ಸಿ.ಸೀತಾರಾಮ್ ಅವರ ‘ಮನಮಂಥನ’ ಬಿಡುಗಡೆ
ಬೆಂಗಳೂರು : ಹಿರಿಯ ಪತ್ರಕರ್ತ ಸಿ. ಸೀತಾರಾಮ್, ಲೇಖಕಿಯರಾದ ಎಚ್.ಎಸ್. ಪಾರ್ವತಿ ಮತ್ತು ತೇಜಸ್ವಿನಿ ಅರಸ್ ಅವರು ಬರೆದಿರುವ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಜೂ.17ರಂದು ಆಯೋಜಿಸಲಾಗಿದೆ.
ಸಿ.ಸೀತಾರಾಂ ಅವರ ‘ಮನಮಂಥನ’, ಎಚ್.ಎಸ್. ಪಾರ್ವತಿಯವರ‘ ನಂದ-ನಂದನ’ ಮತ್ತು ತೇಜಸ್ವಿನಿ ಅರಸ್ ಅವರ‘ಅವಧರಿಸು ಬಾ’ ಎಂಬ ಪುಸ್ತಕಗಳನ್ನು ಸುಂದರ ಪ್ರಕಾಶನ ಹೊರತಂದಿದ್ದು, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜೂ.17ರಂದು ಸಂಜೆ 6ಗಂಟೆಗೆ ಏರ್ಪಡಿಸಿದೆ.
ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಮತ್ತು ಅರುಣ್‌ಕುಮಾರ್(ಡ್ರಮ್ಸ್) ಅವರ ಜುಗಲ್‌ಬಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾಹಿತ್ಯ ಮತ್ತು ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಸುಂದರ ಪ್ರಕಾಶನದ ಗೌರಿ ಸುಂದರ್ ಕೋರಿದ್ದಾರೆ.
(ಇನ್ಫೋ ವಾರ್ತೆ)












Click it and Unblock the Notifications