ಗೋಪಿನಾಥ್ ಜೀವನಚರಿತ್ರೆಗೆ ಶೇ.30 ರಿಯಾಯಿತಿ

ಕನ್ನಡಿಗರು ಹೆಮ್ಮೆಪಡುವಂತಹ ಹಾಗೂ ಎಲ್ಲರಿಗೂ ಎಲ್ಲ ಕಾಲಕ್ಕೂ ಮಾದರಿ ವ್ಯಕ್ತಿ ಎನಿಸಿರುವ ಏರ್ ಡೆಕ್ಕನ್ ಎಂಬ ವಿಮಾನಯಾನ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ಗೌರವಕ್ಕೆ ಪಾತ್ರರಾಗಿರುವ ಕ್ಯಾಪ್ಟನ್ ಗೋಪಿನಾಥ್ ಅವರ ಮಾತುಗಳಿವು. ನಗರದ ಹೋಟೆಲ್ ಗೇಟ್ ವೇಯಲ್ಲಿ ತಮ್ಮ ಆತ್ಮಚರಿತ್ರೆ 'ಸಿಂಪ್ಲಿ ಫ್ಲೈ, ಎ ಡೆಕ್ಕನ್ ಒಡಿಸ್ಸಿ (Simply Fly - A Deccan Odyssey)' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಾತಿನುದ್ದಕ್ಕೂ ವ್ಯವಸ್ಥೆ, ಯುವಜನಾಂಗ, ಮುಂದಿನ ಪೀಳಿಗೆ, ರಾಜಕಾರಣ, ಅಭಿವೃದ್ಧಿ ಜೊತೆಗೆ ಯಶಸ್ಸಿನ ಬಗ್ಗೆ ಅನೇಕ ಸಲಹೆ, ಸೂಚನೆಗಳನ್ನು ನೀಡಿದರಲ್ಲದೇ ತಮ್ಮ ಯಶಸ್ವಿ ಜೀವನದ ರಹದಾರಿಯನ್ನು ಹಂಚಿಕೊಂಡರು.
ಕನಸು ಕಾಣುವುದನ್ನು ಬಿಡಬೇಡಿ, ಕನಸುಗಳ ಬೆನ್ನಹತ್ತಿ, ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ, ನಿಧಾನವಾದರೂ ಸಾಕಾರವಾಗುತ್ತೆ. ಕನಸು ಬೆನ್ನತ್ತಿ ಯಶ ಕಾಣುತ್ತಿರುವವರು ಒಂದು ಕಡೆ. ಯಶಸ್ಸು ಕಂಡು ವ್ಯವಸ್ಥೆ ಬಗ್ಗೆ ಅನಾದರ ಹೊಂದಿರುವ ದೊಡ್ಡ ವರ್ಗ ಇನ್ನೊಂದು ಕಡೆ. ಈ ಎರಡೂ ವರ್ಗದ ನಡುವೆ ಸಮನ್ವಯ ಹಾಗೂ ಸೌಹಾರ್ದ ಮೂಡದ ಹೊರತು ನಮ್ಮ ವ್ಯವಸ್ಥೆ ಸುಧಾರಿಸಲು ಸಾಧ್ಯವಿಲ್ಲ ಎಂದು ಗೋಪಿನಾಥ್ ಅಭಿಪ್ರಾಯಪಟ್ಟರು.
ಇನ್ಫೋಸಿಸ್ ಸಂಸ್ಥಾಪಕ ಎನ್ಆರ್ ನಾರಾಯಣಮೂರ್ತಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಮೈಂಡ್ ಟ್ರೀ ಮುಖ್ಯಸ್ಥ ಸುಬ್ರತೋ ಬ್ಯಾನರ್ಜಿ, ಶಿಕ್ಷಣ ತಜ್ಞ ಪಂಕಜ್ ಚಂದ್ರ, ನಟಿ ಸುಹಾಸಿನಿ, ಟೆನಿಸ್ ಪಟು ವಿಜಯ್ ಅಮೃತರಾಜ್, ನೃತ್ಯಗಾತಿ ವಾಣಿ ಗಣಪತಿ, ವಿಜಯ್ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಂಗ್ಲ ಭಾಷೆಯಲ್ಲಿರುವ ಗೋಪಿನಾಥ್ ಆತ್ಮಚರಿತ್ರೆಯನ್ನು ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ತರುತ್ತಿದ್ದಾರೆ. ನಾನೂರು ಪುಟಗಳಿರುವ ಪುಸ್ತಕದ ಬೆಲೆ 499 ರು.
Buy Simply Fly by Capt. Gopinath @ 30% discount











Click it and Unblock the Notifications