ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಬ್ದುಲ್ ರಶೀದ್ ಅವರ 'ಹೊತ್ತು ಗೊತ್ತಿಲ್ಲದ ಕಥೆಗಳು' ಪುಸ್ತಕ ಲೋಕಾರ್ಪಣೆ
ಬೆಂಗಳೂರು, ನವೆಂಬರ್ 28: ಅನುಗ್ರಹ ಪ್ರಕಾಶನದ ಪಯಣಕ್ಕೆ ಹೊಸತೊಂದು ಮೈಲಿಗಲ್ಲು ದೊರೆತಿದ್ದು, ಅಬ್ದುಲ್ ರಶೀದ್ ಅವರ ಹೊತ್ತು ಗೊತ್ತಿಲ್ಲದ ಕಥೆಗಳು ಎಂಬ ಪುಸ್ತಕವನ್ನು ಖ್ಯಾತ ಲೇಖಕ, ಕವಿ ಜಯಂತ್ ಕಾಯ್ಕಿಣಿ ಲೋಕಾರ್ಪಡೆಗೊಳಿಸಿದ್ದಾರೆ.
ಬೆಂಗಳೂರಿನ ಓದುಗರಿಗೆ ಅನುಗ್ರಹ ಸಂಸ್ಥೆಯು ಪುಸ್ತಕಗಳನ್ನು ತಲುಪಿಸಲಿದೆ. ಕನ್ನಡ ಲೋಕ ಆನ್ಲೈನ್ ಮಳಿಗೆಯಲ್ಲಿ ಕೂಡ ಪುಸ್ತಕ ಲಭ್ಯ ಎಂದು ತಿಳಿಸಿದ್ದಾರೆ.
ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಜಯಂತ್ ಕಾಯ್ಕಿಣಿ, ಹೊತ್ತು ಗೊತ್ತಿಲ್ಲದ ಕಥೆಗಳು ತುಂಬಾ ಅಮೂಲ್ಯವಾದ ಪುಸ್ತಕವನ್ನು ಬರೆದಿದ್ದಾರೆ. ಅವರು ಬರೆದಿರುವ ಕಥೆಗಳು ಸ್ವಪ್ನದಂತಿರುತ್ತದೆ, ಆದರೆ ಅವರ ಕಣ್ಣಿಗೆ ಕಾಣುವುದು ಕೇವಲ ಕನಸಾಗಿರುವುದಿಲ್ಲ ಕಣಸಾಗಿರುತ್ತದೆ(ಅತಿಮಾನುಷ ಆವರಣ) ಎಂದರು.
ಬರವಣಿಗೆ ಕಾವ್ಯಾತ್ಮಕವಾಗಿರುತ್ತದೆ. ಹೇಳುವ ಮೂಲಕ ಹೇಳಲಾಗದ್ದನ್ನು ಹೇಳುವುದೇ ಕಾವ್ಯ .ಅವರು ಕೂಡ ಹೇಳಲಾಗದ್ದನ್ನು ಕಥೆಯ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.