ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.27ರಂದು ತುಳಸಿವನ, ಭಾವಬಿಂಬ ಪುಸ್ತಕ ಬಿಡುಗಡೆ

By Staff
|
Google Oneindia Kannada News

Triveni Srinivas Rao and Jyothi Mahadevನವಿರಾದ ನಿರೂಪಣೆಯಿರುವ, ಕನ್ನಡ-ಕರ್ನಾಟಕ ಸಂಸ್ಕೃತಿಯ ಪ್ರತಿಬಿಂಬದಂತಿರುವ 'ತುಳಸಿಯಮ್ಮ' ಖ್ಯಾತಿಯ ತ್ರಿವೇಣಿ ಶ್ರೀನಿವಾಸ್ ಅವರ ಲಘು ಪ್ರಬಂಧಗಳ ಸಂಕಲನ 'ತುಳಸಿವನ' ಹಾಗು 'ಸುಪ್ತದೀಪ್ತಿ' ಕಾವ್ಯನಾಮವಿರುವ ಜ್ಯೋತಿ ಮಹಾದೇವ್ ಅವರ ಭಾವೋತ್ಕಟತೆಯಿಂದ ಕೂಡಿರುವ ಪ್ರಬುದ್ಧ ಕವನಗಳ ಸಂಕಲನ 'ಭಾವಬಿಂಬ' ಇದೇ ಭಾನುವಾರ ಜುಲೈ 27ರಂದು ಬೆಂಗಳೂರಿನಲ್ಲಿ ಬಿಡುಯಾಗುತ್ತಲಿವೆ.

ವಿಶೇಷವೆಂದರೆ ಇಬ್ಬರೂ ಲೇಖಕಿಯರು ಅಮೆರಿಕನ್ನಡತಿಯರು. ದೂರದೇಶದಲ್ಲಿದ್ದೂ ನಿಯಮಿತವಾಗಿ ಮತ್ತು ಅಷ್ಟೇ ಕನ್ನಡ ಪ್ರೀತಿಯಿಂದ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ತ್ರಿವೇಣಿ ಶ್ರೀನಿವಾಸ್ ಅವರ ಬಹುತೇಕ ಪ್ರಬಂಧಗಳು ದಟ್ಸ್‌ಕನ್ನಡದ 'ತುಳಸಿವನ' ಅಂಕಣದಲ್ಲಿ ಪ್ರಕಟವಾಗಿವೆ.

ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಪತ್ರಕರ್ತ ಎಚ್. ಗಿರೀಶ್ ರಾವ್ (ಜೋಗಿ) ಅವರು ತುಳಸಿವನ ಪುಸ್ತಕ ಬಿಡುಗಡೆ ಮಾಡಿ ಕೃತಿಯ ಕುರಿತು ಮಾತನಾಡಲಿದ್ದಾರೆ. ಕವಿ ಮತ್ತು ಚಿತ್ರ ಸಾಹಿತಿ ದೊಡ್ಡರಂಗೇಗೌಡ ಅವರು ಭಾವಬಿಂಬ ಕೃತಿಯನ್ನು ಬಿಡುಗಡೆ ಮಾಡಿ ಕೃತಿ ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲಿದ್ದಾರೆ. ಖ್ಯಾತ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಮುನ್ನ ಲಘು ಉಪಹಾರ ಮತ್ತು ನಂತರ ಸುಗ್ರಾಹ ಭೋಜನದ ವ್ಯವಸ್ಥೆ ಮಾಡಲಾಗಿರುತ್ತದೆ. ಸಹೃದಯರು ಬಂದು ಪುಸ್ತಕಗಳನ್ನು ಕೊಂಡು ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಬೇಕೆಂದು ಲೇಖಕಿಯರು ಕೋರಿದ್ದಾರೆ.

ಪುಸ್ತಕ ಪ್ರೇಮಿಗಳ ಗಮನಕ್ಕೆ

ಸ್ಥಳ : ಸುಚಿತ್ರ ಫಿಲ್ಮ್ ಸೊಸೈಟಿ, 36, 9ನೇ ಮುಖ್ಯಬೀದಿ ಬಿ.ವಿ.ಕಾರಂತ ರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು - 560 070.
ದಿನಾಂಕ : 27ನೇ ಜುಲೈ 2008 (ಭಾನುವಾರ)
ಸಮಯ : ಬೆಳಿಗ್ಗೆ 10 ಗಂಟೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X