ಇದೋ ಬಂದಿದೆ ‘ದಿನಕರ್‌ ತಂತ್ರ ಕೃಷ್ಣ ಅತಂತ್ರ’!

ಬೆಂಗಳೂರು : ರಾಜ್ಯದ ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಅವರ ‘ವೀರಪ್ಪನ್ಸ್‌ ಪ್ರೆೃಜ್‌ ಕ್ಯಾಚ್‌ : ರಾಜ್‌ಕುಮಾರ್‌’ ಕೃತಿಗೆ ಉತ್ತರವಾಗಿ ಪ್ರಜಾಮತ ಪ್ರಕಾಶನ ‘ದಿನಕರ್‌ ತಂತ್ರ ಕೃಷ್ಣ ಅತಂತ್ರ’ ಎನ್ನುವ ಕೃತಿ ಪ್ರಕಟಿಸಿದೆ. ಪತ್ರಕರ್ತ ಎಸ್‌.ಅಶೋಕ್‌ ಬಾಬು ಬರೆದಿರುವ ಈ ಪುಸ್ತಕ ಗುರುವಾರ ಬಿಡುಗಡೆಯಾಯಿತು.

ದಿನಕರ್‌ ಅವರು ತಮ್ಮ ಪುಸ್ತಕದಲ್ಲಿ ಉದ್ದೇಶಪೂರ್ವಕ ಸುಳ್ಳುಗಳನ್ನು ಸೇರಿಸಿದ್ದಾರೆ. ಆ ಪುಸ್ತಕದಲ್ಲಿ ಅನೇಕ ವೈರುಧ್ಯಗಳು ಇವೆ. ದಿನಕರ್‌ ಪುಸ್ತಕದ ಅಸತ್ಯ- ವೈರುಧ್ಯಗಳಿಗೆ ಉತ್ತರವಾಗಿ ತಾವು ‘ದಿನಕರ್‌ ತಂತ್ರ ಕೃಷ್ಣ ಅತಂತ್ರ’ ಪುಸ್ತಕ ಬರೆದಿರುವುದಾಗಿ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅಶೋಕ್‌ ಬಾಬು ತಿಳಿಸಿದರು.

ಬಹುಜನ ಸಮಾಜ ಪಕ್ಷದ ವಿ.ಮುನಿಯಪ್ಪ ‘ದಿನಕರ್‌ ತಂತ್ರ ಕೃಷ್ಣ ಅತಂತ್ರ’ ಕೃತಿಯನ್ನು ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು- ದಿನಕರ್‌ ಅವರ ‘ವೀರಪ್ಪನ್ಸ್‌ ಪ್ರೆೃಜ್‌ ಕ್ಯಾಚ್‌ : ರಾಜ್‌ಕುಮಾರ್‌’ ಪುಸ್ತಕವನ್ನು ಸುಳ್ಳಿನ ಕಂತೆ ಎಂದು ಜರಿದರು. ಪೊಲೀಸ್‌ ಅಧಿಕಾರಿಯಾಗಿದ್ದ ದಿನಕರ್‌ ಪುಸ್ತಕದ ಮೂಲಕ ಸುಳ್ಳು ಹೇಳಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗೋವಿಂದು ಆಗ್ರಹಿಸಿದರು.

(ಇನ್ಫೋ ವಾರ್ತೆ)


ಪೂರಕ ಓದಿಗೆ-
ಶಾಶ್ವತ ಸಾಹಿತ್ಯ ಮತ್ತು ದಿನಕರ್‌ ಪುಸ್ತಕ
ದಿನಕರ್‌ ಹುಚ್ಚ , ನಾನು ಅರೆಹುಚ್ಚ- ರವಿ ಬೆಳಗೆರೆ

Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+