ಕೆಸಿಎಯಲ್ಲಿ ಅನುರಾಗ್‌ ಆಲಾಪ

ಕರ್ನಾಟಕ ಸಾಂಸ್ಕೃತಿಕ ಸಂಘವು ಹಿಂದುಸ್ತಾನೀ ಗಾಯಕ ಅನುರಾಗ್‌ ಹರ್ಷ್‌ ಅವರ ಧಾರ್ಮಿಕ ಮತ್ತು ಶಾಸ್ತ್ರೀಯ ಗಾಯನ ಕಚೇರಿಯನ್ನು ಆಗಸ್ಟ್‌ 3ರಂದು ಆಯೋಜಿಸಿದೆ.
ರಾತ್ರಿ 9 ಗಂಟೆಗೆ ಆರಂಭವಾಗುವ ಕಾರ್ಯಕ್ರಮ ನಡೆಯುವ ಸ್ಥಳ - Chinmaya Mission KASI Center, 899 S.Disneyland Dr. Anaheim . Tel : 7149915274 ಅನುರಾಗ್‌ ಅವರಿಗೆ ಸಾಥ್‌ ನೀಡುವವರು: ಹೇಮಂತ್‌ ಏಕಬೋಟೆ - ತಬಲಾ, ಚಂದ್ರಶೇಖರ್‌ ಐತಾಳ್‌ - ಹಾರ್ಮೋನಿಯಂ, ದೀಪಾ ರವಿಕುಮಾರ್‌ - ತಂಬೂರಿ.

ಯಾರೀ ಅನುರಾಗ್‌ ಹರ್ಷ್‌ ?:
ಅನುರಾಗ್‌ 28 ರ ಯುವಕ. ಕಂಪ್ಯೂಟರ್‌ ತಜ್ಞ. ಗಂಧರ್ವರ ಬಳಿ ಸಂಗೀತ ಅಲಂಕಾರ (M.Mus) ಕಲಿತು, 17ನೇ ವಯಸ್ಸಿಗೇ ಭಾರತದ ಸಂಗೀತ ಸಂಶೋಧನಾ ಅಕಾಡೆಮಿ ಆಯಾಜಿಸಿದ್ದ ಅಖಿಲ ಭಾರತ ಗೋಲ್ಡನ್‌ ಗ್ರೇಟ್ಸ್‌ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರೀಯ ಗೌರವ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪಂಡಿತ್‌ ಚಂದ್ರಕಾಂತ್‌ ಆಪ್ಟೆ ಅವರ ಶಿಷ್ಯರಾದ ಅನುರಾಗ್‌, ಭೀಮ್‌ಸೇನ್‌ ಜೋಶಿಯವರ ಶೈಲಿಯನ್ನೂ ಅಭ್ಯಾಸ ಮಾಡಿದ್ದಾರೆ.

ಸಂಗೀತ ಕಚೇರಿಗೆ ಶುಲ್ಕವೇನೂ ಇಲ್ಲ. ಅಂದು ಚಿನ್ಮಯಾನಂದರಮಹಾಸಮಾಧಿ ದಿನವಾದ್ದರಿಂದ ಸಂಜೆ 6.45ಕ್ಕೆ ವಿಶೇಷ ಪೂಜೆಯೂ ಇರುತ್ತದೆ. ಮನೆಯವರೊಂದಿಗೆ ಮತ್ತು ಸ್ನೇಹಿತರ ಜೊತೆ ಎಲ್ಲರೂ ಬರಬೇಕು ಅಂತ ಕೆಸಿಎ ವಿನಂತಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+