515938tunga riverಮಂಡಗದ್ದೆಯಲ್ಲಿ ಬಾನಾಡಿಗಳು ಸೃಷ್ಟಿಸಿದ ತಾರಲೋಕ/literature/my-karnataka/2009/0609-mandagadde-bird-sancturay-shivamogga.htmlಮಳೆಗಾಲ ಆರಂಭವಾಗುವ ಮೊದಲೇ ಬಾನಿನಿಂದ ಧರೆಗಿಳಿದು ಬಂದ ಮಿನುಗು ತಾರೆಗಳಂತೆ ಕಂಗೊಳಿಸುವ ದೇಶ ವಿದೇಶಗಳ ಬಾನಾಡಿಗಳಾಗಲೇ ಮಂಡಗದ್ದೆ ಪಕ್ಷಧಾಮಕ್ಕೆ ಆಗಮಿಸಿ ತಾರಾ ಲೋಕವನ್ನೇ ಸೃಷ್ಟಿಸಿದೆ. ತುಂಗಾನದಿ ತೀರದಲ್ಲಿ ಬೀಡುಬಿಟ್ಟಿರುವ ಬಾನಾಡಿಗಳು ಗೂಡು ಕಟ್ಟಲು ತಯಾರಾಗುತ್ತಿದ್ದು, ಮಳೆಬೀಳುವ ಮೊದಲೇ ತಮ್ಮ ತಮ್ಮ ಗೂಡುಗಳನ್ನು ಕಟ್ಟಿಕೊಂಡು safe ಆಗಿ ಬಿಡುವ ತರಾತುರಿಯಲ್ಲಿ ತೊಡಗಿರುವುದನ್ನು ನೋಡುವುದೇ ಒಂದು ಅದ್ಭುತ ಅನುಭವ.ಶಿವಮೊಗ್ಗದಿಂದ ಕೇವಲ 37239http://kannada.oneindia.com/img/2009/06/09-mandagadde1.jpg515938tunga riverಗಾಜನೂರು ತುಂಗಾ ಡ್ಯಾಂನಿಂದ ನೀರು ಬಿಡುಗಡೆ/cj/pasha/2009/0708-water-released-from-gajanuru-dam.htmlಶಿವಮೊಗ್ಗ, ಜು. 8 : ಶಿವಮೊಗ್ಗದಿಂದ ತೀರ್ಥಹಳ್ಳಿಯ ದಾರಿಯಲ್ಲಿ 10 ಕಿ.ಮೀ. ಸಾಗಿದರೆ ಗಾಜನೂರು ಎಂಬ ಹಳ್ಳಿ ಸಿಗುತ್ತದೆ. ತುಂಗಾ ಅಣೆಕಟ್ಟಿನಿಂದ ಈ ಗಾಜನೂರು ಪ್ರಖ್ಯಾತಿ ಗಳಿಸಿದೆ. ಕರ್ನಾಟಕದ ಅಪರೂಪದ ಪಿಕ್‌ನಿಕ್ ಸ್ಪಾಟ್ ಎಂದೇ ಕರೆಸಿಕೊಳ್ಳುವ ಗಾಜನೂರು ಅಣೆಕಟ್ಟೆ ತೀರ್ಥಹಳ್ಳಿ, ಆಗುಂಬೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮೈದುಂಬಿಕೊಂಡಿದ್ದು, ಮಂಗಳವಾರದಂದು ಡ್ಯಾಂನ 22 ಗೇಟ್‌ಗಳನ್ನು ತೆರೆದು ಸಾರ್ವಜನಿಕರಲ್ಲಿ ರೋಮಾಂಚನ ಮೂಡಿಸಿತ್ತು.ತುಂಗಾ 37869http://kannada.oneindia.com/img/2009/07/08-gajanuru-dam1.jpg515938tunga riverತುಂಬಿ ತುಳುಕುತ್ತಿರುವ ತುಂಗಾ ನದಿಗೆ ಈಶ್ವರಪ್ಪ ಬಾಗಿನ/cj/pasha/2009/0711-eshwarappa-offers-baagina-to-tunga.htmlಶಿವಮೊಗ್ಗ, ಜು. 11 : ರಾಜ್ಯದ ಕೈಗಾರಿಕೆಗಳಿಗೆ ನಿರಂತರ 24 ಗಂಟೆ ವಿದ್ಯುತ್ ಒದಗಿಸುವ ಕುರಿತು ಚರ್ಚೆ ಹಾಗೂ ಶೇ.20ರಷ್ಟು ವಿದ್ಯುತ್ ದರ ಏರಿಕೆಯಾಗುವ ಸಂಭವವಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಶನಿವಾರ ಗಾಜನೂರು ಜಲಾಶಯ ಭರ್ತಿ ಮಾಡಿರುವ ತುಂಗಾ ನದಿಗೆ ಬಾಗಿನ ಅರ್ಪಿಸಿದ ನಂತರ ಹೇಳಿದರು.ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಜೊತೆಗೆ ಚರ್ಚೆ ನಡೆಸಿದ್ದು, ರಾಜ್ಯದ 37924http://kannada.oneindia.com/img/2009/07/11-eshwarappa-tunga1.jpg515938tunga riverಭಾರೀ ಮಳೆಗೆ ತುಂಬಿ ಹರಿಯುತ್ತಿರುವ ತುಂಗಾ/cj/somanath/2009/0715-shivamogga-heavy-rain-tunga-overflowing.htmlಶಿವಮೊಗ್ಗ, ಜು. 15 : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ನಿನ್ನೆ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಎಲ್ಲಾ ಪ್ರಮುಖ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.ನಗರದಲ್ಲಿ ಹರಿಯುವ ತುಂಗಾ ನದಿಯು ತುಂಬಿ ಹರಿಯುತ್ತಿದ್ದು, ಅಪಾಯ ಮಟ್ಟ ತಲುಪಿದೆ. ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ತುಂಗಾ 37999http://kannada.oneindia.com/img/2009/07/15-shivamogga-tunga1.jpg515938tunga riverನೆರೆ ಹಾವಳಿಗೀಡಾದ ಪ್ರದೇಶಗಳಿಗೆ ಈಶ್ವರಪ್ಪ ಭೇಟಿ/cj/somanath/2009/0718-eshwarappa-visits-rain-affected-localities.htmlಶಿವಮೊಗ್ಗ, ಜು. 18 : ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೆರೆ ಹಾವಳಿಯಿಂದಾಗಿ ಹಾನಿಗೊಳಗಾಗಿರುವ ಜಿಲ್ಲೆಯ ಪ್ರದೇಶಗಳಿಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಸಂತ್ರಸ್ತರಿಗೆ ಕೂಡಲೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಮಂಡಗದ್ದೆ ಸೇರಿದಂತೆ ಹಲವು ಗ್ರಾಮಗಳು ಜಲಾವೃತವಾಗಿವೆ. ಶಿವಮೊಗ್ಗ ನಗರದಲ್ಲಿ ಕೂಡ ನೆರೆಯಿಂದಾಗಿ ಜನಜೀವನ 38067http://kannada.oneindia.com/img/2009/07/18-eshwarappa-flood1.jpg480301mohanನಟ ಗಣೇಶ್ ರಿಂದ ರಕ್ತದಾನ ಶಿಬಿರಕ್ಕೆ ಚಾಲನೆ/movies/hero/2009/04/27-actor-ganesh-inaugurates-blood-donation-camp.htmlಸಂತ ನಿರಂಕಾರಿ ಮಂಡಲವು ಆಧ್ಯಾತ್ಮಿಕ ನಾಯಕ ಬಾಬಾ ಗುರುಬಚ್ಚನ್ ಸಿಂಗ್ ಅವರ ಪುಣ್ಯತಿಥಿಯ ಸಲುವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿತ್ತು. ಇದರ ಉದ್ಘಾಟನೆಯನ್ನು ನಟ ಗಣೇಶ್ ನೆರವೇರಿಸಿದರು. ಚಿತ್ರದಲ್ಲಿ ಬಾಲನಟ ಹಾಗೂ ನಿರ್ದೇಶಕ ಮಾ:ಕಿಶನ್, ಬೆಂಗಳೂರು ದೂರದರ್ಶನ ನಿರ್ದೇಶಕರಾದ ಮಹೇಶ್ ಜೋಷಿ, ಸಮಿತಿಯ ಉಪಾಧ್ಯಕ್ಷರಾದ ದೇವರಾಜ್ ಬಜಾಜ್, ರೆಡ್‌ಕ್ರಾಸ್ ಸಂಸ್ಥೆಯ ಖಜಾಂಚಿ ರಾಜುಚಂದ್ರಶೇಖರ್ ಹಾಗೂ ಆನಂದ್ ಆಡಿಯೋ 36235http://kannada.oneindia.com/img/2009/04/27-ganesh-blood-donation2.jpg480301mohanಮಂಡಗದ್ದೆಯಲ್ಲಿ ಬಾನಾಡಿಗಳು ಸೃಷ್ಟಿಸಿದ ತಾರಲೋಕ/literature/my-karnataka/2009/0609-mandagadde-bird-sancturay-shivamogga.htmlಮಳೆಗಾಲ ಆರಂಭವಾಗುವ ಮೊದಲೇ ಬಾನಿನಿಂದ ಧರೆಗಿಳಿದು ಬಂದ ಮಿನುಗು ತಾರೆಗಳಂತೆ ಕಂಗೊಳಿಸುವ ದೇಶ ವಿದೇಶಗಳ ಬಾನಾಡಿಗಳಾಗಲೇ ಮಂಡಗದ್ದೆ ಪಕ್ಷಧಾಮಕ್ಕೆ ಆಗಮಿಸಿ ತಾರಾ ಲೋಕವನ್ನೇ ಸೃಷ್ಟಿಸಿದೆ. ತುಂಗಾನದಿ ತೀರದಲ್ಲಿ ಬೀಡುಬಿಟ್ಟಿರುವ ಬಾನಾಡಿಗಳು ಗೂಡು ಕಟ್ಟಲು ತಯಾರಾಗುತ್ತಿದ್ದು, ಮಳೆಬೀಳುವ ಮೊದಲೇ ತಮ್ಮ ತಮ್ಮ ಗೂಡುಗಳನ್ನು ಕಟ್ಟಿಕೊಂಡು safe ಆಗಿ ಬಿಡುವ ತರಾತುರಿಯಲ್ಲಿ ತೊಡಗಿರುವುದನ್ನು ನೋಡುವುದೇ ಒಂದು ಅದ್ಭುತ ಅನುಭವ.ಶಿವಮೊಗ್ಗದಿಂದ ಕೇವಲ 37239http://kannada.oneindia.com/img/2009/06/09-mandagadde1.jpg480301mohanಮಲೆನಾಡ ಮಡಿಲಲ್ಲಿ ಮಿನಿ ವಿಧಾನಸೌಧ/cj/k-mohan/2009/0701-mini-vidhana-soudha-in-shivamogga.htmlಶಿವಮೊಗ್ಗ, ಜು. 1 : ನಗರದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸಧ್ಯದಲ್ಲಿಯೇ ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದಾಗಿದೆ. ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಮಿನಿ ವಿಧಾನಸೌಧ ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಅದ್ಭುತ ವಿನ್ಯಾಸದೊಂದಿಗೆ ನಿರ್ಮಾಣವಾಗುತ್ತಿದೆ.ಕಟ್ಟಡ ಸುಮಾರು 35 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣವಾಗುತ್ತಿದ್ದು, ಅಂದಾಜು ವೆಚ್ಚ 37713http://kannada.oneindia.com/img/2009/07/01-shivamogga-mini-soudha1.jpg480301mohanಕೆಸರು ಕದ್ದೆಯಾಗಿರುವ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ/cj/k-mohan/2009/0704-pathetic-state-of-shivamogga-private-busstand.htmlಶಿವಮೊಗ್ಗ, ಜು. 4 : ಮುಖ್ಯ ಮಂತ್ರಿ ಯಡಿಯೂರಪ್ಪರವರ ತವರು ಜಿಲ್ಲೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ನರಕಕ್ಕೆ ಹೋದಂತೆ ಭಾಸವಾಗುತ್ತಿದೆ. ಏಕೆಂದರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಈ ಖಾಸಗಿ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೇ ಕೆಸರು ಗದ್ದೆಯಂತಾಗಿರುವುದು ನಿಜಕ್ಕೂ ಶೋಚನೀಯ.ಜಿಲ್ಲೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರೇ ಹೊಂದಿದ್ದಾರೆ. ಆದರೆ, ಜನತೆಯ ದೌರ್ಭಾಗ್ಯವೋ ಅಥವಾ ಮುಖ್ಯಮಂತ್ರಿಗಳ 37778http://kannada.oneindia.com/img/2009/07/04-shivamogga-bus-stand1.jpg480301mohanಕೃಷ್ಣ ನೀ ಲೇಟಾಗಿ ಬಾರೋ ಶೀಘ್ರದಲ್ಲೇ ತೆರೆಗೆ!/movies/studio/2009/07/08-ramesh-aravind-in-krishna-nee-letagi-baro.htmlಎಂ.ಡಿ ಪ್ರಕಾಶ್ ನಿರ್ಮಿಸುತ್ತಿರುವ 'ಕೃಷ್ಣ ನೀ ಲೇಟಾಗಿ ಬಾರೊ' ಚಿತ್ರಕ್ಕೆ ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳುತ್ತಿದ್ದಾರೆ ನಿರ್ದೇಶಕ ಮೋಹನ್. ರಮೇಶ್ ಅರವಿಂದ್, ನಿಧಿ ಸುಬ್ಬಯ್ಯ, ಮೋಹನ್ ಮತ್ತು ನೀತೂ ಚಿತ್ರದ ಮುಖ್ಯ ಪಾತ್ರಧಾರಿಗಳು. ಪ್ರವೀಣ್ ಗೋಡ್ಕಿಂಡಿ ಸಂಗೀತ ಚಿತ್ರಕ್ಕಿದೆ.ಮಡಿಕೇರಿಯಲ್ಲಿ ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಚಿತ್ರದ ಮಾತಿನ ಭಾಗ ಹಾಗೂ 3 ಹಾಡುಗಳ 37864http://kannada.oneindia.com/img/2009/07/08-ramesh-arvind1.jpg154972shivamoggaಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ರಾಘವೇಂದ್ರ ಸ್ಪರ್ಧೆ /news/2009/02/27/yeddyurappa-son-b-y-raghavendra-tocontest-ls-poll.htmlಬೆಂಗಳೂರು. ಫೆ. 27 : ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಂದೊಂದು ದಿನ ತಮ್ಮ ನಿಲುವು ತೊಡರುಗಾಲು ಆಗುವುದು ಎಂದು ಉಹಿಸಿರಲಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ತಮ್ಮಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸುವ ಕುರಿತು ಒಲ್ಲದ ಮನಸ್ಸಿನಿಂದ ರಾಘು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಗೆಲ್ಲುವು ಕುದುರೆಯ ತಲಾಶೆಯಲ್ಲಿರುವ ಬಿಜೆಪಿ ವರಿಷ್ಠರಿಗೆ ಸಿಎಂ ಪುತ್ರ 34902http://kannada.oneindia.com/img/2009/02/27-raghavendra1.jpg154972shivamoggaಸಿಎಂ ಪುತ್ರ ಸ್ಪರ್ಧೆಗೆ ಕುಮಾರಸ್ವಾಮಿ ತೀವ್ರ ವಿರೋಧ/news/2009/03/06/bjp-party-has-no-ethics-hd-kumaraswamy-ls-polls.htmlಬೆಂಗಳೂರು, ಮಾ. 6 : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸಿಎಂ ಪುತ್ರ ರಾಘವೇಂದ್ರ ಸ್ಪರ್ಧಿಸುವ ವಿಷಯ ಇದೀಗ ಪ್ರತಿಪಕ್ಷಗಳ ಮುಖಂಡರ ಟೀಕೆ, ಲೇವಡಿಯ ಅಸ್ತ್ರವಾಗಿ ಮಾರ್ಪಟಾಗಿದೆ. ರಾಘವೇಂದ್ರ ಸ್ಪರ್ಧೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಟು ಶಬ್ದಗಳಲ್ಲಿ ಟೀಕಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಇದೀಗ ಬಿಜೆಪಿ ಕೂಡ 'ಅಪ್ಪ ಮಕ್ಕಳ ಪಕ್ಷ' ಎಂದು ಲೇವಡಿ 35038http://kannada.oneindia.com/img/2009/03/06-kumaraswami8.jpg154972shivamoggaಯಡಿಯೂರಪ್ಪ ಪುತ್ರ ವ್ಯಾಮೋಹಿ, ಮುತಾಲಿಕ್ ಟೀಕೆ/news/2009/03/08/pramod-mutalik-opposes-cm-sons-contest-ls-polls09.htmlಚಿಕ್ಕಮಗಳೂರು, ಮಾ. 8 : ಯಡಿಯೂರಪ್ಪ ಪುತ್ರ ರಾಘವೇಂದ್ರನಿಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅನುಭವವೂ ಇಲ್ಲ, ಅರ್ಹತೆಯೂ ಇಲ್ಲ ಎಂದು ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ದೇಶ ಮುನ್ನೆಡೆಸುವ ಮಹತ್ವದ ಸ್ಥಾನಕ್ಕೆ ರಾಘವೇಂದ್ರ ಸ್ಪರ್ಧಿಸುವುದು ಉಚಿತವಲ್ಲ ಎಂದು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 35079http://kannada.oneindia.com/img/2009/03/08-raghavendra1.jpg154972shivamoggaಹಳ್ಳಿ ಹುಡುಗರ ಉಳಿಮನೆ (ಹೋಂಸ್ಟೇ)'ನಮ್ಮನೆ'/travel/karnataka/help/2009/0316-nammane-home-stay-talavata-shivamogga.htmlಕೆಲಸ ಅರಸುತ್ತಿರುವ ಹಳ್ಳಿ ಯುವಕರು ಬೆಂಗಳೂರಿಗೆ, ಕೆಲಸ ಸಿಕ್ಕ ಹಳ್ಳಿ ಸಾಫ್ಟ್ ವೇರ್ ಇಂಜಿನಿಯರುಗಳು ಡಾಲರ್ ಕನಸಿನಲ್ಲಿ ವಿದೇಶಕ್ಕೆ ಜಿಗಿಯುತ್ತಿರುವ ಸಂದರ್ಭದಲ್ಲಿ ಸಮಾನಮನಸ್ಕ ಶಿವಮೊಗ್ಗ ಜಿಲ್ಲೆ ತಳವಾಟದ ಹಳ್ಳಿ ಯುವಕರು ಪಟ್ಟಣಿಗರನ್ನೇ ಹಳ್ಳಿಗೆ ಸೆಳೆಯುವ ಕೈಂಕರ್ಯಕ್ಕೆ ಕೈಹಾಕಿದ್ದಾರೆ. ಪಟ್ಟಣ ಸೇರಬೇಕೆನ್ನುವ ಯುವಕರಿಗೆ ಮಾದರಿಯಾಗಿದ್ದಾರೆ. ಎಂಥವರ ಕೈಗೂ ನಿಲುಕುವ ಹೋಂಸ್ಟೇ ನಿರ್ಮಿಸಿ ಊಟ ವ್ಯವಸ್ಥೆಯ ಆತಿಥ್ಯ ನೀಡಿ ಉಪಜೀವನಕ್ಕೆ 35259http://kannada.oneindia.com/img/2009/03/16-nammane-homestay2.jpg154972shivamoggaಕಾಗೋಡು ತಿಮ್ಮಪ್ಪ ವಿರುದ್ದ ಎಫ್ಐಆರ್ ದಾಖಲು/news/2009/04/05/criminal-complaint-against-kagodu-timmappa.htmlಬೆಂಗಳೂರು, ಏ. 5 : ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ ವರದಿ ನೀಡುವಂತೆ ಸುರತ್ಕಲ್ ಠಾಣೆಯ ಪೊಲೀಸರಿಗೆ ಇಲ್ಲಿನ ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಎಸ್ ಎನ್ ಮಹಮದಾಪುರ್ ಶನಿವಾರ ಆದೇಶ ನೀಡಿದ್ದಾರೆ. ಸಾಗರದಲ್ಲಿ ಚುನಾವಣೆ ಪ್ರಚಾರ ವೇಳೆಯಲ್ಲಿ ಹಿಂದುತ್ವದ ಪರ 35738http://kannada.oneindia.com/img/2009/04/05-kagodu-timmappa2.jpgnews"> ಮಂಡಗದ್ದೆಯಲ್ಲಿ ಬಾನಾಡಿಗಳು ಸೃಷ್ಟಿಸಿದ ತಾರಲೋಕ | Mandagadde | Bird sanctuary | Tunga river | Migratory birds - ಮಂಡಗದ್ದೆಯಲ್ಲಿ ಬಾನಾಡಿಗಳು ಸೃಷ್ಟಿಸಿದ ತಾರಲೋಕ - Kannada Oneindia

ಮಂಡಗದ್ದೆಯಲ್ಲಿ ಬಾನಾಡಿಗಳು ಸೃಷ್ಟಿಸಿದ ತಾರಲೋಕ

Mandagadde bird sancturay
ಮಳೆಗಾಲ ಆರಂಭವಾಗುವ ಮೊದಲೇ ಬಾನಿನಿಂದ ಧರೆಗಿಳಿದು ಬಂದ ಮಿನುಗು ತಾರೆಗಳಂತೆ ಕಂಗೊಳಿಸುವ ದೇಶ ವಿದೇಶಗಳ ಬಾನಾಡಿಗಳಾಗಲೇ ಮಂಡಗದ್ದೆ ಪಕ್ಷಧಾಮಕ್ಕೆ ಆಗಮಿಸಿ ತಾರಾ ಲೋಕವನ್ನೇ ಸೃಷ್ಟಿಸಿದೆ. ತುಂಗಾನದಿ ತೀರದಲ್ಲಿ ಬೀಡುಬಿಟ್ಟಿರುವ ಬಾನಾಡಿಗಳು ಗೂಡು ಕಟ್ಟಲು ತಯಾರಾಗುತ್ತಿದ್ದು, ಮಳೆಬೀಳುವ ಮೊದಲೇ ತಮ್ಮ ತಮ್ಮ ಗೂಡುಗಳನ್ನು ಕಟ್ಟಿಕೊಂಡು safe ಆಗಿ ಬಿಡುವ ತರಾತುರಿಯಲ್ಲಿ ತೊಡಗಿರುವುದನ್ನು ನೋಡುವುದೇ ಒಂದು ಅದ್ಭುತ ಅನುಭವ.

ಶಿವಮೊಗ್ಗದಿಂದ ಕೇವಲ 32 ಕಿ.ಮೀ. ದೂರದಲ್ಲಿರುವ ಮಂಡಗದ್ದೆ ಪಕ್ಷಿಧಾಮದ ಸುತ್ತ ಸುಂದರ ಪರಿಸರವನ್ನು ಹೊಂದಿದ್ದು, ಮಲೆನಾಡ ಸೊಬಗನ್ನು ಮೈತಳೆದು ನಿಂತಿದೆ. ಸುತ್ತಮುತ್ತಲು ಕಾಡು, ಗದ್ದೆ ಬಯಲುಗಳು ಇವುಗಳೇ ಕಣ್ಣಿಗೆ ಬೀಳುತ್ತವೆ. ತುಂಗೆ ಇಲ್ಲಿ ಸಣ್ಣ ದ್ವೀಪಗಳನ್ನು ನಿರ್ಮಿಸಿದ್ದಾಳೆ. ಈ ದ್ವೀಪದಲ್ಲಿರುವ ಮರಗಳೇ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ದೂರದೂರುಗಳಿಂದ ಮೇ ತಿಂಗಳಿನಲ್ಲಿ ಹಾರಿ ಬರುವ ಬೆಳ್ಳಕ್ಕಿ, ಇಗ್ರೇಟ್ಸ್, ಸ್ನೇಕ್‌ಬರ್ಡ್, ಕಾರ್ಮೋರೆಂಡ್ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡಿ ನಂತರ ಮರಿಗಳೊಂದಿಗೆ ಹಾರಿ ಹೋಗುತ್ತದೆ. ಇವುಗಳನ್ನು ನೋಡಲು ಪ್ರವಾಸಿಗರು ಬರುತ್ತಿರುತ್ತಾರೆ. ಪಕ್ಷಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣ. ಜೊತೆಗೆ ಮಕ್ಕಳೊಂದಿಗೆ ಭೇಟಿ ನೀಡಿ ರಜೆಯನ್ನು ಆನಂದದಿಂದ ಕಳೆಯಬಹುದು.

ಇಲ್ಲಿ ಬಾನಾಡಿಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಬಹುದು. ಇವುಗಳು ಮೊಟ್ಟೆ ಇಟ್ಟು ಮರಿ ಮಾಡಿದಾಗ ಚಿಕ್ಕಪುಟ್ಟ ಮರಿಗಳಿಗೆ ಆಹಾರ ತಂದು ಅವುಗಳಿಗೆ ಉಣಬಡಿಸುವ ರೀತಿ ಅವುಗಳ ಕಲರವ, ಹಾರಾಟ, ಮೀನಿನ ಬೇಟೆ ಎಲ್ಲವೂ ಚೆನ್ನ. ಈ ಸಮಯದಲ್ಲಿ ಹೋದರಂತೂ ಹಕ್ಕಿಗಳು ತಮ್ಮ ವಂಶಾಭಿವೃದ್ಧಿಗಾಗಿ ಗೂಡು ನಿರ್ಮಿಸುವ ಕಾರ್ಯದಲ್ಲಿ ತೊಡಗಿ, ಕಸ ಕಡ್ಡಿಗಳನ್ನು ಆರಿಸಿ ತಂದು ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ನಂತರ ಮರಿಗಳ ಪಾಲನೆಯಲ್ಲಿ ತೊಡಗುತ್ತವೆ. ಎಲ್ಲವೂ ಪಕ್ಷಿ ಪ್ರಿಯರ ಪಾಲಿಗೆ ರಸದೌತಣ. ನವೆಂಬರ್ ತಿಂಗಳಿನಲ್ಲಿ ಅವುಗಳು ಹಾರಿ ಹೋಗುತ್ತದೆ. ಜೊತೆಗೆ ತುಂಗೆಯು ತನ್ನ ಹರಿವನ್ನು ಕಡಿಮೆ ಮಾಡುತ್ತಾಳೆ.

ಇಲ್ಲಿ ಜೂನ್, ಆಗಸ್ಟ್ ತಿಂಗಳಲ್ಲಿ ಮಳೆ ಅಧಿಕವಾಗಿರುವುದರಿಂದ ತುಂಗೆಯು ರೌದ್ರವತಾರ ತಾಳುತ್ತಾಳೆ. ಇದರಿಂದಾಗಿ ಹಲವು ಬಾರಿ ಗೂಡಿನ ಜೊತೆಗೆ ಮೊಟ್ಟೆಗಳು ತುಂಗೆಯ ಪಾಲಾಗಿವೆ. ಪ್ರಕೃತಿ ನಿಯಮವನ್ನು ಭೇದಿಸಲು ಸಾಧ್ಯವೆ... ಹಲವು ಬಾರಿ ಈ ಘಟನೆ ಸಂಬವಿಸಿದರೂ ಮರುವರ್ಷ ಮೇ/ಜೂನ್ ತಿಂಗಳಲ್ಲಿ ಹಳೆಯದನ್ನೆಲ್ಲ ಮರೆತು ಮತ್ತೆ ಮಂಡಗದ್ದೆಗೆ ಬಾನಾಡಿಗಳು ಹಾಜರ್.

ಹೀಗಾಗಿ ಮಂಡಗದ್ದೆ ಪಕ್ಷಿಧಾಮ ಒಂದು ದಿನದ ಪ್ರವಾಸಕ್ಕೆ, ಮಲೆನಾಡ ಸೊಬಗನ್ನು ಸವಿಯಲು, ಪಕ್ಷಿಗಳ ವೀಕ್ಷಣೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಹಾಗೆಯೇ ನಗರದಿಂದ ಹೋಗುವಾಗ ಗಾಜನೂರು ಅಣೆಕಟ್ಟೆ, ಸಕ್ರೆಬೈಲು ಆನೆಬಿಡಾರ, ಸುಂದರಕಾಡು ಎಲ್ಲವನ್ನು ನೋಡಿಕೊಂಡು ಸಾಗಬಹುದು.

ವೀಕ್ಷಣೆಗೆ ಹೋದಾಗ ಬಾನಾಡಿಗಳು ಗೂಡು ಕಟ್ಟಲು ಕಸ ಕಡ್ಡಿಗಳನ್ನು ಆರಿಸಿ ತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇಶ ವಿದೇಶಗಳಿಂದ ಮೇ ತಿಂಗಳಲ್ಲಿ ಇಲ್ಲಿನ ಪಕ್ಷಧಾಮಕ್ಕೆ ಆಗಮಿಸಿ ತಮ್ಮ ವಂಶಾಭಿವೃದ್ಧಿಯನ್ನು ಮಾಡಿಕೊಂಡು ಇಲ್ಲಿಂದ ನಿರ್ಗಮಿಸುತ್ತವೆ. ನಂತರ ಮಂಡಗದ್ದೆ ಪಕ್ಷಿಧಾಮ ಖಾಲಿ ಖಾಲಿ. ಮತ್ತೆ ಅದಕ್ಕೆ ಕಳೆ ಬರುವುದು ಮೇ ತಿಂಗಳಲ್ಲಿ ಬಾನಾಡಿಗಳ ಪುನರ್ ಆಗಮನದಿಂದಲೇ...

ಒಟ್ಟಾರೆಯಾಗಿ ಮಂಡಗದ್ದೆ ಪಕ್ಷಿಧಾಮ ಒಂದು ದಿನದ ಮಟ್ಟಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಜಾಗ. ಜೊತೆಗೆ ಹೊತ್ತು ಹೋಗುವುದು ಗೊತ್ತಾಗುವುದಿಲ್ಲ. ಸಂಜೆಯಾಗುತ್ತಿದ್ದಂತೆ ಅಲ್ಲಿಂದ ಹೊರಟರೆ ಕತ್ತಲ ಹಾದಿಯಲ್ಲಿ ಕಾಡಿನ ನಡುವೆ ಬರುವುದು ಮತ್ತೊಂದು ರೀತಿಯ ಕುತೂಹಲ ಸೃಷ್ಟಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+