ರವಿ ಬರೆದ ನೆನಪಿರಲಿ, ಪ್ರೀತಿ ಕಾಮವಲ್ಲ ಅನಾವರಣ

Ravi Ajjipura book release
ಪತ್ರಕರ್ತ ರವಿ ಅಜ್ಜಿಪುರ ಅವರು ಇಷ್ಟಪಟ್ಟು ಹೆಣೆದಿರುವ ಪ್ರೀತಿ, ಪ್ರೇಮ, ಜೀವನ ಕುರಿತಾದ ಜನಪ್ರಿಯ ಲೇಖನಗಳ ಸಂಕಲನವನ್ನು ಫೆ.12ದಂದು ಅನಾವರಣಗೊಳಿಸಲಾಗುತ್ತಿದೆ. ಅವರ ನುಡಿಯಲ್ಲೇ ಪುಸ್ತಕ ಪ್ರೇಮಿಗಳಿಗೆ ಆಹ್ವಾನ.

ನನ್ನ 'ನೆನಪಿರಲಿ, ಪ್ರೀತಿ ಕಾಮವಲ್ಲ' ಪುಸ್ತಕ ದಿನಾಂಕ 12 ಫೆಬ್ರವರಿ 2011ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ (ರವೀಂದ್ರ ಕಲಾಕ್ಷೇತ್ರದ ಪಕ್ಕ) ಬಿಡುಗಡೆ ಆಗ್ತಿದೆ. ನನ್ನ ಬದುಕಿನ ಪ್ರೀತಿ ಮತ್ತು ಸ್ಫೂರ್ತಿ ಎರಡೂ ಆಗಿರುವ ರವಿ ಬೆಳಗೆರೆ ಸರ್ ಪುಸ್ತಕ ಬಿಡುಗಡೆ ಮಾಡುತ್ತಾರೆ.

ಕನ್ನಡ ಸಿನೆಮಾಗೆ ಹೊಸತನ ತಂದುಕೊಟ್ಟ ಮಠ ಖ್ಯಾತಿ ಗುರುಪ್ರಸಾದ್ ಸರ್ ಪ್ರಕಾಶನ ಉದ್ಘಾಟಿಸುತ್ತಾರೆ. ನನ್ನನ್ನು ಇನ್ನಷ್ಟು ಒಳ್ಳೆ ಓದಿಗೆ ಪ್ರೇರೇಪಿಸಿದ ಖ್ಯಾತ ಕವಯಿತ್ರಿ ಶಶಿಕಲಾ ವೀರಯ್ಯಸ್ವಾಮಿ ಪುಸ್ತಕದ ಬಗ್ಗೆ ಮಾತನಾಡುತ್ತಾರೆ. ಟಿವಿ9ನ ನನ್ನ ಹಿರಿಯ ಸಹೋದ್ಯೋಗಿ ರವಿಕುಮಾರ್ ಸರ್ ಮುಖ್ಯ ಅತಿಥಿಯಾಗಿರುತ್ತಾರೆ. ಗೆಳತಿ ಶ್ರೀದೇವಿ ಕಳಸದ ಕಾರ್ಯಕ್ರಮ ನಿರೂಪಣೆ ಮಾಡುತ್ತಾಳೆ.

'ನೆನಪಿರಲಿ, ಪ್ರೀತಿ ಕಾಮವಲ್ಲ' 46 ವಾರಗಳ ಕಾಲ ವಿಜಯಕರ್ನಾಟಕದಲ್ಲಿ ಬರೆದ ಲೇಖನಗಳ ಸಂಕಲನ. ಪುಸ್ತಕ ತುಂಬಾ ಮುದ್ದಾಗಿ ಬಂದಿದೆ. ವಿನ್ಯಾಸ ಹೊಸ ಥರ ಇದೆ. ಪ್ರೇಮಿಗಳ ದಿನಾಚರಣೆಗೆ ನಿಮ್ಮ ಸಂಗಾತಿಗೆ ನೀವು ಕೊಡಬಹುದಾದ ಬೆಸ್ಟ್ ಗಿಫ್ಟ್ ಇದು.

ಪ್ಲೀಸ್ ಬನ್ನಿ
-ರವಿ ಅಜ್ಜಿಪುರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+