ಬೆಂಗಳೂರಿಗೆ ಶ್ರೀವತ್ಸ ಜೋಶಿ-ಭಾನುವಾರ ಪುಸ್ತಕ ಬಿಡುಗಡೆ

Srivatsa Joshi Book Release
ಬೆಂಗಳೂರು ಜೂ 30: ವಿಜಯ ಕರ್ನಾಟಕ ದಿನಪತ್ರಿಕೆಯ ಪರಾಗಸ್ಪರ್ಶ ಅಂಕಣದ ಓದುಗಬಳಗವನ್ನು ಒಂದೆಡೆ ಸೇರಿಸುವ ಸ್ನೇಹಸಮಾವೇಶವನ್ನು ಅನಿವಾಸಿ ಲೇಖಕ ಶ್ರೀವತ್ಸ ಜೋಶಿ ಹಮ್ಮಿಕೊಂಡಿದ್ದಾರೆ.

ಈ ಸ್ನೇಹಸ್ಪರ್ಶ ಕಾರ್ಯಕ್ರಮ ಭಾನುವಾರ ಜುಲೈ 3, 2011ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಆತ್ಮೀಯ ಕಾರ್ಯಕ್ರಮದಲ್ಲಿ ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶವಿರುತ್ತದೆ. ಲಘು ಉಪಾಹಾರದ ನಂತರ ಕಾರ್ಯಕ್ರಮ ಆರಂಭ.

ಇದೇ ಸಂದರ್ಭದಲ್ಲಿ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು ('ಗೆಲುವಿನ ಟಚ್" ಮತ್ತು 'ಚೆಲುವಿನ ಟಚ್" - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ 'ಹನಿ"ಸಾಹಿತಿ ಎಚ್.ಡುಂಡಿರಾಜ್ ಮತ್ತು ಪತ್ರಕರ್ತ ನಾಗೇಶ ಹೆಗಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

ಇದು ಉದ್ದುದ್ದ ಭಾಷಣಗಳ ಕಾರ್ಯಕ್ರಮವಲ್ಲ. Informal friendly get-together ಮಾದರಿಯದು. ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮ್ಮನ್ನೂ ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇನೆ. ಬನ್ನಿ ಎನ್ನುತ್ತಿದ್ದಾರೆ ಇವತ್ತು ತಾನೇ ಬೆಂಗಳೂರಿಗೆ ಬಂದಿಳಿದ ಅಂಕಣಕಾರ ಜೋಶಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+