ಗಣಪತಿ ಭಟ್, ಶ್ರೀಧರ್ ಸೇರಿದಂತೆ 18 ಕಲಾಸಾಧಕರಿಗೆ ಪ್ರಶಸ್ತಿ
ಬೆಂಗಳೂರು, ಆಗಸ್ಟ್ 02 : ನಾದಗ್ರಾಮ ಸೃಷ್ಟಿಕರ್ತ ಹಿಂದೂಸ್ತಾನಿ ಗಾಯಕ ಗಣಪತಿ ಭಟ್ ಮತ್ತು ಭರತನಾಟ್ಯ ಪ್ರವೀಣ ನಟ ಶ್ರೀಧರ್ ಸೇರಿದಂತೆ 18 ಕಲಾಸಾಧಕರನ್ನು 2007-08 ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಕಾಡೆಮಿ ಅಧ್ಯಕ್ಷ ರಾಜಶೇಖರ್ ಮನ್ಸೂರ್ ಅವರು ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ ಡಿಸೆಂಬರ್ ಮೊದಲ ವಾರದಲ್ಲಿ ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಗೌರವ ಪ್ರಶಸ್ತಿ ಪುರಸ್ಕೃತರಿಗೆ ಹತ್ತು ಸಾವಿರ ರುಪಾಯಿ ಮತ್ತು ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ಐದು ಸಾವಿರ ರುಪಾಯಿ ನೀಡಲಾಗುವುದು. ಇದರೊಂದಿಗೆ ಶಾಲು, ಹಾರ, ಫಲ-ತಾಂಬೂಲ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.
ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ:
ಕರ್ನಾಟಕ ಸಂಗೀತ
ಡಾ.ರತ್ನಾ ಶಿವಶಂಕರ್, ಬೆಂಗಳೂರು (ಹಾಡುಗಾರಿಕೆ)
ಬಿ.ಜಿ.ಶ್ರೀನಿವಾಸ, ಬೆಂಗಳೂರು (ಕೊಳಲು)
ಕೆ.ಜೆ.ವೆಂಕಟೇಶಾಚಾರ್, ಮೈಸೂರು (ಪಿಟೀಲು)
ಹಿಂದೂಸ್ತಾನಿ ಸಂಗೀತ
ಗಣಪತಿ ಭಟ್ ಹಾಸಣಗಿ, ಉತ್ತರ ಕನ್ನಡ (ಗಾಯನ)
ಎಂ.ವೆಂಕಟೇಶಕುಮಾರ್, ಧಾರವಾಡ (ಗಾಯನ)
ಅಕ್ಕಮಹಾದೇವಿ ಹಿರೇಮಠ, ಧಾರವಾಡ (ಪಿಟೀಲು)
ಭರತನಾಟ್ಯ
ಚಿತ್ರನಟ ಶ್ರೀಧರ್, ಬೆಂಗಳೂರು
ನಿರ್ಮಲಾ ಮಂಜುನಾಥ್, ಬೆಂಗಳೂರು
ಕೆ.ಜಿ.ಕುಲಕರ್ಣಿ, ಹಾವೇರಿ
ಕುಮುದಿನಿರಾವ್, ಧಾರವಾಡ
ಸುಗಮ ಸಂಗೀತ
ನಾರಾಯಣ ಢಗೆ, ರಾಯಚೂರು
ಕಥಾಕೀರ್ತನ
ಬಿ.ಪಿ. ರಾಜಮ್ಮ, ಬೆಂಗಳೂರು
ಡಾ.ಎಂ.ಕಿರಣಕುಮಾರ್, ಬೆಂಗಳೂರು
ಗಮಕವಾಚನ
ಕೆ.ಜಯಮ್ಮ, ಹಾಸನ
ಎಂ.ಆರ್.ಸತ್ಯನಾರಾಯಣ, ಬೆಂಗಳೂರು
ಸಂಘಸಂಸ್ಥೆ
ಕುಮಾರವ್ಯಾಸ ಮಂಟಪ, ರಾಜಾಜಿನಗರ, ಬೆಂಗಳೂರು
ಗೌರವ ಪ್ರಶಸ್ತಿಗಾಗಿ ಕರ್ನಾಟಕ ಸಂಗೀತಜ್ಞೆ ಎಂ.ಎಸ್.ಶೀಲಾ ಮತ್ತು ಭರತನಾಟ್ಯ ಕಲಾವಿದೆ ಡಾ.ತುಳಸಿ ರಾಮಚಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications