278700thiruvalluvarಆ.10 ರಂದು ತಿರುವಳ್ಳುವರ್ ಪ್ರತಿಮೆ ಅನಾವರಣ/news/2009/07/12/sarvajna-thiruvalluvar-statue-unveiling-dates-fix.htmlಬೆಂಗಳೂರು, ಜು. 12 : ಕರ್ನಾಟಕ-ತಮಿಳುನಾಡು ನಡುವೆ ಹಲವು ವರ್ಷಗಳಿಂದ ವಿವಾದದ ಕೇಂದ್ರವಾಗಿದ್ದ ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆಗಳ ಅನಾವರಣಕ್ಕೆ ಅಂತೂ ಇಂತೂ ಕಾಲ ಕೂಡಿ ಬಂದಿದೆ. ಆಗಸ್ಟ್ 10 ರಂದು ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಹಾಗೂ ಆಗಸ್ಟ್ 13 ರಂದು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆಗಳು ಅನಾವವರಣಗೊಳ್ಳಲಿವೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮುಖ್ಯಮಂತ್ರಿ ಬಿ 37930http://kannada.oneindia.com/img/2009/07/12-thiruvalluvar1e.jpg278700thiruvalluvarಜಗತ್ತಿನ ಅತ್ಯಂತ ಹಳೆ ಪ್ರತಿಮೆ ಇದೆನಾ?/news/2009/08/03/oldest-statue-in-the-world-perhaps.htmlಜಗತ್ತಿನ ಅತ್ಯಂತ ಪ್ರಾಚೀನ ಪ್ರತಿಮೆ ಯಾವುದು? ಈ ಬಗ್ಗೆ ಮಾಹಿತಿ ಹುಡುಕಲು ಗೂಗಲ್ ಮಾಡುತ್ತಾ ಹೋದರೆ ನಾನಾ ವಾದ ಪ್ರತಿವಾದಗಳನ್ನು ಮಂಡಿಸುವ ಚಿತ್ರಸಮೇತ ವರದಿಗಳು ಎದುರಾಗುತ್ತವೆ. ಅನೇಕರು, ಪಂಡಿತರು, ಪುರಾತತ್ವ ತಜ್ಞರು ಹಾಗೂ ಬ್ಲಾಗಿಗಳು 'ಇದೇ ಪ್ರಪಂಚದ ಪ್ರಥಮ ಪ್ರತಿಮೆ' ಎಂದು ಚಿತ್ರ ಸಮೇತ, ಪುರಾವೆ ಸಮೇತ ವಾದ ಮಂಡಿಸುತ್ತಾರೆ. ಆದರೂ ಮನುಷ್ಯ ಸ್ಥಾಪಿಸಿದ ಮೊಟ್ಟಮೊದಲ 38385http://kannada.oneindia.com/img/2009/08/03-oldest-statue1.jpg278700thiruvalluvarತಿರುವಳ್ಳುವರ್ : ಎಲ್ಲಾ ಬಿಟ್ಟು ಭಂಗಿ ನೆಟ್ಟ ಯಡಿಯೂರಪ್ಪ!/literature/my-karnataka/2009/0805-thiruvalluvar-yeddyurappa-karunanidhi.htmlಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ರಾಶಿರಾಶಿ ಸಮಸ್ಯೆಗಳಿರುವಾಗ ನಮ್ಮ ಯಡಿಯೂರಪ್ಪ ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡುತ್ತಿದ್ದಾರೆ? ವಿಶ್ರಾಂತಿಗಾಗಿ ಬೆಂಗಳೂರಿಗೆ ಬಂದಿರುವ ಕರುಣಾನಿಧಿಯೊಂದಿಗೆ ಪ್ರತಿಮೆ ಸ್ಥಾಪನೆ ಕುರಿತ ಚರ್ಚೆಯ ಅಗತ್ಯವೇನಿತ್ತು? ಅಪ್ಪಟ ಕನ್ನಡಿಗರ ಮೂಗಿಗೆ ಕೆಟ್ಟ ವಾಸನೆ ಬಡಿಯುತ್ತಿದೆ.* ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರುನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ 38437http://kannada.oneindia.com/img/2009/08/05-bsy-invites-karuna1.jpg278700thiruvalluvarತ್ರಿಕೋನ ಯುದ್ಧಕ್ಕೆ ಬೆಂಗಳೂರು ಸಿದ್ಧ/literature/my-karnataka/2009/0806-thiruvalluvar-statue-war-in-bengaluru.htmlಬೆಂಗಳೂರು, ಆ. 6 : ಬೆಂಗಳೂರಿನ ಪ್ರಶಾಂತ ಹಲಸೂರು ಕೆರೆ ಆವರಣದಲ್ಲಿ ಉದ್ದೇಶಿತ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಗತ್ಯವಾದ ಸರಕಾರಿ ಸಿದ್ಧತೆಗಳು ಭರದಿಂದ ಸಾಗಿವೆ. ಅಂತೆಯೇ, ಪ್ರತಿಮೆ ಅನಾವರಣಕ್ಕೆ ಪ್ರತಿಭಟಿಸಲು ಸಜ್ಜಾಗಿರುವ ಕನ್ನಡ ಗುಂಪುಗಳು ತಮ್ಮ ಅಸ್ತ್ರಗಳನ್ನು ಮೊನಚುಗೊಳಿಸುತ್ತಿವೆ. ಈ ಮಧ್ಯೆ, ಪ್ರತಿಮೆ ಅನಾವರಣ ನೆನೆಗುದಿಗೆ ಬಿದ್ದಿದ್ದರಿಂದ ಕಳೆದ 18 ವರ್ಷಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ 38458http://kannada.oneindia.com/img/2009/08/06-ulsoor-lake1.jpg278700thiruvalluvarಕನ್ನಡಿಗರಾದ ನಾವು ಈ ಪಾಟಿ ಹೇಡಿಗಳೇ?/literature/my-karnataka/2009/0806-around-thiruvalluvar-statue-installation.html* ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆಗಳ ಸ್ಥಾಪನೆಯ ಉದ್ದೇಶ ಆ ಕವಿಗಳಮೇಲಿನ ಅಭಿಮಾನವಲ್ಲ. ಬೆಂಗಳೂರಿನಲ್ಲಿ ತಮಿಳರು ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಕರ್ನಾಟಕದ ರಾಜಧಾನಿಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ಉದ್ದೇಶದಿಂದ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ತಮಿಳುನಾಡಿನ ರಾಜಧಾನಿಯಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರ ತಳೆಯುವುದು ಅನಿವಾರ್ಯವಾಯಿತು.* ಇದೀಗ ಎಲ್ಲ ರಾಜಕೀಯ ಪಕ್ಷಗಳೂ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಬೆಂಬಲಿಸುತ್ತಿರುವುದು ಬಿಬಿಎಂಪಿ 38468http://kannada.oneindia.com/img/2009/08/06-thiruvalluvar1.jpg537279statueತಿರುಕ್ಕುರಲ್ ಕರ್ತೃ ಕವಿ ತಿರುವಳ್ಳುವರ್ ಕಿರುಪರಿಚಯ/literature/articles/2009/0720-thirukkural-tamil-poet-thiruvalluvar.htmlತಿರುವಳ್ಳುವರ್ ತಮಿಳುನಾಡಿನ ಮಹಾನ್ ಕವಿ. ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಚೆನ್ನೈನಲ್ಲಿರುವ ಮೈಲಾಪುರ್ ಸ್ಥಳದವರೆನ್ನುತ್ತಾರೆ. ತಿರುವಳ್ಳುವರ್ ಅವರು 133 ಅಧ್ಯಾಯದ ತಿರುಕ್ಕುರಳ್ ಎ೦ಬ ಮಹಾ ಗ್ರ೦ಥ ರಚಿಸಿದ ಕವಿ. ಈತನ ಕಾಲ ನಿಗದಿಯಾಗಿಲ್ಲವಾದರೂ ಕ್ರಿಸ್ತಪೂರ್ವ 2ರಿಂದ ಹಿಡಿದು ಕ್ರಿಸ್ತಶಕ 8ವರೆಗೆ ಇರಬಹುದು ಎ೦ದು ಹೇಳಲಾಗಿದೆ. ಇವರ ಹೆಸರಿನಲ್ಲಿ 38088http://kannada.oneindia.com/img/2009/07/20-thiruvalluvar1.jpg537279statueವಚನಕಾರ ಸರ್ವಜ್ಞನಿಗೆ ಒಂದು ಡಜನ್ ಬಹುಪರಾಕ್/literature/people/2009/0721-kannada-vachanakara-poet-sarvajna.html"ಸರ್ವಜ್ಞನೆ೦ಬುವನು ಗರ್ವದಿ೦ದಾದವನೇ, ಸರ್ವರೊಳು ಒ೦ದೊ೦ದು ನುಡಿಗಲಿತು ವಿದ್ಯೆಯ ಪರ್ವತವೇ ಆದ"- ಸರ್ವಜ್ಞ.ಈ ಸರ್ವಜ್ಞನೆ೦ಬುವನು ಯಾರು, ಎಲ್ಲಿ ಬೆಳೆದ, ಯಾವ ವೃತ್ತಿಯವನು, ಕೊನೆಗೆ ಎಲ್ಲಿಗೆ ಹೋಗಿ ಕಣ್ಮರೆಯಾದ ಎ೦ಬುದಲ್ಲೆವೂ ನಿಗೂಢವಾಗಿಯೇ ಉಳಿದಿದೆ. ಚರಿತ್ರಕಾರರ ಪ್ರಕಾರ, ಈತನ ನಿಜವಾದ ಹೆಸರು ಪುಷ್ಪದತ್ತ , ಈತನ ತ೦ದೆಯ ಹೆಸರು ಯಾರಿಗೂ ಗೊತ್ತಿಲ್ಲ. ಬೆಳೆದದ್ದು ಒಬ್ಬ ಶೈವ ದ೦ಪತಿಗಳ ಬಳಿಯಲ್ಲಿ. ಸಾಕು ತ೦ದೆ 38112http://kannada.oneindia.com/img/2009/07/21-sarvajna1.jpg537279statueತಿರುವಳ್ಳುವರ್ ಪ್ರತಿಮೆ : ಆಗಸ್ಟ್ 3 ರಂದು ಸಭೆ/news/2009/07/28/tiruvalluvar-statue-all-party-meet-on-aug-3.htmlಬೆಂಗಳೂರು, ಜು. 28 : ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ರಾಜ್ಯ ಸರಕಾರದ ವತಿಯಿಂದಲೇ ಬಹಳ ಅರ್ಥಪೂರ್ಣವಾಗಿ ನಡೆಸಲಾಗುವುದು. ಈ ಕುರಿತು ಚರ್ಚಿಸಲು ಆಗಸ್ಟ್ 3 ರಂದು ವಿಧಾನಸೌಧದಲ್ಲಿ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.ಕಾರ್ಯಕ್ರಮದ ಸ್ವರೂಪ ಕುರಿತು ಚರ್ಚಿಸಲು ಪ್ರತಿಪಕ್ಷ ನಾಯಕರು, ಎಲ್ಲಾ ಪಕ್ಷಗಳ ಅಧ್ಯಕ್ಷರು, ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ 38252http://kannada.oneindia.com/img/2009/07/28-thiruvalluvar1.jpg537279statueತಿರುವಳ್ಳುವರ್ ಪ್ರತಿಮೆ ಅನಾವರಣ ಮುಂದೂಡಿಕೆ ?/news/2009/07/31/tiruvalluvar-statue-unveil-likely-to-postpone.htmlಬೆಂಗಳೂರು, ಜು. 31 : ತೀವ್ರ ವಿವಾದಕ್ಕೆ ಕಾರಣವಾಗಿರುವ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಮುಂದೂಡಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದ ಐದು ಕ್ಷೇತ್ರಗಳಲ್ಲಿ ಆಗಸ್ಟ್ 18 ರಂದು ಉಪಚುನಾವಣೆಗಳು ನಡೆಯುತ್ತಿದ್ದು, ಕನ್ನಡಪರ ಸಂಘಟನೆಗಳು ಪ್ರತಿಭಟನೆಯಿಂದ ಉಂಟಾಗಬಹುದಾದ ಗದ್ದಲದಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. 38330http://kannada.oneindia.com/img/2009/07/31-thiruvalluvar1.jpg537279statueಜಗತ್ತಿನ ಅತ್ಯಂತ ಹಳೆ ಪ್ರತಿಮೆ ಇದೆನಾ?/news/2009/08/03/oldest-statue-in-the-world-perhaps.htmlಜಗತ್ತಿನ ಅತ್ಯಂತ ಪ್ರಾಚೀನ ಪ್ರತಿಮೆ ಯಾವುದು? ಈ ಬಗ್ಗೆ ಮಾಹಿತಿ ಹುಡುಕಲು ಗೂಗಲ್ ಮಾಡುತ್ತಾ ಹೋದರೆ ನಾನಾ ವಾದ ಪ್ರತಿವಾದಗಳನ್ನು ಮಂಡಿಸುವ ಚಿತ್ರಸಮೇತ ವರದಿಗಳು ಎದುರಾಗುತ್ತವೆ. ಅನೇಕರು, ಪಂಡಿತರು, ಪುರಾತತ್ವ ತಜ್ಞರು ಹಾಗೂ ಬ್ಲಾಗಿಗಳು 'ಇದೇ ಪ್ರಪಂಚದ ಪ್ರಥಮ ಪ್ರತಿಮೆ' ಎಂದು ಚಿತ್ರ ಸಮೇತ, ಪುರಾವೆ ಸಮೇತ ವಾದ ಮಂಡಿಸುತ್ತಾರೆ. ಆದರೂ ಮನುಷ್ಯ ಸ್ಥಾಪಿಸಿದ ಮೊಟ್ಟಮೊದಲ 38385http://kannada.oneindia.com/img/2009/08/03-oldest-statue1.jpg522864cauveryನರನಾರಿ ನೀರುಪುಢಾರಿ/literature/short-story/2009/0711-cauvery-dispute-and-politics-premashekhara.html* ಪ್ರೇಮಶೇಖರ, ನವದೆಹಲಿ ಬೆಟ್ಟದ ಹಾದಿಯಲ್ಲಿ ವಾರಗಟ್ಟಲೆ ನಡೆದು ಅವನು ಬಸವಳಿದಿದ್ದ. ಅಮ್ಮ ಕಟ್ಟಿಕೊಟ್ಟಿದ್ದ ಬುತ್ತಿ ಮುಗಿಯುತ್ತಾ ಬಂದಿತ್ತು. ನೀರು ಮುಗಿದು ಅದೆಷ್ಟೋ ಕಾಲವಾಗಿತ್ತು. ಕೆರೆಕುಂಟೆಗಳಿದ್ದೆಡೆ ನಿಂತು ಒಣರೊಟ್ಟಿ ತಿಂದು ನೀರು ಕುಡಿಯುತ್ತಿದ್ದ. ಬೆಟ್ಟವೇರತೊಡಗಿದಂತೆ ಕೆರೆಕುಂಟೆಗಳು ಕಾಣದಾದವು. ಅಲ್ಲಲ್ಲಿ ಒರತೆಗಳು ಕಂಡರೂ ದಾರಿ ಸಾಗಿದಂತೆ ಒಂದೊಂದಾಗಿ ಅವೂ ಮರೆಯಾಗಿಹೋದವು. ಸಿಕ್ಕಿದ ಗುಡಿಸಲುಗಳಲ್ಲಿ ನೀರು ಕೇಳಿದ. ಒಂದಿಬ್ಬರು ಕೊಟ್ಟರು. 37927http://kannada.oneindia.com/img/2009/07/11-premashekhara1.jpg522864cauveryಕೆಆರ್ಎಸ್ ಗೆ ಶೋಭಾ, ಸಿಎಂ ಬಾಗಿನ ಅರ್ಪಣೆ/news/2009/07/24/bsy-shobha-offer-bagina-to-krs-kabini-reservoirs.htmlಮೈಸೂರು, ಜು. 24 : ಕೃಷ್ಣರಾಜಸಾಗರ ಸಂಪೂರ್ಣ ಭರ್ತಿಯಾಗಿದ್ದು, ನಾಡಿನ ಜೀವನಾಡಿ ಕಾವೇರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ರಾಮಚಂದ್ರೇಗೌಡ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ ವೈ ರಾಘವೇಂದ್ರ ಉಪಸ್ಥಿತರಿದ್ದರು. ಗುರುವಾರ ರಾತ್ರಿ ವೇಳೆಗೆ ಜಲಾಶಯದ ನೀರಿನ ಮಟ್ಟ 38183http://kannada.oneindia.com/img/2009/07/24-bsy-kaveri-puje1.jpg522864cauveryತಮಿಳುನಾಡಿಗೆ ಕಾವೇರಿ ನೀರು : ಓಕೆ ಅಂದ ಸಿಎಂ/news/2009/07/24/no-problem-in-releasing-water-to-tamilnadu-bsy.htmlಮೈಸೂರು, ಜು. 24 : ರಾಜ್ಯದಲ್ಲಿ ಸಾಕಷ್ಟು ಮಳೆ ಆಗಿರುವುದರಿಂದ ಜೀವನಾಡಿ ಕಾವೇರಿ ನದಿ ತುಂಬಿ ಹರಿಯತೊಡಗಿದೆ. ಇದರಿಂದ ಹೆಚ್ಚಿನ ನೀರನ್ನು ತಮಿಳುನಾಡಿಗೆ ಬಿಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.ಕೆಆರ್ಎಸ್ ಗೆ ಬಾಗಿನ ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಮುಂಗಾರುಮಳೆ ಸ್ವಲ್ಪ ಕೋಪಿಸಿಕೊಂಡಂತೆ ಕಂಡರೂ ನಂತರದ ದಿನಗಳಲ್ಲಿ ಉತ್ತಮ 38195http://kannada.oneindia.com/img/2009/07/24-yediyurappa2.jpg522864cauveryತಿರುವಳ್ಳುವರ್ : ಎಲ್ಲಾ ಬಿಟ್ಟು ಭಂಗಿ ನೆಟ್ಟ ಯಡಿಯೂರಪ್ಪ!/literature/my-karnataka/2009/0805-thiruvalluvar-yeddyurappa-karunanidhi.htmlಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ರಾಶಿರಾಶಿ ಸಮಸ್ಯೆಗಳಿರುವಾಗ ನಮ್ಮ ಯಡಿಯೂರಪ್ಪ ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡುತ್ತಿದ್ದಾರೆ? ವಿಶ್ರಾಂತಿಗಾಗಿ ಬೆಂಗಳೂರಿಗೆ ಬಂದಿರುವ ಕರುಣಾನಿಧಿಯೊಂದಿಗೆ ಪ್ರತಿಮೆ ಸ್ಥಾಪನೆ ಕುರಿತ ಚರ್ಚೆಯ ಅಗತ್ಯವೇನಿತ್ತು? ಅಪ್ಪಟ ಕನ್ನಡಿಗರ ಮೂಗಿಗೆ ಕೆಟ್ಟ ವಾಸನೆ ಬಡಿಯುತ್ತಿದೆ.* ಕಲ್ಯಾಣ ರಾಮನ್ ಚಂದ್ರಶೇಖರನ್, ಬೆಂಗಳೂರುನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ 38437http://kannada.oneindia.com/img/2009/08/05-bsy-invites-karuna1.jpg522864cauveryಕನ್ನಡಿಗರಾದ ನಾವು ಈ ಪಾಟಿ ಹೇಡಿಗಳೇ?/literature/my-karnataka/2009/0806-around-thiruvalluvar-statue-installation.html* ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆಗಳ ಸ್ಥಾಪನೆಯ ಉದ್ದೇಶ ಆ ಕವಿಗಳಮೇಲಿನ ಅಭಿಮಾನವಲ್ಲ. ಬೆಂಗಳೂರಿನಲ್ಲಿ ತಮಿಳರು ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಕರ್ನಾಟಕದ ರಾಜಧಾನಿಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ಉದ್ದೇಶದಿಂದ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ತಮಿಳುನಾಡಿನ ರಾಜಧಾನಿಯಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರ ತಳೆಯುವುದು ಅನಿವಾರ್ಯವಾಯಿತು.* ಇದೀಗ ಎಲ್ಲ ರಾಜಕೀಯ ಪಕ್ಷಗಳೂ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಬೆಂಬಲಿಸುತ್ತಿರುವುದು ಬಿಬಿಎಂಪಿ 38468http://kannada.oneindia.com/img/2009/08/06-thiruvalluvar1.jpgnews"> ತಿರುವಳ್ಳುವರ್ ಪ್ರತಿಮೆ ಅನಾವರಣ ನಂತರ ಮುಂದೇನು? | Thiruvalluvar | Sarvajna | Cauvery | Hegenakal | Kannada Language - ತಿರುವಳ್ಳುವರ್ ಪ್ರತಿಮೆ ಅನಾವರಣ ನಂತರ ಮುಂದೇನು? - Kannada Oneindia

ತಿರುವಳ್ಳುವರ್ ಪ್ರತಿಮೆ ಅನಾವರಣ ನಂತರ ಮುಂದೇನು?

H Anandarama Shastry, Bengaluru
ಬೆಂಗಳೂರಿನಲ್ಲಿ ಕನ್ನಡಿಗರು ಕನ್ನಡೇತರರೊಡನೆ ಕನ್ನಡದಲ್ಲೇ ಮಾತನಾಡುವ ಮತ್ತು ವ್ಯವಹರಿಸುವ ದೃಢಸಂಕಲ್ಪ ಮಾಡಬೇಕು. ಇದೇ ವೇಳೆ, ಕರ್ನಾಟಕದ ರಾಜಧಾನಿಯಲ್ಲಿ ಕನ್ನಡಿಗರು ಆಗಲೇ ಅಲ್ಪಸಂಖ್ಯಾತರಾಗಿಬಿಟ್ಟಿರುವುದರಿಂದ ಇನ್ನುಮೇಲೆ ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಜನರ ಪ್ರವಾಹೋಪಾದಿಯ ವಲಸೆಯನ್ನು ನಿಯಂತ್ರಿಸಲು ಸರ್ಕಾರವು ಕಾನೂನಿನ ಚೌಕಟ್ಟಿನೊಳಗೇ ಕ್ರಮಗಳನ್ನು ಕೈಗೊಳ್ಳಬೇಕು.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಪರ-ವಿರೋಧಗಳ ಮಧ್ಯೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯು ಅನಾವರಣಗೊಳ್ಳುತ್ತಿದೆ. ಅನಾವರಣವನ್ನು ಸಮರ್ಥಿಸುತ್ತ ಕರ್ನಾಟಕದ ಉಚ್ಚ ನ್ಯಾಯಾಲಯವು ಕನ್ನಡಪರ ಸಂಘಟನೆಗಳಿಗೆ ದಂಡಿಯಾಗಿ ಉಪದೇಶವನ್ನೂ ನೀಡಿದೆ.

ಇನ್ನೀಗ ಆಗಬೇಕಿರುವುದು ಕಾವೇರಿ ಜಲವಿವಾದ, ಹೊಗೇನಕಲ್ ಹಗರಣ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಮುಂತಾಗಿ ತಮಿಳುನಾಡಿನೊಡನೆ ಜ್ವಲಂತವಾಗಿರುವ ಕರ್ನಾಟಕದ ಸಮಸ್ಯೆಗಳ ನಿವಾರಣೆ ಮತ್ತು ಬೆಂಗಳೂರಿನಲ್ಲಿ ತಮಿಳರೂ ಸೇರಿದಂತೆ ಕನ್ನಡೇತರರು ಮೇಲುಗೈ ಸಾಧಿಸಹೊರಡದೆ ಕನ್ನಡಿಗರೊಡನೆ ಬೆರೆತು, ಕನ್ನಡವನ್ನೇ ಮಾತಾಡುತ್ತ, ತಾವೂ ಕನ್ನಡನಾಡಿನ ಪ್ರಜೆಗಳೆಂಬ ವಾಸ್ತವವನ್ನು ಮನಸಾ ಸ್ವೀಕರಿಸಿ ಸಮಾನಭಾವದಿಂದ ಸಾಗುವಂಥ ವಾತಾವರಣದ ಸೃಷ್ಟಿ.

ತಮಿಳುನಾಡಿನೊಡನೆ ಮಾತುಕತೆ ಮೂಲಕ ಸಮಸ್ಯೆಗಳನ್ನು ನಿವಾರಿಸುವುದಾಗಿ ನಮ್ಮ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರತಿಮೆಯ ಸ್ಥಾಪನೆಯಾದ ಮರುಕ್ಷಣವೇ ಅವರು ಈ ಆಶ್ವಾಸನೆಯನ್ನು ಗಾಳಿಗೆ ತೂರಿಬಿಡುವ ಲಕ್ಷಣ ಅವರ ಇದುವರೆಗಿನ ಕಾರ್ಯವೈಖರಿಯನ್ನು ಗಮನಿಸಿದಾಗ ಕಾಣುತ್ತದೆ. ನಾಡಿನ ನೆಲ-ಜಲ-ಭಾಷೆಗಳ ವಿಷಯದಲ್ಲಿ ಹೀಗೆ ಮಾಡಿದರೆ ಅದು ಅಕ್ಷಮ್ಯ ಅಪರಾಧ. ನಾಡಿನ ಕೋಟ್ಯಂತರ ಜನರು ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಭವಿಷ್ಯದ ನಡೆಯೇನೆಂಬುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಮುಖ್ಯಮಂತ್ರಿಯವರು ತಾನು ನುಡಿದಂತೆ ನಡೆದು ತೋರಿಸಬೇಕು.

ಸಮಸ್ಯೆಗಳು ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳ ಮೆಟ್ಟಿಲು ಹತ್ತಿದ್ದರೂ ಉಭಯ ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದರೆ ಸಮಸ್ಯೆಗಳ ಇತ್ಯರ್ಥವು ಕಗ್ಗಂಟೇನಲ್ಲ. ಉಭಯ ರಾಜ್ಯಗಳೂ ಒಪ್ಪಂದವನ್ನು ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳಿಗೆ ಸೂಕ್ತ ಮನವಿಯೊಂದಿಗೆ ಕಾನೂನು ರೀತ್ಯಾ ಸಲ್ಲಿಸಿದರಾಯಿತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿಕೆ ವಿರೋಧಿಸಿ ಗಾಂಧಿ ಎಂಬುವವರು ತಾನು ಹೂಡಿರುವ ಮೊಕದ್ದಮೆಯನ್ನೂ ಕರುಣಾನಿಧಿ ಒಂದು ಸೂಚನೆ ಕೊಟ್ಟರೆ ಸಾಕು, ಹಿಂತೆಗೆದುಕೊಂಡುಬಿಡುತ್ತಾರೆ.

ಇನ್ನು, ಬೆಂಗಳೂರಿನಲ್ಲಿ ತಮಿಳರೂ ಸೇರಿದಂತೆ ಕನ್ನಡೇತರರ ವಿಷಯ. ಈ ವಿಷಯದಲ್ಲಿ ಸರ್ಕಾರದಷ್ಟೇ ಬೆಂಗಳೂರಿನ ಕನ್ನಡಿಗರೂ ಜವಾಬ್ದಾರರು. ಸರ್ಕಾರವು ಯಾವುದೇ ಕಾರಣಕ್ಕಾಗಲೀ ಕನ್ನಡೇತರರನ್ನು ಓಲೈಸುವ ಕೆಲಸಕ್ಕಿಳಿಯಬಾರದು. ಈ ಅನುಮಾನದಿಂದಲೇ ಹಲವರು ಪ್ರತಿಮೆ ಅನಾವರಣವನ್ನು ವಿರೋಧಿಸಿದ್ದೆಂಬುದನ್ನು ಸರ್ಕಾರವು ನೆನಪಿಟ್ಟುಕೊಳ್ಳಬೇಕು.

ಬೆಂಗಳೂರಿನಲ್ಲಿ (ಮತ್ತು ಇಡೀ ಕರ್ನಾಟಕದಲ್ಲೂ ಕೂಡ) ಕನ್ನಡಿಗರು ಕನ್ನಡೇತರರೊಡನೆ ಕನ್ನಡದಲ್ಲೇ ಮಾತನಾಡಬೇಕು ಮತ್ತು ವ್ಯವಹರಿಸಬೇಕು. ಇಂದಿನಿಂದ ಹೀಗೊಂದು ದೃಢಸಂಕಲ್ಪ ಮಾಡಬೇಕು. ಇದೇ ವೇಳೆ, ಕರ್ನಾಟಕದ ರಾಜಧಾನಿಯಲ್ಲಿ ಕನ್ನಡಿಗರು ಆಗಲೇ ಅಲ್ಪಸಂಖ್ಯಾತರಾಗಿಬಿಟ್ಟಿರುವುದರಿಂದ ಇನ್ನುಮೇಲೆ ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಜನರ ಪ್ರವಾಹೋಪಾದಿಯ ವಲಸೆಯನ್ನು ನಿಯಂತ್ರಿಸಲು ಸರ್ಕಾರವು ಕಾನೂನಿನ ಚೌಕಟ್ಟಿನೊಳಗೇ ಕ್ರಮಗಳನ್ನು ಕೈಗೊಳ್ಳಬೇಕು. ಉದ್ಯಮ, ನೌಕರಿ ಇತ್ಯಾದಿ ವಿಷಯಗಳಲ್ಲಿ ಇಂಥ ಕ್ರಮಗಳನ್ನು ಕೈಗೊಳ್ಳಲು ಸರ್ವಥಾ ಸಾಧ್ಯ.

ಶಾಲಾ ಪಠ್ಯದಲ್ಲಿ ಸರ್ವಜ್ಞನ ಬಗ್ಗೆ ಪಾಠವನ್ನು ತಮಿಳುನಾಡು ಸರ್ಕಾರವೂ, ತಿರುವಳ್ಳುವರ್ ಕುರಿತು ಪಾಠವನ್ನು ಕರ್ನಾಟಕ ಸರ್ಕಾರವೂ ಅಳವಡಿಸಲಿ. ತಿರುವಳ್ಳುವರ್ ಪ್ರತಿಮೆಯ ಅನಾವರಣವಾಗಿ ನಾಲ್ಕು ದಿನಗಳ ಅನಂತರ ಸರ್ವಜ್ಞನ ಪ್ರತಿಮೆಯು ಅನಾವರಣಗೊಳ್ಳುತ್ತಿದೆ. ಸರ್ವಜ್ಞನ ಪಾಠವನ್ನು ತಮಿಳುನಾಡು ಸರ್ಕಾರವು ಶಾಲಾಪಠ್ಯದಲ್ಲಿ ಅಳವಡಿಸಿದ ಶೈಕ್ಷಣಿಕ ವರ್ಷದ ಮುಂದಿನ ವರ್ಷ ನಾವು ತಿರುವಳ್ಳುವರ್ ಪಾಠವನ್ನು ಅಳವಡಿಸೋಣ. ಇದಕ್ಕೆ ತಮಿಳುನಾಡು ಸರ್ಕಾರ ಒಪ್ಪಲಿ. ಆಗ ನಮಗೆ ತಮಿಳುನಾಡು ಸರ್ಕಾರದಮೇಲೆ ನಂಬಿಕೆಯೂ ಬರುತ್ತದೆ, ಸೌಹಾರ್ದವೆಂಬ ಮಾತಿಗೆ ಬೆಲೆಯೂ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+