ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿ ಅವರ ಕರ್ವಾಲೊ ಕೃತಿಯ ಆಡಿಯೋಪುಸ್ತಕ ಬಿಡುಗಡೆ

|
Google Oneindia Kannada News

ಬೆಂಗಳೂರು, ನ. 18: ಕನ್ನಡದ ಮೇರು ಬರಹಗಾರ, ಇವತ್ತಿಗೂ ಯುವಜನರು ಹೆಚ್ಚು ಓದುತ್ತಿರುವ ಬರಹಗಾರರಾದ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕೃತಿ ಕರ್ವಾಲೊ ಈಗ ಮೊಟ್ಟ ಮೊದಲ ಬಾರಿಗೆ ಆಡಿಯೋ ಪುಸ್ತಕದ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಬಿಡುಗಡೆಯಾಗಿದೆ.

ಖ್ಯಾತ ರಂಗಕರ್ಮಿ ಶ್ರೀಪಾದ್ ಭಟ್ ಮತ್ತು ತಂಡದವರು ಇದನ್ನು ಆಡಿಯೋ ರೂಪಕ್ಕೆ ತಂದಿದ್ದಾರೆ. ಇದರ ಬಿಡುಗಡೆ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಖ್ಯಾತ ಚಿತ್ರ ನಿರ್ದೇಶಕರಾದ ಪವನ್ ಕುಮಾರ್ ನೆರವೇರಿಸಿದರು. ಬಿಡುಗಡೆ ಮಾಡಿ ಮಾತನಾಡಿದ ಪವನ್ "ಬೆಂಗಳೂರಿನಂತಹ ಊರಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತ ಬಂದ ತಮಗೆ ಕನ್ನಡ ಪುಸ್ತಕಗಳನ್ನು ಓದುವ ವೇಗ ಕಡಿಮೆ ಇದ್ದ ಕಾರಣ ಕನ್ನಡದ ಶ್ರೀಮಂತವಾದ ಸಾಹಿತ್ಯದಿಂದ ಹೊರಗುಳಿಯುವಂತಾಗಿತ್ತು. ಈಗ ಆಡಿಯೋಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಪ್ರವೇಶ ಪಡೆದುಕೊಳ್ಳುವ ಅವಕಾಶ ಬಂದಿರುವುದು ಬಹಳ ಸಂತಸ ತಂದಿದೆ. ಇವತ್ತಿನ ಗಡಿಬಿಡಿಯ ಜೀವನದಲ್ಲಿ ಪುಸ್ತಕ ಓದಲು ಆಡಿಯೋಪುಸ್ತಕಗಳು ಒಂದು ಹೊಸ ಬಗೆಯ ಅವಕಾಶ ಒದಗಿಸುತ್ತವೆ. ಇದು ನಗರದಲ್ಲಿ ಬೆಳೆದ ಮಕ್ಕಳನ್ನು ಕನ್ನಡ ಸಾಹಿತ್ಯದೆಡೆಗೆ ಕರೆತರಲು ಬಹಳ ಸಹಾಯಕ" ಎಂದರು.

ಪೂರ್ಣಚಂದ್ರ ತೇಜಸ್ವಿಯ ಕರ್ವಾಲೋ ಇ ಬುಕ್ ಲೋಕಾರ್ಪಣೆ ಪೂರ್ಣಚಂದ್ರ ತೇಜಸ್ವಿಯ ಕರ್ವಾಲೋ ಇ ಬುಕ್ ಲೋಕಾರ್ಪಣೆ

ಕಾರ್ಯಕ್ರಮವನ್ನು ಮೈಲ್ಯಾಂಗ್ ಸಂಸ್ಥೆಯ ಸಿ.ಇ.ಒ ಪವಮಾನ್ ಅಥಣಿ ನಡೆಸಿಕೊಟ್ಟರು. ಆಡಿಯೋ ಪುಸ್ತಕಕ್ಕಾಗಿ mylang.in ತಾಣಕ್ಕೆ ಭೇಟಿ ಕೊಡಲು ಕೋರಲಾಗಿದೆ.

ತೇಜಸ್ವಿ ಜಾಗತೀಕರಣದ ವಿರುದ್ಧದ ಎಚ್ಚರ ಪ್ರಜ್ಞೆ: ನಾಗೇಶ್ ಹೆಗಡೆತೇಜಸ್ವಿ ಜಾಗತೀಕರಣದ ವಿರುದ್ಧದ ಎಚ್ಚರ ಪ್ರಜ್ಞೆ: ನಾಗೇಶ್ ಹೆಗಡೆ

KP Poornachandra Tejaswis Karvalo novel is now available in Audiobook version

ತೇಜಸ್ವಿ ತಮ್ಮ ಬರವಣಿಗೆಯ ಆಚೆ, ತಮ್ಮ ಖಾಸಗಿ ಮತ್ತು ಸಾರ್ವಜನಿಕ ಜೀವನದಲ್ಲೂ ತೋರಿದ ಘನತೆಯ ನಿಲುವುಗಳಿಂದಾಗಿ ಅವರ ಅಭಿಮಾನಿ ವಲಯ ಹತ್ತು ದಿಕ್ಕುಗಳಿಗೂ ಚಾಚಿದೆ. ಕನ್ನಡದ ಬಗ್ಗೆ ಸದಾ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುತ್ತಿದ್ದ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಬರುವ ತಂತ್ರಜ್ಞಾನದ ಬಿರುಗಾಳಿಗೆ ಎದೆ ಕೊಟ್ಟು ನಿಲ್ಲಲು ಕನ್ನಡ ಸಜ್ಜಾಗಬೇಕಾದ ರೀತಿಯ ಬಗ್ಗೆ ತುಂಬಾ ಹಿಂದೆಯೇ ಯೋಚಿಸಿ, ಚಿಂತಿಸಿ ತಮ್ಮ ಮಿತಿಯಲ್ಲಿ ಅನೇಕ ಕೆಲಸಗಳಿಗೂ ಚಾಲನೆ ಕೊಟ್ಟಿದ್ದರು. ಇದೇ ಮೊದಲ ಬಾರಿಗೆ ಅಧಿಕೃತವಾಗಿ ತೇಜಸ್ವಿ ಅವರ ಪುಸ್ತಕಗಳು ಇಬುಕ್ ರೂಪದಲ್ಲಿ ಡಿಜಿಟಲ್ ಪ್ರಪಂಚಕ್ಕೆ ಪ್ರವೇಶ ನೀಡುತ್ತಿದ್ದು, ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಬಿಡುಗಡೆ ಮಾಡಲಾಗಿದೆ. ಈಗ ಆಡಿಯೋ ಪುಸ್ತಕಗಳ ಸರದಿ ಎಂದು ಮೈಲ್ಯಾಂಗ್ ಬುಕ್ಸ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ವಸಂತ ಶೆಟ್ಟಿ ಹೇಳಿದ್ದಾರೆ.

English summary
Renowned Kannada Writer KP Poornachandra Tejaswi's Karvalo novel is now available in Audiobook version by Mylang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X