ಸಾಮರಸ್ಯದ ನವ್ಯ ಯುಗಕೆ ನಿಮಗಿದೋ ಆಮಂತ್ರಣ

ಉಪೇಕ್ಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ, ಅವರಲ್ಲಿ ಕೆಲವರಿಗಿರುವ ಕೀಳರಿಮೆಯನ್ನು ಕಿತ್ತೆಸೆಯಲು 'ವೈಷ್ಣವ ದೀಕ್ಷೆ' ಕೊಡಲು ಸಿದ್ದ ಎಂದು, 'ದಲಿತರು', 'ಮಾದಿಗರು' ಎಂಬುದಾಗಿ ಮೇಲ್ವರ್ಗದವರು ಕರೆಯುವುದಕ್ಕಿಂತ ಹೆಚ್ಚಾಗಿ ಅವರೇ ಕರೆಸಿಕೊಳ್ಳಲು ಹೆಮ್ಮೆ ಪಡುವವರ ಕೇರಿಗಳಲ್ಲಿರುವವರ ಮನೆಗಳಿಗೆ ಭೇಟಿ ನೀಡಿ ಅವರವರ ಕುಲದೈವರ ಪೂಜೆ ಗೈಯುವ ಮುಖಾಂತರ ಅತ್ಯಂತ ಪ್ರೇರಣಾದಾಯಿಯಾದ ಕೆಲಸಕ್ಕೆ ನಾಂದಿ ಹಾಡಿದ್ದಾರೆ. ಆ ಮೂಲಕ ಉಳಿದೆಲ್ಲ ಮಠಾಧೀಶರಿಗೆ ಹಾಗೂ ಸಾಮರಸ್ಯ ತುಂಬಿದ ಹಿಂದೂ ಸಮಾಜದ ಭವ್ಯ ಕನಸನ್ನು ಕಾಣುತ್ತಿರುವವರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ.
ಕೇವಲ ತಮ್ಮ ಸ್ವಾರ್ಥ ರಾಜಕೀಯ ಕಾರಣಗಳಿಗೋಸ್ಕರ ಈ ಕೆಲಸದಲ್ಲೂ ಕೊಂಕನ್ನು ಹುಡುಕುವ ಅಸಾಧಾರಣ ಪ್ರಜೆಗಳು ಅವರವರ ಯೋಗ್ಯತೆಗೆ ತಕ್ಕಂತೆ ನಡೆದುಕೊಳ್ಳುತ್ತಿರುವುದು ಭಾರತದಂತಹ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಕ್ಕೆ ಆಶ್ಚರ್ಯವೇ ಅಲ್ಲ. ಆ ಮೂಲಕ ಉತ್ತಮ ಸಮಾಜದ ನಿರ್ಮಾಣದ ವಿಷಯದಲ್ಲಿ ತಮ್ಮ ಅಭಿಪ್ರಾಯವೇನು ಎಂಬುದನ್ನು ನಿರೂಪಿಸಿದ್ದಾರೆ.
ಅಸ್ಪೃಶ್ಯತೆಯ ವಿರುದ್ಧ ಈವರೆಗೆ ಮಾತಾಡಿ ಗೋಳಾಡಿರುವ ಎಷ್ಟು ಜನರು ಅಥವಾ ಎಷ್ಟು ಸಂಘಟನೆಗಳು ತಮ್ಮ ಕಾಳಜಿಯನ್ನು ಕೃತಿ ರೂಪಕ್ಕೆ ತಂದಿದ್ದಾರೆ? ಸಂಘರ್ಷದ ಮೂಲಕ, ಸೌಹಾರ್ದದ ಮೂಲಕ ಸಂಘಟನೆಯ ಮೂಲಕ ಅಸ್ಪೃಶ್ಯತೆಯನ್ನು ಹೋಗಲಾಡಿಸುತ್ತೇವೆ ಎಂಬ ಕೂಗಿನೊಂದಿಗೆ ಹುಟ್ಟಿದವರು ಬರೀ ಅನ್ಯ ಜಾತಿ-ವರ್ಗಗಳ ಜನರ ಮಧ್ಯ ಇರುವ ಅಂತರವನ್ನು ಕಾಪಾಡಿಕೊಳ್ಳುತ್ತ, ತಮ್ಮಗಳ ಸ್ವಾರ್ಥ ರಾಜಕೀಯದ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ಸಮಾಜ ದ್ರೋಹಿಗಳ ಬಗ್ಗೆ ಎಲ್ಲರೂ ಸದಾ ಜಾಗೃತಾಗಿರಬೇಕು. ಅವರ ಸ್ವಾರ್ಥಕ್ಕೋಸ್ಕರ ನಮ್ಮ ಮನದಲ್ಲಿ ದ್ವೇಷ ಬಿತ್ತುವ ಕೆಲಸಗಳು ಅವ್ಯಾಹತವಾಗಿ ನಡೆಯುತ್ತಿರುವುದು ನಮಗೆ ಹಾಗು ನಮ್ಮ ಸಮಾಜಕ್ಕೆ ಅತ್ಯಂತ ಕಂಟಕವಾದುದು.
ಪೂಜ್ಯ ಪೇಜಾವರ ಶ್ರೀಗಳ 'ಉತ್ತಮ ಹಿಂದೂ ಸಮಾಜದ' ನಿರ್ಮಾಣದ ಕುರಿತಾದ ಕೆಲಸಗಳಿಗೆ ಮಾದಿಗ ಜನಾಂಗದ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮೈಸೂರಿನಲ್ಲಿ ನಡೆದ ಮಾದಾರ ಚನ್ನಯ್ಯ ಸ್ವಾಮಿಗಳ ಬ್ರಾಹ್ಮಣ ಸಮುದಾಯದವರ ಭೇಟಿ ಮತ್ತಿತರ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ನಡೆಯಲಿರುವ ಒಳ್ಳೆಯ ಕೆಲಸಗಳ ಮುನ್ಸೂಚನೆ ನೀಡುತ್ತವೆ.
ಆಧುನಿಕ ವಿದ್ಯಾಭ್ಯಾಸದ ಕಾರಣದಿಂದ ಹಾಗು ಇನ್ನಿತರ ಕಾರಣಗಳಿಂದ ಅಸ್ಪೃಶ್ಯತೆಯ ವಿಷಯದಲ್ಲಿ ದಶಕಗಳ ಹಿಂದಿನ ಪರಿಸ್ಥಿತಿ ಪ್ರಸ್ತುತ ಇಲ್ಲದಿರುವಾಗ ಇಂದಿನ ಪರಿಸ್ಥಿತಿಯೂ ಸಹ ಉತ್ತಮಗೊಳ್ಳಲು ಸಮಯದ ಅವಶ್ಯಕತೆ ಇದೆ. ಈ ಕಾರಣದಿಂದ ಎಲ್ಲ ವರ್ಗಗಳ ಜನರು ಸಂಘರ್ಷಗಳಿಗೆ ಎಡೆ ಮಾಡಿಕೊಡದೆ ಸ್ವಾರ್ಥ ಸಾಧಕರ ಕೈಗೊಂಬೆಯಾಗದೆ ಸಾವಧಾನದಿಂದ ಕಾಯಬೇಕಾಗಿದೆ. ಅಸ್ಪೃಶ್ಯತೆಯಂತಹ ಸೂಕ್ಷ್ಮ ಸಮಸ್ಯೆಗಳು ಮನೋ ವಿಕಾಸದ ಮೂಲಕ ಮನಃ ಪರಿವರ್ತನೆಯ ಮೂಲಕ ಬಗೆಹರಿಯುವಂತಹವೇ ಹೊರತು ಸಂಘರ್ಷ ಅಥವಾ ಕ್ರಾಂತಿಯ ಮೂಲಕವಲ್ಲ. ಎಲ್ಲ ಉತ್ತಮ ಕೆಲಸಗಳೂ ಸಾಕಾರಗೊಳ್ಳಲು ಸಮಯದ ಅವಶ್ಯಕತೆ ಇದ್ದೇ ಇರುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಪರಮ ಪೂಜನೀಯ ಗುರೂಜಿಯವರ ಜನ್ಮ ಶತಾಬ್ದಿಯ ನಂತರದಲ್ಲಿ ವೇಗಗೊಂಡ ಅಸ್ಪೃಶ್ಯತೆಯ ವಿರುದ್ಧದ ಕಾರ್ಯಾಚರಣೆಗಳು ಸಮರಸ ಹಿಂದೂ ಸಮಾಜದ ನಿರ್ಮಾಣದ ಧ್ಯೇಯದೊಂದಿಗೆ ನಡೆಯುತ್ತಿರುತ್ತದೆ. ಈ ಎಲ್ಲ ಕೆಲಸಗಳಲ್ಲಿ ಎಲ್ಲ ವರ್ಗದವರೂ ಮನಃ ಪೂರ್ವಕವಾಗಿ ಭಾಗಿಯಾಗಿ ಭವ್ಯ ಸಮರಸ ಹಿಂದೂ ಸಮಾಜದ ನಿರ್ಮಾಣದ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications