ಮೈಸೂರಿನಲ್ಲಿ ಹರಿಹರೇಶ್ವರರ ಕೃತಿ ಬಿಡುಗಡೆ

ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಹರಿಹರೇಶ್ವರ ಅವರ 'ನಮ್ಮ ಕಾಶ್ಮೀರ ಮತ್ತು ತಿರುಗಾಟ', ಅವರ ಪತ್ನಿ ನಾಗಲಕ್ಷ್ಮಿ ಅವರ ಸಂಪಾದಕತ್ವದ 'ಹೊಂಬೆಳಕ ಹೊನಲು' ಪುಸ್ತಕಗಳ ಜೊತೆಗೆ 'ಸ್ನೇಹದಲ್ಲಿ ನಿಮ್ಮ ಹರಿ' ಎಂಬ ಸಂಸ್ಮರಣ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುತ್ತದೆ.
ಕಾರ್ಯಕ್ರಮ ವಿವರ : ದಿನ/ದಿನಾಂಕ: ಶುಕ್ರವಾರ, ಮಾರ್ಚ್ 11, 2011. ದಿವ್ಯ ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಹಾ ಸಂಸ್ಥಾನ. ಸಂಜೆ 5.30ರಿಂದ. 6.00 ಲಘು ಉಪಹಾರ, 8.30ಕ್ಕೆ ಭೋಜನ.
ಪುಸ್ತಕ ಬಿಡುಗಡೆ : ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ತರಳಬಾಳು ಬೃಹನ್ಮಠ 'ಸ್ನೇಹದಲ್ಲಿ ನಿಮ್ಮ ಹರಿ', 'ನಮ್ಮ ಕಾಶ್ಮೀರ ಮತ್ತು ತಿರುಗಾಟ', 'ಅಮೆರಿಕನ್ನಡ' ಅಂತರ್ಜಾಲ ಆವೃತ್ತಿ. ಆಶೀರ್ವಾದ ನುಡಿ: ವೀರೇಶಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ, ಮೈಸೂರು. ಉಪಸ್ಥಿತಿ: ಡಾ.ಜಿಬಿ ರಾಜಪುರೋಹಿತ, ಎ.ರಮೇಶ್ ಉಡುಪ, ನವಕರ್ನಾಟಕ ಪ್ರಕಾಶನ, ಬೆಂಗಳೂರು.












Click it and Unblock the Notifications