126861vasantha sahityotsavaಮೇ 30, 31ರಂದು ನಾಲ್ಕನೇ ವಸಂತ ಸಾಹಿತ್ಯೋತ್ಸವ/nri/article/2009/0105-4th-vasantha-sahityotsava-kaveri.htmlಕನ್ನಡ ಸಾಹಿತ್ಯಾಭಿಮಾನಿಗಳೆ,ಕನ್ನಡ ಸಾಹಿತ್ಯ ರಂಗದ ಪರವಾಗಿ ತಮಗೆಲ್ಲ ಹೊಸ ವರುಷದ ಹಾರ್ದಿಕ ಶುಭಾಶಯಗಳು. ಈ ಮೊದಲೇ ಪ್ರಕಟಿಸಿರುವಂತೆ ಕನ್ನಡ ಸಾಹಿತ್ಯ ರಂಗದ ನಾಲ್ಕನೇ ವಸಂತ ಸಾಹಿತ್ಯೋತ್ಸವ, ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ಅಮೇರಿಕದ ರಾಜಧಾನಿ ಪ್ರದೇಶದಲ್ಲಿ ಮೇ 2009ರಲ್ಲಿ ನಡೆಯಲಿದೆ. ಸಾಹಿತ್ಯೋತ್ಸವ ನಡೆಯುವುದು ಮೇ 30 ಮತ್ತು 31, 2009ರ ವಾರಾಂತ್ಯದಲ್ಲಿ. ನಡೆಯುವ ಸ್ಥಳ ಮೇರೀಲ್ಯಾಂಡಿನ ರಾಕ್‌ವಿಲ್ 33889http://kannada.oneindia.com/img/2009/01/05-veena-shanteshwar-vaidehi1.jpg126861vasantha sahityotsavaವಸಂತ ಸಾಹಿತ್ಯೋತ್ಸವಕ್ಕೆ ಭರದ ಸಿದ್ಧತೆ/nri/engagements/2009/0521-kannada-sahitya-ranga-vasantha-sahityotsava.htmlಅಮೆರಿಕದಲ್ಲಿ ಕನ್ನಡ ಭಾಷಾ ಸಾಹಿತ್ಯದ ಅಧ್ಯಯನ ನಡೆಸುವುದು, ಕನ್ನಡದಲ್ಲಿ ಬರೆಯುವವರಿಗೆ ಪ್ರೋತ್ಸಾಹ ಕೊಡುವುದು, ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು, ಆಗಿಂದಾಗ್ಗೆ ಸಾಹಿತ್ಯ ಗೋಷ್ಠಿಗಳನ್ನು ಏರ್ಪಡಿಸುವುದು, ದೇಶದ ನಾನಾ ಭಾಗಗಳಲ್ಲಿ ಸಾಹಿತ್ಯೋತ್ಸವಗಳನ್ನು ಆಚರಿಸಿ ವಿಚಾರ ವಿನಿಮಯ ಮಾಡಿಕೊಳ್ಳುವುದು, ಕರ್ನಾಟಕದಿಂದ ಹೆಸರಾಂತ ಬರಹಗಾರರನ್ನು ಕರೆಸಿಕೊಂಡು ಉಪನ್ಯಾಸಮಾಲೆಗಳನ್ನು ಏರ್ಪಡಿಸುವುದು, ಇವೇ ಮುಂತಾದ ಚಟುವಟಿಕೆಗಳಿಂದ ಪ್ರಸಿದ್ಧವಾಗಿರುವ ಸಂಸ್ಥೆ "ಕನ್ನಡ ಸಾಹಿತ್ಯ ರಂಗ."ಅಮೆರಿಕದ ರಾಜಧಾನಿ 36813http://kannada.oneindia.com/img/2009/05/21-veena-shanteshwar-vaidehi1.jpg126861vasantha sahityotsavaಚೀನಾದ ಬೀಸಣಿಗೆ/literature/book/2009/0529-foreword-to-jaalatarangini-by-cn-ramachandran.htmlದಟ್ಸ್ ಕನ್ನಡ ಅಂತರ್ಜಾಲ ತಾಣದಲ್ಲಿ 'ಜಾಲತರಂಗ' ಅಂಕಣದಲ್ಲಿ ಪ್ರಕಟವಾದ ಡಾ. ಮೈಶ್ರೀ ನಟರಾಜ್ ಅವರ 55 ವಿಭಿನ್ನ ಲೇಖನಗಳ ಸಂಕಲನವೇ 'ಜಾಲತರಂಗಿಣಿ'. ಈ ಪುಸ್ತಕ ಮೇ 30 ಮತ್ತು 31ರಂದು ಅಮೆರಿಕಾದಲ್ಲಿ ನಡೆಯುತ್ತಿರುವ 4ನೇ ವಸಂತ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯಾಗುತ್ತಿರುವ ಪುಸ್ತಕಗಳಲ್ಲೊಂದು. ನಟರಾಜ್ ಅವರನ್ನು ಪ್ರತ್ಯಕ್ಷ ಕಂಡಿರದಿದ್ದರೂ ಖ್ಯಾತ ಲೇಖಕ, ಪ್ರಾಧ್ಯಾಪಕ, ವಿಮರ್ಶಕರಾದ ಡಾ. ಸಿಎನ್ ರಾಮಚಂದ್ರನ್ ಅವರು 36980http://kannada.oneindia.com/img/2009/05/29-jaalatarangini1.jpg126861vasantha sahityotsava'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು/literature/book/2009/0530-foreword-by-gs-amur-to-kannada-novel-loka-2.html(ಮುನ್ನುಡಿಯ ಮುಂದುವರಿದ ಭಾಗ)ಎ.ಕೆ. ರಾಮಾನುಜನ್‌ರ ಮತ್ತೊಬ್ಬನ ಆತ್ಮಚರಿತ್ರೆ ಅಪರೂಪದ ಕೃತಿಯಾದರೂ ವಿಮರ್ಶಕರ ಗಮನವನ್ನು ಸೆಳೆಯುವಲ್ಲಿ ಅದು ಅಷ್ಟೊಂದು ಯಶಸ್ವಿಯಾದಂತಿಲ್ಲ. ಟಿ. ಎನ್. ಕೃಷ್ಣರಾಜು ಅವರು ಈಗ ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಕನ್ನಡ ಕಥನ ಸಾಹಿತ್ಯದಲ್ಲಿ ತೀರ ಹೊಸದಾಗಿದ್ದ ಈ ಕೃತಿ ಕತೆ, ಆತ್ಮಕತೆಗಳ ಅಂತರವನ್ನೇ ಅಳಿಸಿ ಹಾಕಿ ಹೊಸ ರೂಪವನ್ನು ಸೃಷ್ಟಿ ಮಾಡಿತು. ಎಲ್ಲರಿಗೂ ಇರೋ ಕತೆ 37004http://kannada.oneindia.com/img/2009/05/30-kadambari-lokadalli1.jpg126861vasantha sahityotsava'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು/literature/book/2009/0530-foreword-by-gs-amur-to-kannada-novel-loka.htmlಕನ್ನಡ ಸಾಹಿತ್ಯ ರಂಗ ತನ್ನ ನಾಲ್ಕನೆಯ ವಸಂತ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಇತ್ತೀಚಿನ ಕನ್ನಡ ಕಾದಂಬರಿಗಳನ್ನು ಕುರಿತು ಅಮೆರಿಕೆಯಲ್ಲಿ ವಾಸವಾಗಿರುವ ಲೇಖಕರೇ ಬರೆದ ಬರಹಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುತ್ತಿರುವುದು ಸಂತೋಷದ ಸಂಗತಿ. ಸಾಹಿತ್ಯರಂಗ ಈಗಾಗಲೇ ಕುವೆಂಪು ಸಾಹಿತ್ಯ ಸಮೀಕ್ಷೆ (2004), ಆಚೀಚೆಯ ಕತೆಗಳು (2005) ಹಾಗೂ ನಗೆಗನ್ನಡಂ ಗೆಲ್ಗೆ (2007) ಎಂಬ ಮೂರು ಒಳ್ಳೆಯ ಪುಸ್ತಕಗಳನ್ನು ಹೊರ ತಂದಿದೆ. ಈ 37005http://kannada.oneindia.com/img/2009/05/30-amur-gs2.jpg97446americaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97446americaನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg97446americaಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg97446americaಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif97446americaನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!/nri/article/2008/1226-the-storytellers-rekha-hegade.htmlಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ.* ರೇಖಾ ಹೆಗಡೆ ಬಾಳೇಸರ, ಫ್ಲಾರಿಡಾ, ಅಮೆರಿಕಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ 33719http://kannada.oneindia.com/img/2008/12/26-storyteller1.jpg36771ವಿಮರ್ಶೆಬಾಗಿಲನು ತೆರೆದು ಸೇವೆಯನು ಕೊಡೊ/literature/articles/2008/1223-poetry-and-criticism-not-our-cup-of-tea.htmlಕನ್ನಡದಲ್ಲಿ ಕವನಗಳನ್ನು ಬರೆಯುವವರು ಹೆಚ್ಚು. ಓದುವವರು ಕಡಿಮೆ. ಅಲ್ಪಾಹಾರದ ನಂತರ ಏಕಾಗ್ರತೆಯಿಂದ ಕವನ ಓದಿ ಅದರ ರಸ ಹೀರಿಕೊಳ್ಳುವವರ ಸಂಖ್ಯೆ ಬಹಳೇ ಕಡಿಮೆ ಎನಬಹುದು. ಆದರೂ ಕೂಡ ಹಠಬಿಡದ ಆಂಟುಲೆಯಂತೆ ಕನ್ನಡದ ಮಾಧ್ಯಮಗಳು ಕಾಯಾ ವಾಚಾ ಮನಸಾ ಕವನಗಳನ್ನು ಅಚ್ಚು ಮಾಡುತ್ತಲೇ ಬರುತ್ತಿರುವುದು ಮಾನ್ಯ ಕವನ ಕರ್ತಾರರಿಗೆ ಗೊತ್ತಿರದ ಸಂಗತಿಯೇನಲ್ಲ. ಕವನದ ಗಂಧಗಾಳಿ ಗೊತ್ತಿಲ್ಲದಿದ್ದರೂ ಕವನಗಳನ್ನು ಪ್ರಕಟಿಸುತ್ತಲೇ 33667http://kannada.oneindia.com/img/2008/12/23-kanakadasa1.jpg36771ವಿಮರ್ಶೆ'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು/literature/book/2009/0530-foreword-by-gs-amur-to-kannada-novel-loka-2.html(ಮುನ್ನುಡಿಯ ಮುಂದುವರಿದ ಭಾಗ)ಎ.ಕೆ. ರಾಮಾನುಜನ್‌ರ ಮತ್ತೊಬ್ಬನ ಆತ್ಮಚರಿತ್ರೆ ಅಪರೂಪದ ಕೃತಿಯಾದರೂ ವಿಮರ್ಶಕರ ಗಮನವನ್ನು ಸೆಳೆಯುವಲ್ಲಿ ಅದು ಅಷ್ಟೊಂದು ಯಶಸ್ವಿಯಾದಂತಿಲ್ಲ. ಟಿ. ಎನ್. ಕೃಷ್ಣರಾಜು ಅವರು ಈಗ ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಕನ್ನಡ ಕಥನ ಸಾಹಿತ್ಯದಲ್ಲಿ ತೀರ ಹೊಸದಾಗಿದ್ದ ಈ ಕೃತಿ ಕತೆ, ಆತ್ಮಕತೆಗಳ ಅಂತರವನ್ನೇ ಅಳಿಸಿ ಹಾಕಿ ಹೊಸ ರೂಪವನ್ನು ಸೃಷ್ಟಿ ಮಾಡಿತು. ಎಲ್ಲರಿಗೂ ಇರೋ ಕತೆ 37004http://kannada.oneindia.com/img/2009/05/30-kadambari-lokadalli1.jpg36771ವಿಮರ್ಶೆ'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು/literature/book/2009/0530-foreword-by-gs-amur-to-kannada-novel-loka.htmlಕನ್ನಡ ಸಾಹಿತ್ಯ ರಂಗ ತನ್ನ ನಾಲ್ಕನೆಯ ವಸಂತ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಇತ್ತೀಚಿನ ಕನ್ನಡ ಕಾದಂಬರಿಗಳನ್ನು ಕುರಿತು ಅಮೆರಿಕೆಯಲ್ಲಿ ವಾಸವಾಗಿರುವ ಲೇಖಕರೇ ಬರೆದ ಬರಹಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುತ್ತಿರುವುದು ಸಂತೋಷದ ಸಂಗತಿ. ಸಾಹಿತ್ಯರಂಗ ಈಗಾಗಲೇ ಕುವೆಂಪು ಸಾಹಿತ್ಯ ಸಮೀಕ್ಷೆ (2004), ಆಚೀಚೆಯ ಕತೆಗಳು (2005) ಹಾಗೂ ನಗೆಗನ್ನಡಂ ಗೆಲ್ಗೆ (2007) ಎಂಬ ಮೂರು ಒಳ್ಳೆಯ ಪುಸ್ತಕಗಳನ್ನು ಹೊರ ತಂದಿದೆ. ಈ 37005http://kannada.oneindia.com/img/2009/05/30-amur-gs2.jpg36771ವಿಮರ್ಶೆತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು (ಭಾಗ 2)/column/gv/2009/0613-bisilu-beladingalu-shivamurthy-shivacharya.htmlತರಳಬಾಳು ಜಗದ್ಗುರುಗಳಾದ ಡಾ| ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ 'ಬಿಸಿಲು ಬೆಳದಿಂಗಳು' ಅಂಕಣ ಸಾಹಿತ್ಯ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಡಾ| 'ಜೀವಿ' ಕುಲಕರ್ಣಿಯವರು ಶ್ರೀಗಳು ಬರೆದ ಪುಸ್ತಕ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿ ಎಂದು ವಿಶ್ಲೇಷಿಸಿದ್ದಾರೆ.ಎದೆತುಂಬಿ ಹಾಡಿದೆನು' ಎಂಬ ಪ್ರಬಂಧದಲ್ಲಿ ಇನ್ನೊಂದು ಮೊಜಿನ ಸಂಗತಿಯನ್ನು ಶ್ರೀಗಳು ದಾಖಲಿಸುತ್ತಾರೆ. ಜಗದ್ಗುರುಗಳನ್ನು ಟೀಕಿಸುತ್ತಿದ್ದ ಬುದ್ಧಿಜೀವಿಯೊಬ್ಬರಿಗೆ ಇವರ 37321http://kannada.oneindia.com/img/2009/06/13-taralbalu-swamiji1.jpg36771ವಿಮರ್ಶೆವಿಮರ್ಶೆ : ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್/movies/hollywood/2009/07/16-harry-potter-and-and-half-blood-prince-review.htmlಜಾಗತಿಕ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ ಹ್ಯಾರಿ ಪಾಟರ್ ಮೊದಲ ಭಾಗ ತೆರೆಕಂಡು ಈಗ್ಗೆ ಒಂಭತ್ತು ವರ್ಷಗಳೇ ಜಾರಿವೆ. ಆದರೆ ಈ ಚಿತ್ರದ ಮತ್ತು ಪುಸ್ತಕದ ಬಗೆಗೆ ಪ್ರೇಕ್ಷಕರಲ್ಲಿ ಇರುವ ಆಸಕ್ತಿ ಕಿಂಚಿತ್ತೂ ಕುಗ್ಗಿಲ್ಲ. ಕೋಟ್ಯಂತರ ಸಿನಿ ಪ್ರೇಮಿಗಳನ್ನು ಮತ್ತು ಕಾದಂಬರಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದ ಹಿರಿಮೆ ಹ್ಯಾರಿ ಪಾಟರ್ ಗೆ ಸಲ್ಲಬೇಕು. ಸಲ್ಲುತ್ತದೆ.ಹ್ಯಾರಿ ಪಾಟರ್ ನ 38025http://kannada.oneindia.com/img/2009/07/16-harry-potter-half-blood1.jpgnews"> 'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು | Kannada Kadambari Loka | Foreword | GS Amur | Kannada novels - 'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು - Kannada Oneindia

'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು

GS Amur, Dharwad
ಕನ್ನಡ ಸಾಹಿತ್ಯ ರಂಗ ತನ್ನ ನಾಲ್ಕನೆಯ ವಸಂತ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಇತ್ತೀಚಿನ ಕನ್ನಡ ಕಾದಂಬರಿಗಳನ್ನು ಕುರಿತು ಅಮೆರಿಕೆಯಲ್ಲಿ ವಾಸವಾಗಿರುವ ಲೇಖಕರೇ ಬರೆದ ಬರಹಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುತ್ತಿರುವುದು ಸಂತೋಷದ ಸಂಗತಿ. ಸಾಹಿತ್ಯರಂಗ ಈಗಾಗಲೇ ಕುವೆಂಪು ಸಾಹಿತ್ಯ ಸಮೀಕ್ಷೆ (2004), ಆಚೀಚೆಯ ಕತೆಗಳು (2005) ಹಾಗೂ ನಗೆಗನ್ನಡಂ ಗೆಲ್ಗೆ (2007) ಎಂಬ ಮೂರು ಒಳ್ಳೆಯ ಪುಸ್ತಕಗಳನ್ನು ಹೊರ ತಂದಿದೆ. ಈ ಪ್ರಕಟಣೆಗಳಿಗೆ ಕನ್ನಡ ಓದುಗರಿಂದ ಪ್ರೋತ್ಸಾಹವೂ ದೊರೆತಿದೆ. ಅಮೆರಿಕೆಯಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿಯನ್ನು ಹುಟ್ಟಿಸಿ, ಅದರ ಅಭಿವ್ಯಕ್ತಿಗಾಗಿ ವೇದಿಕೆಯನ್ನು ಒದಗಿಸುತ್ತಿರುವ ಸಾಹಿತ್ಯರಂಗದ ಪರಿಶ್ರಮ ಮೆಚ್ಚುವಂಥದ್ದು. ಈ ಸಂಘದ ಪ್ರಮುಖ ಕಾರ್ಯಕರ್ತರಲ್ಲೊಬ್ಬರಾದ ಎಚ್.ವೈ. ರಾಜಗೋಪಾಲರೊಡನೆ ನನ್ನ ಸ್ನೇಹ 1973ರಷ್ಟು ಹಳೆಯದು. ಹೋದಸಲ ನಾನು ಅಮೆರಿಕೆಯಲ್ಲಿದ್ದಾಗ ಶಶಿಕಲಾ ಚಂದ್ರಶೇಖರ ಹಾಗೂ ಮೈ. ಶ್ರೀ. ನಟರಾಜರ ಪರಿಚಯವಾಯಿತು. ಈ ಪುಸ್ತಕದ ಯೋಜನೆಯ ಹಂತದಲ್ಲಿ ನಾನು ಪಾಲ್ಗೊಂಡಿದ್ದರಿಂದ ಮುನ್ನುಡಿಯ ರೂಪದಲ್ಲಿ ಎರಡು ಮಾತುಗಳನ್ನು ಹೇಳಲು ಸಂತೋಷದಿಂದಲೇ ಒಪ್ಪಿಕೊಂಡಿದ್ದೇನೆ.

ಈ ಪುಸ್ತಕದ ಒಂದು ಎದ್ದು ಕಾಣುವ ವೈಶಿಷ್ಟ್ಯವೆಂದರೆ ಇಲ್ಲಿ ಓದಿಗಾಗಿ ಆಯ್ದುಕೊಂಡ ಎಲ್ಲ ಕಾದಂಬರಿಗಳು, ರಾಮಾನುಜನ್‌ರ ಮತ್ತೊಬ್ಬನ ಆತ್ಮಚರಿತ್ರೆ(1978)ಯಂಥ ಒಂದೆರಡು ಅಪವಾದಗಳನ್ನು ಬಿಟ್ಟರೆ, ಕಳೆದ ಮೂರು ದಶಕಗಳಲ್ಲಿ ಪ್ರಕಟವಾದವುಗಳು. ಇವುಗಳಲ್ಲಿ ಬಹಳಷ್ಟು ಕೃತಿಗಳ ಬಗ್ಗೆ ವಿಶೇಷ ಚರ್ಚೆ ನಡೆದಿಲ್ಲ. ಅಷ್ಟೇ ಮಹತ್ವದ ಇನ್ನೊಂದು ವೈಶಿಷ್ಟ್ಯವೆಂದರೆ, ಈ ಪುಸ್ತಕಕ್ಕೆ ಸೇರಿದ ಲೇಖನಗಳನ್ನು ಬರೆದವರಲ್ಲಿ ಹೆಚ್ಚಿನವರು ಸಾಹಿತ್ಯಕ್ಷೇತ್ರಕ್ಕೆ ಹೊರಗಿನವರು. ಗುರುಪ್ರಸಾದ ಕಾಗಿನೆಲೆ, ಮೈ.ಶ್ರೀ. ನಟರಾಜ, ಆಹಿತಾನಲ, ಟಿ.ಎನ್. ಕೃಷ್ಣರಾಜು ಇಂಥ ಕೆಲವರನ್ನು ಬಿಟ್ಟರೆ ಸಾಹಿತ್ಯೇತರ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದವರು, ಕನ್ನಡ ಓದುಗರಿಗೆ ಹೊಸಬರು. ಆದರೆ ಚೆನ್ನಾಗಿ ಬರೆಯಬಲ್ಲವರು. ಇವರನ್ನು ಒಳಗೊಳ್ಳುವ ಮೂಲಕ ಪುಸ್ತಕಕ್ಕೆ ತಾಜಾತನ ಹಾಗೂ ವೈವಿಧ್ಯ ಬಂದಿದೆ. ಕನ್ನಡದಲ್ಲಿ ವಿಮರ್ಶೆ ಬರೆಯುವವರಲ್ಲಿ ಹೆಚ್ಚಿನವರು ಸಾಹಿತಿಗಳೇ ಆಗಿರುವುದರಿಂದ ಅದಕ್ಕೆ ಎಷ್ಟೋ ಸಲ ಅಕೆಡೆಮಿಕ್ ಸ್ವರೂಪ ಬಂದುಬಿಡುತ್ತದೆ. ಗಮನಿಸಬೇಕಾದ ಒಂದು ಸಂಗತಿಯೆಂದರೆ ಈ ಸಂಗ್ರಹದ ಹಲವಾರು ಲೇಖಕರಿಗೆ ವಿಮರ್ಶೆಯಲ್ಲಿ ಆಸಕ್ತಿ ಇಲ್ಲದೇ ಇರುವುದು. ಯಾವುದಾದರೂ ಕಲಾಕೃತಿಯನ್ನು ವಿಮರ್ಶೆಗೆ ಒಳಪಡಿಸಬಹುದು ಎನ್ನುವುದರ ಬಗ್ಗೆ ನನಗೆ ನಂಬಿಕೆ ಹೊರಟುಹೋಗಿದೆ ಎಂಬ ಮಾತಿನಿಂದಲೇ ಎಂ.ಆರ್. ದತ್ತಾತ್ರ್ರಿಯವರು ಎನ್ನ ಭವದ ಕೇಡು ಕಾದಂಬರಿಯ ಬಗೆಗಿನ ತಮ್ಮ ಲೇಖನವನ್ನು ಪ್ರಾರಂಭಿಸುತ್ತಾರೆ. ವಿಮರ್ಶೆಯ ಅಗತ್ಯ ಒಂದು ಕೃತಿಗಾಗಲಿ, ಅದರ ಓದುಗರಿಗಾಗಲಿ ಇಲ್ಲ ಎಂಬ ನಂಬುಗೆಯನ್ನು ಹೇಳಿಕೊಳ್ಳುವುದು ಪುರುಷೋತ್ತಮದ ಬಗ್ಗೆ ಬರೆದ ಮೀರಾ ಪಿ. ಆರ್ ಆವರಿಗೆ ಅವಶ್ಯವೆನಿಸಿದೆ. ಹಾಗೆಯೇ, ಹಳ್ಳ ಬಂತು ಹಳ್ಳ ಕಾದಂಬರಿಯ ಬಗ್ಗೆ ಬರೆಯುತ್ತ ವಿಮರ್ಶೆ ಸಾಧ್ಯವೇ ಇಲ್ಲ. ಇದು ನನ್ನ ಅನಿಸಿಕೆಗಳು' ಎಂದು ವಲ್ಲೀಶ ಶಾಸ್ತ್ರಿ ಸ್ಪಷ್ಟಗೊಳಿಸುತ್ತಾರೆ. ಬಹುಶಃ ವಿಮರ್ಶೆ' ಎಂಬ ಪದದ ಅರ್ಥವ್ಯಾಪ್ತಿಯ ಬಗ್ಗೆ ಸರಿಯಾದ ಕಲ್ಪನೆಯ ಅಭಾವದಲ್ಲಿ ಇಂಥ ಮಾತುಗಳು ಬಂದಿರಬೇಕು. ಸಾಹಿತ್ಯದ ಪ್ರಾಮಾಣಿಕ ಅನುಭವದ ಯಾವ ಅಭಿವ್ಯಕ್ತಿಯೇ ಇರಲಿ ಅದು ವಿಮರ್ಶೆಯೇ.

ಈ ಪುಸ್ತಕದ ಲೇಖನಗಳಲ್ಲಿ ಹೆಚ್ಚಿನವು ಪರಿಚಯಾತ್ಮಕ ಬರಹಗಳು. ಇಲ್ಲಿ ಚರ್ಚಿಸಲಾದ ಹಲವಾರು ಕಾದಂಬರಿಗಳು ತೀರ ಇತ್ತೀಚಿನವಾದುದರಿಂದ, ಎಂದರೆ ಹೊಸ ಶತಮಾನದ ಮೊದಲ ದಶಕದಲ್ಲಿ ರಚಿತವಾದವುಗಳಾದುದರಿಂದ ಇದು ಅನಿವಾರ್ಯವಷ್ಟೇ ಅಲ್ಲ, ಉಪಯುಕ್ತವೂ ಆಗಿದೆ. ಒಂದು ಕಾದಂಬರಿಯನ್ನು ಸಮರ್ಪಕವಾಗಿ ಪರಿಚಯಿಸುವುದು ಸುಲಭದ ಕೆಲಸವೇನಲ್ಲ. ಒಂದು ಕೃತಿಯನ್ನು ಸರಿಯಾಗಿ ತಿಳಿದುಕೊಳ್ಳದೆಯೇ ಅದನ್ನು ಪರಿಚಯಿಸಲಾಗದು. ಕೃತಿ ಹೊಸದಿದ್ದರಂತೂ ಈ ಸಮಸ್ಯೆ ಇನ್ನಷ್ಟು ಕಠಿಣವಾಗುತ್ತದೆ. ಆದರೆ ಈ ಸಂಗ್ರಹದ ಲೇಖಕರು ಈ ಕಾರ್ಯವನ್ನು ಸಮರ್ಥವಾಗಿ ನೆರವೇರಿಸಿದ್ದಾರೆ. ಮಧು ಕೃಷ್ಣಮೂರ್ತಿಯವರ, ಕುಂ.ವೀ. ಅವರ ಅರಮನೆ ಅನುಭವ ಮತ್ತು ಪ್ರತಿಕ್ರಿಯೆ', ಶ್ರೀಕಾಂತ ಬಾಬು ಅವರ ಅವಧೇಶ್ವರಿ', ತ್ರಿವೇಣಿ ಶ್ರೀನಿವಾಸರಾವ್ ಅವರ ನಾ ಕಂಡ ಅಶ್ವಮೇಧ', ವಿಶ್ವನಾಥ ಹುಲಿಕಲ್ ಅವರ ವಿವೇಕ ಶಾನಭಾಗರ ಒಂದು ಬದಿಯ ಕಡಲು', ಟಿ.ಎನ್. ರಾಜಶೇಖರರು ಬರೆದ ಶಾಂತಿನಾಥ ದೇಸಾಯಿಯವರ ಮೇರುಕೃತಿ ಓಂ ಣಮೋ', ಅಲಮೇಲು ಆಯ್ಯಂಗಾರ್‌ರವರ ದೇವನೂರ ಮಹಾದೇವರ ಕುಸುಮಬಾಲೆ', ಯಶವಂತ ಚಿತ್ತಾಲರ ಕೇಂದ್ರ ವೃತ್ತಾಂತ' ಮತ್ತು ಅನಂತಮೂತಿರ್ಯಯವರ ದಿವ್ಯ'ಗಳನ್ನು ಕುರಿತ ಆಹಿತಾನಲರ ಲೇಖನಗಳು, ಮೀರಾ ಪಿ. ಆರ್. ಅವರ ಪುರುಷೋತ್ತಮ', ಮಾಲಾ ರಾವ್ ಅವರ ಪ್ರಸನ್ನರ ಬಾಲಗೋಪಾಲ ಒಂದು ಇಣುಕು ನೋಟ', ಜ್ಯೋತಿ ಮಹದೇವ ಅವರ ತೇರು ನನ್ನ ನೋಟದಲ್ಲಿ', ಪ್ರತಿಭಾ ಭಾಗವತರ ತೊಟ್ಟಿಲು ಒಂದು ಅವಲೋಕನ', ಶಾಂತಲಾ ಭಂಡಿಯವರ ಜೋಗಿಯವರ ಯಾಮಿನಿಯೊಂದಿಗೆ ಮುಖಾಮುಖಿ', ನಳಿನಿ ಮೈಯ ಅವರ ಶಿಖರಸೂರ್ಯ' ಹಾಗೂ ವಲ್ಲೀಶ ಶಾಸ್ತ್ರಿಯವರ ಹಳ್ಳ ಬಂತು ಹಳ್ಳ' ಇಂಥ ಲೇಖನಗಳು ವಿಮರ್ಶೆಯ ಪ್ರಾಥಮಿಕ ಕರ್ತವ್ಯವನ್ನು ಸಮರ್ಥವಾಗಿ ಹಾಗೂ ಅಚ್ಚುಕಟ್ಟಿನಿಂದ ನೆರವೇರಿಸುತ್ತವೆ.

ಆದರೆ ಕೃತಿಗಳೊಡನೆ ಇನ್ನೂ ಹೆಚ್ಚು ಗಂಭೀರವಾದ ತೊಡಗಿಕೊಳ್ಳುವಿಕೆಯನ್ನು ತೋರುವ ಹಲವಾರು ಲೇಖನಗಳೂ ಈ ಪುಸ್ತಕದಲ್ಲಿವೆಯೆನ್ನುವುದು ಮಹತ್ವದ್ದಾಗಿದೆ. ಗುಂಡೂ ಶಂಕರ ಮತ್ತು ಶೈಲಜಾ ಶಂಕರರ ಸಾಹಿತ್ಯ, ಧರ್ಮ ಮತ್ತು ರಾಜಕೀಯ ಸಮಕಾಲೀನ ಸಾಹಿತ್ಯದಲ್ಲಿ ಭೈರಪ್ಪನವರ ಆವರಣದ ಸ್ಥಾನ', ಎಂ.ಆರ್. ದತ್ತಾತ್ರಿಯವರ ಎನ್ನ ಭವದ ಕೇಡು' ವಿರುದ್ಧ ಧ್ರುವಗಳ ಜಟಾಪಟಿಯ ವ್ಯಥೆ', ಎಚ್.ವೈ. ರಾಜಗೋಪಾಲರ ಗಾಂಧಿಯುಗಕ್ಕೆ ಕನ್ನಡಿ - ನಾಗವೇಣಿಯವರ ಗಾಂಧಿ ಬಂದ' ಮತ್ತು ವ್ಯಾಸರಾಯ ಬಲ್ಲಾಳರ ಹೆಜೆ', ಗುರುಪ್ರಸಾದ ಕಾಗಿನೆಲೆಯವರ ಲಂಕೇಶರ ಅಕ್ಕ', ಎಚ್.ವಿ. ರಂಗಾಚಾರ್ ಅವರ ಮಂದ್ರದಲ್ಲಿ ಕಲೆ ಮತ್ತು ಕಾಮ', ಟಿ.ಎನ್. ಕೃಷ್ಣರಾಜು ಅವರ ನೆನಪುಗಳ ದರ್ಪಣ ಲೋಕ ಮತ್ತೊಬ್ಬನ ಆತ್ಮಚರಿತ್ರೆ', ವಿಮಲಾ ರಾಜಗೋಪಾಲರ ಮಾನವೀಯ ಮಾಯಾಲೋಕ ಅಸಮಾನ ಬದುಕು' ಹಾಗೂ ಶಶಿಕಲಾ ಚಂದ್ರಶೇಖರ್ ಅವರ ನೇಮಿಚಂದ್ರರ ಯಾದ್ ವಶೇಮ್' ಇಂಥ ಲೇಖನಗಳಲ್ಲಿ ಗ್ರಹಿಕೆಯ ಸೂಕ್ಷ್ಮತೆ, ತಾತ್ವಿಕ ತಿಳಿವು ಮತ್ತು ಸಮಕಾಲೀನ ಸಂವೇದನೆಗಳು ಒಟ್ಟುಗೂಡಿದಾಗ ಉತ್ಪನ್ನವಾಗುವ ವಿಮರ್ಶೆಯ ಪ್ರಬುದ್ಧತೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಗುಂಡೂ ಶಂಕರ ಹಾಗೂ ಶೈಲಜಾ ಶಂಕರ ಅವರ ಆವರಣದ ವಿಶ್ಲೇಷಣೆ ಭೈರಪ್ಪನವರ ಈ ಕಾದಂಬರಿಯನ್ನು ಕುರಿತು ಬಂದ ಅತ್ಯುತ್ತಮ ಲೇಖನಗಳಲ್ಲೊಂದಾಗಿದೆ. ಭೈರಪ್ಪನವರ ಆವರಣ ಹಾಗೂ ಟರ್ಕಿಯ ಕಾದಂಬರಿಕಾರ ಅರ್ಹಸ್ ಪಮುಕ್‌ರ My Name is Red ಕಾದಂಬರಿಗಳನ್ನು ಕೇಂದ್ರದಲ್ಲಿಟ್ಟುಕೊಂಡು ಸಮಕಾಲೀನ ಜಗತ್ತಿನ ಅತ್ಯಂತ ಮಹತ್ವದ ಸಮಸ್ಯೆಯಾದ ಧಾರ್ಮಿಕ ಘರ್ಷಣೆಯ ಸಾಹಿತ್ಯಕ ಮತ್ತು ರಾಜಕೀಯ ಆಯಾಮಗಳನ್ನು ಶಂಕರ್ ದಂಪತಿ ಸಮರ್ಥವಾಗಿ ವಿಶ್ಲೇಷಿಸಿದ್ದಾರೆ. ಧಾರ್ಮಿಕ ಘರ್ಷಣೆಯ ಸ್ವರೂಪ ಈ ಎರಡೂ ಕಾದಂಬರಿಗಳಲ್ಲಿ ಬೇರೆ ಬೇರೆಯಾಗಿದ್ದರೂ ಕಲೆ ಹಾಗೂ ಚರಿತ್ರೆಗಳನ್ನು ಮುಖಾಮುಖಿಯಾಗಿಸುವ ಅವುಗಳ ತಂತ್ರದ ಮೂಲಕ ಹೋಲಿಕೆ ಸಾಧ್ಯವಾಗುತ್ತದೆ. ಪಮುಕ್‌ನ Redಗೆ ಹೋಲಿಸಿದಲ್ಲಿ ಆವರಣದಲ್ಲಿ ಬರುವ ಪಾತ್ರಗಳು ತೀರ ಏಕದೃಷ್ಟಿಯಿಂದ ಕೂಡಿ ಪೇಲವವಾಗಿ ಕಾಣುತ್ತವೆ. ಪ್ರೊ. ಶಾಸ್ತ್ರಿಯ ಪಾತ್ರವಂತೂ ಭಾರತದ ಪ್ರಗತಿಪರ ಪ್ರಾಜ್ಞನೊಬ್ಬನ ವಿಕಟ ಚರಿತ್ರೆ(cartoon)ಯಂತೆ ಕಾಣುತ್ತದೆ. ಲಕ್ಷ್ಮಿಯ ಬಾಹ್ಯಪ್ರಪಂಚ ತೀರ ಭಾವರೂಪಕವಾಗಿದೆ. ಅವಳ ಪಾತ್ರ ಯಾವ ರೀತಿಯಲ್ಲಿಯೂ ವಾಸ್ತವ ಪ್ರಜ್ಞೆಯನ್ನು ಬಿಂಬಿಸುವುದಿಲ್ಲ' ಎಂಬ ಒಳನೋಟ ಶಂಕರರಿಗೆ ಸಾಧ್ಯವಾಗುವುದು ಈ ಹೋಲಿಕೆಯ ಮೂಲಕವೇ. ಸಾಹಿತ್ಯಕ ದೃಷ್ಟಿಯಿಂದ ಈ ಎರಡು ಕಾದಂಬರಿಗಳನ್ನು ಹೋಲಿಸಿದಂತೆ ಅವುಗಳ ರಾಜಕೀಯ ಆಯಾಮಗಳನ್ನೂ ಶಂಕರ ಪರೀಕ್ಷಿಸುತ್ತಾರೆ. ಇಲ್ಲಿ ಅವರಿಗೆ ಸ್ಯಾಮ್ಯುಅಲ್ ಹಂಟಿಂಗ್‌ಟನ್‌ರ ನಾಗರಿಕತೆಗಳ ಸಂಘರ್ಷದ ತತ್ವ ಹಾಗೂ ಅದನ್ನು ವಿರೋಧಿಸಿದ ಎಡ್ವರ್ಡ್ ಸೈದ್ ಹಾಗೂ ಅಮರ್ತ್ಯಸೇನ್‌ರ ವಿಚಾರಗಳು ಉಪಯುಕ್ತವಾಗುತ್ತವೆ. ಭೈರಪ್ಪನವರ ಪಾತ್ರಗಳು ಮೂಲತಃ ರೂಪಿತವಾಗಿರುವುದು ಲೇಖಕರ ಧಾರ್ಮಿಕ ಅನನ್ಯತೆಯ ಮತ್ತು ಅವರ ಅಸ್ಮಿತೆ ನಂಬಿಕೆಯ ಮೇಲೆ, ಹಂಟಿಂಗ್‌ಟನ್ ಅವರ ಆಲೋಚನಾ ಧಾಟಿಯಲ್ಲಿ, ಇದಕ್ಕೆ ತೀವ್ರ ವಿರೋಧವಾಗಿ, ಪಮುಕರ ಪಾತ್ರಗಳು ರೂಪಿತವಾಗಿರುವುದು ಕೇವಲ ಧಾರ್ಮಿಕ ಅನನ್ಯತೆಯ ಹಿನ್ನೆಲೆಯಲ್ಲಲ್ಲ. ಅದಕ್ಕೂ ಹೆಚ್ಚಾಗಿ ಇವರ ಕಲಾತ್ಮಕ, ಲೌಕಿಕ, ಲೈಂಗಿಕ ಮುಂತಾದ ಆಯಾಮಗಳ ಹಿನ್ನೆಲೆಯಲ್ಲಿ. ಪಮುಕ್‌ರ ಪಾತ್ರಗಳಲ್ಲಿ ಸೇನ್ ಮತ್ತು ಸೈದ್ ಅವರ ಆಲೋಚನಾ ಧಾಟಿಯನ್ನು ಕಾಣಬಹುದು' ನವ್ಯೋತ್ತರ ಚಿಂತನೆಯ ಬೆಳಕಿನಲ್ಲಿ ಹಾಗೂ ತೌಲನಿಕ ಪರಿಪ್ರೇಕ್ಷ್ಯದಲ್ಲಿ ಆವರಣವನ್ನು ಓದುವ ಮೂಲಕ ಶಂಕರ್ ಅವರಿಗೆ ಹೊಸ ಒಳನೋಟಗಳು ಲಭ್ಯವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+