ನಾಡಗೀತೆಗೆ ವಿವಾದ: ಕತ್ತರಿಸಿದ ಸಾಲುಗಳನ್ನು ಅಂಟಿಸಿದ ಸರ್ಕಾರ
ಬೆಂಗಳೂರು : ನಾಡಗೀತೆಯ ಕತ್ತರಿ ಪ್ರಯೋಗ ಆದೇಶವನ್ನು ರಾಜ್ಯ ಸಚಿವ ಸಂಪುಟ ವಾಪಸು ಪಡೆದಿದ್ದು, ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಗೀತೆಯ ಮೂಲ ಪಠ್ಯವನ್ನು ನಾಡಗೀತೆಯಾಗಿ ಪುನಃ ಅಂಗೀಕರಿಸಿದೆ.
ಶಂಕರ ರಾಮಾನುಜ ವಿದ್ಯಾರಣ್ಯ / ಬಸವೇಶ್ವರ ರಿಹ ದಿವ್ಯಾರಣ್ಯ ಎನ್ನುವ ಚರಣಗಳು ಸೇರಿದಂತೆ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಕವಿತೆಯ ಎಲ್ಲ ಸಾಲುಗಳನ್ನೂ , ಆ ಸಾಲುಗಳ ಮೂಲರೂಪದಲ್ಲಿಯೇ ನಾಡಗೀತೆಯನ್ನಾಗಿ ಸರ್ಕಾರ ಅಂಗೀಕರಿಸಿದೆ. ಜ.20ರ ಮಂಗಳವಾರ ನಡೆದ ಸಚಿವ ಸಂಪುಟ ಸಭೆ ಈ ಮಹತ್ವದ ತೀರ್ಮಾನ ಕೈಗೊಂಡಿತು. ಸರ್ಕಾರ ಅಂಗೀಕರಿಸಿರುವ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರು ಇಲ್ಲ .
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಸಚಿವ ಡಾ.ಜಿ.ಪರಮೇಶ್ವರ- ಸರ್ಕಾರ ನಾಡಗೀತೆಯ ಸಾಹಿತ್ಯದಲ್ಲಿ ಹೊಸತನ್ನು ಸೇರಿಸುವುದೂ ಇಲ್ಲ , ಮೂಲರೂಪವನ್ನು ಬಿಡುವುದೂ ಇಲ್ಲ ಎಂದರು.
(ಇನ್ಫೋ ವಾರ್ತೆ)












Click it and Unblock the Notifications