ಇಲ್ಲಿ ಜನರ ಆರ್ತನಾದ, ಅಲ್ಲಿ ಸಂಗೀತದ ನಿನಾದ!

27ರ ಬೆಳಿಗ್ಗೆಯಿಂದಲೇ ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಆರಂಭವಾಯಿತು. ಅಗ್ನಿಶಾಮಕ ದಳ-ಬಳ್ಳಾರಿ ಪೊಲೀಸ್ ಪಡೆ-ಪೂನಾದಿಂದ ಬಂದಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸದಸ್ಯರೆಲ್ಲ ಭಾರಿ ಶ್ರಮ ವಹಿಸಿ ಕಾರ್ಯಾಚರಣೆ ಮಾಡಿದರು. ನಾಲ್ಕು ಅಂತಸ್ತು ನೆಲಕಚ್ಚಿ ಇನ್ನುಳಿದ ಮೂರು ಅಂತಸ್ತುಗಳು ದುರ್ಬಲವಾಗಿ ನಿಂತಿದ್ದವು. ಇವುಗಳ ಗೋಡೆಗಳೆಲ್ಲ ಸಂಪೂರ್ಣ ಬಿರುಕು ಬಿಟ್ಟಿದ್ದವು. ಹಲವೆಡೆ ಇವುಗಳು ಜೋತಾಡುತ್ತಿದ್ದವು. ಇಂಥ ಸ್ಥಿತಿಯಲ್ಲಿ ಕಾರ್ಯಾಚರಣೆ ಮಾಡುವವರು ಆಪತ್ತಿನ ಅಂಚಿನಲ್ಲಿಯೇ ಇದ್ದರು. ಅಲ್ಲಿಂದ ವರದಿ ಮಾಡುತ್ತಿದ್ದ ಪತ್ರಕರ್ತರ ಸ್ಥಿತಿಯೂ ಇದೇ ಆಗಿತ್ತು! ಹೊರ ಬರುತ್ತಿದ್ದ ಶವಗಳ ಗುರುತು ಪತ್ತೆ ಹಚ್ಚಿದೊಡನೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಆದರೆ ಕೇವಲ 70 ಕಿಲೋಮೀಟರ್ ದೂರದಲ್ಲಿ ನೃತ್ಯ-ಸಂಗೀತ-ಉತ್ಸವದ ನಿನಾದ ಮೊಳಗುತ್ತಿತ್ತು!
ಇಷ್ಟೆಲ್ಲ ವಿಚಾರ ಏಕೆ ಹೇಳಿದನೆಂದರೆ ಇಂಥ ದುರಂತದ ಸಂದರ್ಭದಲ್ಲಿ ಮತ್ಯಾರೆ ಉಸ್ತುವಾರಿ ಸಚಿವರಾಗಿದ್ದರೂ ಉತ್ಸವ ರದ್ದುಗೊಳಿಸುತ್ತಿದ್ದರು. ಕಣ್ಣಮುಂದೆ ಕಟ್ಟುವ ಹೃದಯ ವಿದ್ರಾವಕ ಇರುವಾಗ ಉತ್ಸವದ ಸೊಬಗಿಗೆ ಅರ್ಥವಿದೆಯೇ.. ಈ ಪ್ರಶ್ನೆಯನ್ನು ಜನಾರ್ದನ ರೆಡ್ಡಿ ಹಾಕಿಕೊಳ್ಳಲಿಲ್ಲ. ಇದಕ್ಕೆ ಉದಾಹರಣೆ 'ಮೂರು ದಿನ ಅದ್ದೂರಿಯಿಂದ ನಡೆದ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕೋತ್ಸವ"!
ಮುಂದೆ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿ ವಿಜಯನಗರ ಥೀಮ್ ಪಾರ್ಕ್ ಸ್ಥಾಪನೆ ನಿರ್ಧಾರ. ಇದರಿಂದಾದ ಘಟನಾವಳಿಗಳ ಬಗ್ಗೆ ವಿವರಿಸುತ್ತೇನೆ. ಶ್ರೀಕೃಷ್ಣದೇವರಾಯರ ಮರು ಜನ್ಮ ಕಥೆಯೂ ಇವೆಲ್ಲವುಗಳೊಂದಿಗೂ ತಳಕು ಹಾಕಿಕೊಂಡಿದೆ ಎಂಬುದನ್ನೂ ಗಮನಿಸಿ! [ಕೃಪೆ : ವರದಿಗಾರ]
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications