ಆ.21ರಂದು ‘ಬೆಂಗಳೂರು ದರ್ಶನ’ ಕೃತಿ ಬಿಡುಗಡೆ

ಬೆಂಗಳೂರು : ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ‘ಬೆಂಗಳೂರು ದರ್ಶನ’ ಎನ್ನುವ ಬೃಹತ್‌ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಉದಯ ಭಾನು ಕಲಾಸಂಘದ ನಾಲ್ಕು ದಶಕಗಳ ಸಾಧನಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಕೃತಿಯನ್ನು ಬಿಡುಗಡೆ ಮಾಡುವರು. ಕಾರ್ಯಕ್ರಮವನ್ನು ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಉದ್ಘಾಟಿಸುವರು.

ಸಂಸದ ಅನಂತಕುಮಾರ್‌ ‘ಜಾಗತೀಕರಣ : ಬೆಂಗಳೂರು’ ಪುಸ್ತಕವನ್ನು, ಮಹಾಪೌರರಾದ ಆರ್‌.ನಾರಾಯಣಸ್ವಾಮಿ ‘ಸಿರಿ-ಸಂಪದ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು. ಡಾ.ಸಿ.ಎನ್‌.ಆರ್‌. ರಾವ್‌ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಎನ್‌.ಆರ್‌.ಚಂದ್ರನ್‌, ಜಿ.ನಾರಾಯಣ ಮತ್ತಿತರು ಭಾಗವಹಿಸುವರು.

ಪ್ರೊ.ಎಲ್‌.ಎಸ್‌.ಶೇಷಗಿರಿ ರಾವ್‌ ಅವರ ಪ್ರಧಾನ ಸಂಪಾದಕತ್ವದಲ್ಲಿ 1800ಪುಟಗಳ ಬೆಂಗಳೂರು ದರ್ಶನ ಎರಡು ಸಂಪುಟಗಳಲ್ಲಿ ಹೊರಬಂದಿದೆ. 175ಮಂದಿ ತಜ್ಞರ 250ಕ್ಕೂ ಅಧಿಕ ಲೇಖನಗಳು ಕೃತಿಯಲ್ಲಿವೆ. ಎರಡೂ ಸಂಪುಟಗಳ ಒಟ್ಟು ಬೆಲೆ ರೂ.1000.

(ಇನ್ಫೋ ವಾರ್ತೆ)


ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+