ಮೋಹನ್ ಭಾಗವತ್ ರಿಂದ ಆ.12ಕ್ಕೆ 'ನಿರ್ಮಾಲ್ಯ' ಕೃತಿ ಲೋಕಾರ್ಪಣೆ
ಬೆಂಗಳೂರು, ಆಗಸ್ಟ್ 11: ಕ್ಯಾನ್ಸರ್ ನಂಥ ಮಹಾಮಾರಿ ದೇಹದೊಳಗಿದ್ದರೂ ಮೊಗದಲ್ಲೆಂದಿಗೂ ನಗು ಮಾಸದಂತೆ ಬದುಕಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ನಾ ಕೃಷ್ಣಪ್ಪ.
ಅವರ ಆದರ್ಶ ಬದುಕನ್ನು ಮೆಲುಕು ಹಾಕುವ ಆರೆಸ್ಸೆಸ್ ನ ಹಿರಿಯ ಪ್ರಚಾರಕರಾದ ಸಂದ್ರಶೇಖರ ಭಂಡಾರಿ ಅವರು ಬರೆದ 'ನಿರ್ಮಾಲ್ಯ' ಎಂಬ ಕೃತಿ ಆ.12, ಭಾನುವಾರದಂದು ಸಂಜೆ 5:30 ಕ್ಕೆ ಬಿಡುಗಡೆಯಾಗುತ್ತಿದೆ.
ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ.

ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಆರೆಸ್ಸೆಸ್ ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ.
ಸಹೃದಯರು ಕಾರ್ಯಕ್ರಮಕ್ಕೆ 10 ನಿಮಿಷ ಮುಂಚಿತವಾಗಿಯೇ ಆಗಮಿಸುವಂತೆ ಕೋರಲಾಗಿದೆ.












Click it and Unblock the Notifications