ಹೆದ್ದಾರಿಯಲ್ಲಿ ಸಾಗುವಾಗ ಎಲ್ಲ ಟೈರ್ ಕಳಚಿಕೊಂಡ ಬಸ್ಸಿನಂತಾಗಿದೆ ಬದುಕು

Posted By: ಸನಂದ್
Subscribe to Oneindia Kannada

ಹಗಲಿನಲ್ಲೂ ಉರಿಯುತ್ತಿರುವ ದೀಪದಂತೆ ಕಾಣುವ ನಿನ್ನ ಕಣ್ಣೊಳಗಿನ ಬೆಳಕಿಗೆ ಇಷ್ಟಿಷ್ಟೇ ಉರಿದುಹೋದ ನನ್ನ ಕನಸುಗಳ ಬಗ್ಗೆ ಇನ್ಯಾರಿಗೆ ಹೇಳಲಿ? ನಗುವಿನ ಚೆಲುವು ಸವಿಯುತ್ತಾ ಹೃದಯಕ್ಕೆ ಇರಿದ ನೋವಿನ ಶಬ್ದವೂ ಹೊರಗೆ ಬರದೇ ಬಿಕ್ಕಿ ನೆಲ ಕಂಡ ಕಣ್ಣ ಹನಿಗಳ ಲೆಕ್ಕ ಹೇಗೆ ಹೇಳಲಿ? ವರ್ಷಗಳ ಕಾಲ ನಿನ್ನನ್ನು ಹೊರತುಪಡಿಸಿ ಭವಿಷ್ಯದ ಬಗ್ಗೆ ಏನನ್ನೂ ಯೋಚಿಸದ ನನ್ನೆದುರಿಗೆ ಈಗ ಗಾಢ ಕತ್ತಲು.

ಹುಡುಗಿ ನಿನ್ನ ನೆನಪಲ್ಲಿ ಇಷ್ಟಿಷ್ಟೇ ಸವೆಯುತ್ತಿರುವ...

ಹೆದ್ದಾರಿಯಲ್ಲಿ ಸಾಗುವಾಗ ದಿಢೀರನೆ ಎಲ್ಲ ಟೈರ್ ಕಳಚಿಹೋದ ಬಸ್ಸಿನಂತಾಗಿದೆ ನನ್ನ ಸ್ಥಿತಿ. ಬಸ್ಸು ಹತೋಟಿಯಲ್ಲಿಟ್ಟುಕೊಂಡು ಚಲಾಯಿಸುತ್ತಿದ್ದ ಚಾಲಕಿ ನೀನು, ಅದ್ಯಾವ ಮಾಯೆಯಲ್ಲೋ ಒಳಗಿಂದ ಜಿಗಿದು ಬಿಟ್ಟಿದ್ದೀಯೆ. ಇನ್ನು ಯಾವ ಹೋಲಿಕೆ ಕೂಡ ಈಗಿನ ನನ್ನ ಪರಿಸ್ಥಿತಿಯನ್ನು ವಿವರಿಸಲಾಗದು ಎಂಬುದು ಅಷ್ಟೇ ಸತ್ಯ.

Love letter by a boy in disappointment

ಈ ಪತ್ರ ಬರೆಯುತ್ತಿರುವುದು ಕೂಡ ಬಿಡುಗಡೆಯ ಭಾಗವೇ. ಇನ್ನು ವಾಪಸ್ ಬರಲಾರದಷ್ಟು ದೂರ ಹೋಗಿರುವ ನಿನ್ನ ಜತೆಗಿನ ನೆನಪುಗಳಿಗೆ ಬೀಳ್ಕೊಡುವ ಕ್ಷಣ ಬಂದಿದೆ. ನಿನ್ನ ಹುಡುಕಿ ಹುಡುಕಿ ತಂದುಕೊಟ್ಟ ಷರಟುಗಳೆಲ್ಲವನ್ನೂ ಒಮ್ಮೆಲೆ ಸುಟ್ಟು ಹಾಕಲು ಕೈ ಜಗ್ಗುತ್ತಿದೆ. ಹಾಗೆ ಸುಡುವುದಾದರೆ ನಾನಿರುವ ಕೋಣೆಗೇ ಬೆಂಕಿ ಇಡಬೇಕು: ನನ್ನನ್ನು ಸೇರಿಸಿಕೊಂಡು.

ಕಡ್ಲೇಕಾಯಿ ಪರಿಷೆಗೆ ಕೆ.ಸಿ.ದಾಸ್ ಸ್ವೀಟ್ಸ್ ಮುಂದೆ ನಿನಗಾಗಿ ಕಾಯುವ ಕರ್ಪೂರ

ಏಕೆಂದರೆ ನನ್ನನ್ನೂ ಸೇರಿದಂತೆ ಇಲ್ಲಿರುವ ವಸ್ತು-ಪಾತ್ರೆ-ಪಗಡ ಎಲ್ಲದರ ಆಯ್ಕೆ ನಿನ್ನದೇ. ಆದರೆ ಅವೆಲ್ಲವನ್ನೂ ರಸ್ತೆಗೆ ಎಸೆದು ಬಂದು, ನಾಳೆಯಿಂದ ಹೊಸದಾಗಿ ದಿನ ಆರಂಭಿಸುತ್ತೀನಿ. ನಿನ್ನ ಅಪ್ಪ- ಅಮ್ಮ ನೋಡಿ, ಮೆಚ್ಚಿದ ಹುಡುಗನನ್ನೇ ಮದುವೆ ಆಗುವಷ್ಟು ವಿಧೇಯ ಮಗಳಾದ ನಿನಗೆ ಪ್ರೀತಿಸಿದ ಆರಂಭದಲ್ಲಿ ಹೀಗೊಂದು ಸನ್ನಿವೇಶ ಎದುರಾಗಬಹುದಾದ ಅಂತ ಹೊಳೆಯಲೇ ಇಲ್ಲವಾ?

ಸರಿ, ಮದುವೆ ಆಗಬೇಕು- ಅದೂ ನಿನ್ನಪ್ಪ- ಅಮ್ಮ ನೋಡಿದ ಹುಡುಗನನ್ನೇ ಮದುವೆ ಆಗಬೇಕು ಅಂತಿದೀಯಾ. ನಿನ್ನ ಗಂಡನಾಗುವವನಿಗೆ ಬಟ್ಟೆ ಹುಡುಕುವಾಗ ನನ್ನ ನೆನಪು ಆಗುವುದಿಲ್ಲವಾ? ಏಕೆಂದರೆ, ಹುಡುಕಿಕೊಟ್ಟ ಎಲ್ಲವನ್ನೂ ನಿನ್ನಿಷ್ಟವೇ ನನ್ನಿಷ್ಟ ಎನ್ನುವ ನನ್ನಂಥ ಮೂರ್ಖ ಇನ್ನೊಬ್ಬ ಸಿಕ್ಕಾನೆಯೇ?

ಸಿಗಲಿ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಲಿ. ನಿನಗೆ ಸ್ವಲ್ಪ ಕೆಟ್ಟದಾದರೂ ದುಃಖವಾದರೂ ಅದೆಷ್ಟೇ ನೂರು ಕಿಲೋಮೀಟರ್ ದೂರದಲ್ಲಿದ್ದರೂ ಮತ್ತೆ ನೋವಾಗುವುದು ನನಗೇ.

ನಿನ್ನನ್ನು ಬಯ್ದುಕೊಳ್ಳಲು ಆಗದ
ಅಸಹಾಯಕ ಪ್ರೇಮಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A boy basically from rural background writes a love letter to ex girl friend in love disappointment.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ