಯ ಲೇಖಕರು ಬೆಳಕು ಚೆಲ್ಲಿದ್ದಾರೆ. ಓದಿ.

* ನಾಗರಾಜ್, ದೊಮ್ಮಲೂರು, ಬೆಂಗಳೂರು

ಸಮುದಾಯ ಬಾನುಲಿ ಭಾರತಕ್ಕೆ ಹೊಸದು. ಆದರೆ, ನೇಪಾಳ, ಶ್ರೀಲಂಕಾ, ಲ್ಯಾಟಿನ್ ಅಮೇರಿಕಾ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ರಿಕಾ, ಯುರೋಪ್ ಮುಂತಾದ ದೇಶಗಳಲ್ಲಿ ಜನಜನಿತ. ನಮ್ಮ ದೇಶದಲ್ಲಿ ಸಮುದಾಯ ಬಾನುಲಿ ಪ್ರಾರಂಭಿಸಲು ಭಾರತ ಸರ್ಕಾರ 2006ರ ನವಂಬರ್ 16ರಂದು ಒಂದು ಪಾಲಿಸಿಯನ್ನು ಹೊರಡಿಸಿತು. ಇದರ ಪ್ರಕಾರ ನೊಂದಾಯಿತ ಯಾವುದೇ ಸಂಘ ಸಂಸ್ಥೆಯು ಪರವಾನಗಿಯನ್ನು ಪಡೆದು, ಅವರದೇ ಆದ ಸಮದಾಯ ಬಾನುಲಿಯನ್ನು ತರಂಗಗಳಲ್ಲಿ ಪ್ರಾರಂಭಿಸಬಹುದು. ಈ ಪಾಲಿಸಿಯನ್ನು ಬಳಸಿಕೊಂಡು ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳು, ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರೇತರ ಸಂಸ್ಥೆಗಳು ಸಮುದಾಯ ಬಾನುಲಿಗಳನ್ನು ಪ್ರಾರಂಬಭಿಸಿವೆ. ಸಂಖ್ಯೆ ನಿಧಾನವಾಗಿ ಬೆಳೆಯುತ್ತಿದೆ.

ಭಾರತದಲ್ಲಿ ಈಗಾಗಲೇ ಸುಮಾರು 50 ಕೃಷಿ ವಿಶ್ವವಿದ್ಯಾಲಯದ ಸಮುದಾಯ ಬಾನುಲಿಗಳು, ಸುಮಾರು 47 ವಿಶ್ವವಿದ್ಯಾಲಯದ ಸಮುದಾಯ ಬಾನುಲಿಗಳು , ಸುಮಾರು 12 ಸರ್ಕಾರೇತರ ಸಂಸ್ಥೆಗೆ ಪರವಾನಗಿ ದೊರೆತ ಬಾನುಲಿಗಳು ಚಾಲ್ತಿಯಲ್ಲಿವೆ. ನಮ್ಮ ಕರ್ನಾಟಕದಲ್ಲಿ ಹೇಳುವುದಾದರೆ ಸದ್ಯಕ್ಕೆ ಒಂದು ಸರ್ಕಾರೇತರ ಸಂಸ್ಥೆಗೆ (ಮೈರಾಡ) ಪರವಾನಗಿ ದೊರೆತಿದ್ದು, ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ, ಬೂದಿಕೋಟೆಯಲ್ಲಿ ಸುಮಾರು ನಾಲ್ಕು ತಿಂಗಳಿನಿಂದ 90.4 ಕಂಪನಾಂಕದಲ್ಲಿ ಪ್ರಾಯೋಗಿಕ ಪ್ರಸಾರವಾಗುತ್ತಿದೆ.

ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸುಮಾರು ಒಂದು ವರ್ಷದಿಂದ ಸಮುದಾಯ ಬಾನುಲಿ ತರಂಗಗಳಲ್ಲಿ ಪ್ರಸಾರವಾಗುತ್ತಿದೆ. ಇತ್ತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹಾವೀರ್ ಜೈನ್ ಕಾಲೇಜಿನಲ್ಲಿ ಸುಮಾರು ಒಂದೂವರೆ ವರ್ಷದಿಂದ 90.4 ಕಂಪನಾಂಕದಲ್ಲಿ ತರಂಗಗಳಲ್ಲಿ ಪ್ರಸಾರವಾಗುತ್ತಿದೆ. ಶ್ರೀರಮಣ ಮಹರ್ಷಿ ಅಕಾಡೆಮಿಯಲ್ಲಿ ಸುಮಾರು ಒಂದು ವರ್ಷದಿಂದ 90.4 ಕಂಪನಾಂಕದಲ್ಲಿ ಪ್ರಸಾರವಾಗುತ್ತಿದೆ. ಮಂಗಳೂರಿನಲ್ಲಿ ಸಂತ ಅಲೋಷಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಸುಮಾರು ಒಂದು ತಿಂಗಳಿನಿಂದ ಪ್ರಾಯೋಗಿಕವಾಗಿ 107.8 ಕಂಪನಾಂಕದಲ್ಲಿ ಪ್ರಸಾರಮಾಡುತ್ತಿದೆ. ತುಮಕೂರಿನಲ್ಲಿ ಸಿದ್ದಾರ್ಥ ಮಿಡಿಯಾ ಸೆಂಟರ್ ನವರು ಸುಮಾರು ಆರು ತಿಂಗಳಿನಿಂದ ಪ್ರಾಯೋಗಿಕವಾಗಿ ಪ್ರಸಾರ ಮಾಡುತ್ತಿದ್ದಾರೆ. ಗುಲ್ಬರ್ಗದಲ್ಲಿ ಶ್ರೀ ಶರಣ ಬಸವೇಶ್ವರ ವಿಧ್ಯಾವರ್ದಕ ಸಂಘದ 94.6 ಕಂಪನಾಂಕ ನಿನ್ನೆ ತಾನೆ (ಆಗಸ್ಟ್ 28, 2009) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಚಾಲನೆಯನ್ನು ನೀಡುವ ಮುಖಾಂತರ ತರಂಗಗಳಲ್ಲಿ ಪ್ರಸಾರ ಮಾಡಿತು.

ಏನಿದು ಸಮುದಾಯ ಬಾನುಲಿ?

ಸಮುದಾಯ ಬಾನುಲಿ ಅಂದರೆ ಒಂದು ನಿರ್ದಿಷ್ಟ ಸಮುದಾಯವೊಂದರ ಸದಸ್ಯರಿಂದ ನಡೆಸಲ್ಪಡುವ, ಸಮುದಾಯದ ಒಡೆತನಕ್ಕೊಳಪಟ್ಟ ಮತ್ತು ಸಮುದಾಯದಲ್ಲೇ ಇರುವಂತಹ ರೇಡಿಯೋ ವ್ಯವಸ್ಥೆ. ಅಂದರೆ ಒಂದು ನಿರ್ದಿಷ್ಟ ಸಮುದಾಯದ ಅಭಿವೃದ್ಧಿಯ ಸಲುವಾಗಿ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯವಹಿಸುವ ರೇಡಿಯೋ. ಇದರಲ್ಲಿ ಕೇಳುಗರು ಮತ್ತು ಕಾರ್ಯಕ್ರಮ ಮಾಡುವವರು ಸಾಮಾನ್ಯವಾಗಿ ಒಂದೇ ಸಮುದಾಯದವರು ಆಗಿರುತ್ತಾರೆ. ಸಮುದಾಯ ಬಾನುಲಿಯ ಹಿಂದಿರುವ ಉದ್ದೇಶಗಳೆಂದರೆ ಸಮುದಾಯದ ಶೈಕ್ಷಣಿಕ ಅಭಿವೃದ್ಧಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ನಿವೇದಿಸುವುದು. ರೇಡಿಯೋದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಯಾಗಿರುವ ಪ್ರದೇಶದ ಭಾಷೆಯಲ್ಲಿಯೇ ಇರುತ್ತವೆ. ಅಲ್ಲದೇ ಸ್ಥಳೀಯ ಸಮುದಾಯ ಜನರ ಆಡುಭಾಷೆ ಅಥವಾ ಉಪಭಾಷೆಗಳು ಕೂಡ ಇಲ್ಲಿ ಪ್ರಸಾರ ಮಾಡಲು ಯೋಗ್ಯವಾಗಿರುತ್ತದೆ.

ಯಾರು ಅರ್ಹರು?

ಮೂರು ವರ್ಷಕ್ಕೆ ಮುಂಚೆ ನೊಂದಾಯಿತವಾಗಿರುವ ಯಾವುದೇ ಸಂಸ್ಥೆಯು ಸಮುದಾಯ ರೇಡಿಯೋ ಪರವಾನಗಿ ಪಡೆಯಲು ಅರ್ಹರಾಗಿದ್ದು, ಭಾರತ ಸರ್ಕಾರಕ್ಕೆ ಪರವಾನಗಿಯನ್ನು ಪಡೆಯಲು ಅರ್ಜಿಯನ್ನು ಮತ್ತು ಹಲವು ದಾಖಲೆಗಳನ್ನು ಸಲ್ಲಿಸಬೇಕು. ಭಾರತ ಸರ್ಕಾರದಿಂದ ಪರವಾನಗಿ ದೊರೆಯಲು ಒಂದು ವರ್ಷ ಕಾಲ ಬೇಕಾಗುತ್ತದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಬಗೆಗೆ, ಇನ್ನಷ್ಟು ಮಾಹಿತಿಯನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರದ ವೆಬ್ ಸೈಟ್ ಆದ http://www.mib.nic.in ನಲ್ಲಿ ಪಡೆಯಬಹುದು.

ಖರ್ಚು ವೆಚ್ಚ?

ಸಮುದಾಯ ಬಾನುಲಿಯನ್ನು ಶುರು ಮಾಡಲು ಕಟ್ಟಡವನ್ನು ಹೊರತುಪಡಿಸಿದರೆ ಕನಿಷ್ಟ 3ರಿಂದ 4 ಲಕ್ಷಗಳು ಸಾಕಾಗುತ್ತದೆ. ಆದರೆ ಹಲವಾರು ಸಂಸ್ಥೆಯವರು ಕೋಟಿಗಟ್ಟಲೆ ಹಣವನ್ನು ದುಂದು ವೆಚ್ಚ ಮಾಡಿ ಸಮುದಾಯ ಬಾನುಲಿಗಳನ್ನು ಶುರು ಮಾಡುತ್ತಿದ್ದಾರೆ. ಉದಾ: ಗುಲ್ಬರ್ಗದ ಶ್ರೀ ಶರಣ ಬಸವೇಶ್ವರ ವಿದ್ಯಾವರ್ದಕ ಸಂಘವು ಸುಮಾರು ಒಂದು ಕೋಟಿ ರೂಗಳನ್ನು ಸಮುದಾಯ ಬಾನುಲಿಗೆ ಖರ್ಚು ಮಾಡಿರುವುದಾಗಿ ಮಾಧ್ಯಮಗಳ ಮೂಲಕ ತಿಳಿಸಿದೆ. ಸಮುದಾಯ ನಿರ್ವಹಿಸುವ ಸಮುದಾಯ ಬಾನುಲಿಗೆ ಇಷ್ಟೆಲ್ಲಾ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಹೆಚ್ಚು ಹಣ ಖರ್ಚು ಮಾಡಿದರೆ ಸಂಸ್ಥೆಯವರು ಸಮುದಾಯದ ಜನರನ್ನು ಹೆಚ್ಚಾಗಿ ಭಾಗವಹಿಸಲು ಅವಕಾಶ ಕಲ್ಪಿಸುವುದಿಲ್ಲ ಜೊತೆಗೆ ಸಮುದಾಯ ಬಾನುಲಿಯನ್ನು ನಿಯಂತ್ರಿಸಲು ಪಟ್ಟಣಗಳಿಂದ ಮಾಧ್ಯಮದಲ್ಲಿ ಪದವಿ ಪಡೆದವರನ್ನು ಕರೆತಂದು ಕೂರಿಸುತ್ತಾರೆ.

ಸಣ್ಣ ಪುಟ್ಟ ಸಂಸ್ಥೆಗಳು ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ಸಮುದಾಯ ಬಾನುಲಿಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸಣ್ಣ ಮೊತ್ತದಲ್ಲೇ ಈ ಸಮುದಾಯ ಬಾನುಲಿಯನ್ನು ಪ್ರಾರಂಭಿಸಬಹುದು. ಇದಕ್ಕಾಗಿಯೇ ಹಲವಾರು ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಸಮುದಾಯ ಬಾನುಲಿಗಳನ್ನು ಶುರು ಮಾಡುವ ಪ್ರಯತ್ನವನ್ನು ಮಾಡುತ್ತಿವೆ. ನಿಮಗೂ ಸಹ ನಿಮ್ಮ ಸಮುದಾಯವನ್ನು ಇನ್ನಷ್ಟು ಅಭಿವೃದ್ದಿಯನ್ನು ಪಡಿಸಲು ಆಸಕ್ತಿಯಿದ್ದರೆ ಸಮುದಾಯ ಬಾನುಲಿಯನ್ನು ಶುರುಮಾಡಿ. ಭಾರತ ಸರಕಾರದ ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಹಾಕಿ. ನಿಮಗೆ ನಿಮ್ಮದೆ ಆದ ಒಂದು ರೇಡಿಯೋ ಅಂತ ಇರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+