35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg108970flowerದೀರ್ಘ ಕಾಲ ಬಾಳುವ ಹೂ ಬಿಗ್ನೋನಿಯಾ/literature/articles/2008/1229-long-lasting-bignonia-flower.htmlಹೇಮಂತ ಮುಗಿದು ಶಿಶಿರ ಋತು ಕಾಲಿಡುತ್ತಿದ್ದಂತೆ ಮಲೆನಾಡಿನ ಕಾಡಿನಲ್ಲಿ ಹಳೆತನ ಅಳಿದು ಹೊಸತನ ಪಡೆಯುವ ಸಂಭ್ರಮ. ಸಾವಿರಾರು ಪ್ರಭೇದಗಳ ಹೂಗಳು ನನಗಿಂತ ಚೆಲುವೆಯರು ಯಾರಲ್ಲಿ? ಎಂದು ಬೀಗಲು ಪ್ರಾರಂಭಿಸುತ್ತವೆ. ಅವುಗಳ ಆಯುಷ್ಯ ಮಾತ್ರ ಒಂದೇ ದಿನ. ಆದರೆ, ಬಿಗ್ನೋನೇಸಿಯೇ (Bignoniaceae) ಕುಟುಂಬಕ್ಕೆ ಸೇರಿದ ಬಿಗ್ನೋನಿಯಾ ಹೂ ಮಾತ್ರ ಭರ್ತಿ ಎರಡು ತಿಂಗಳುಗಳ ಕಾಲ ದೀರ್ಘ ಬಾಳುತ್ತದೆ.* ರಾಘವೇಂದ್ರ 33747http://kannada.oneindia.com/img/2008/12/29-bignonia2.jpg108970flowerಹಳ್ಳಿ ಸಮಾಧಿ ಮೇಲೆ ತಲೆಯೆತ್ತಿರುವ ನಗರ/column/bhat/2009/0702-vanishing-villages-in-karnataka-india-part2.htmlಹಳ್ಳಿ ಸಮಾಧಿ ಮೇಲೆ...(ಮುಂದುವರಿದಿದೆ)ಕಾರಣವೇನು ಗೊತ್ತಾ? ಬಹುತೇಕ ಹಳ್ಳಿಗಳಲ್ಲಿ ಯುವಕರು, ಮಧ್ಯವಯಸ್ಸಿನವರೇ ಇಲ್ಲ. ಬರೀ ಮುದುಕರೇ ಎಲ್ಲ. ಅಂದರೆ ಎಲ್ಲ ಹಳ್ಳಿಗಳೂ ಒಂದು ರೀತಿಯಲ್ಲಿ ತೆರೆದ ವೃದ್ಧಾಶ್ರಮಗಳಿದ್ದಂತೆ. ಇರುವ ಎರಡೋ, ಮೂರೋ, ನಾಲ್ಕೋ ಮಕ್ಕಳು, ಅವರ ಹೆಂಡಂದಿರು, ಮೊಮ್ಮಕ್ಕಳೆಲ್ಲ ಎಂದೋ ದೊಡ್ಡ ನಗರ ಸೇರಿದ್ದಾರೆ. ಅವರೆಲ್ಲ ಒಂದೋ ಬೆಂಗಳೂರಿನಲ್ಲಿದ್ದಾರೆ, ಇಲ್ಲದಿದ್ದರೆ ಅಮೆರಿಕದಲ್ಲಿದ್ದಾರೆ. ವರ್ಷಕ್ಕೆ ಒಂದು ಸಲ ಮಾತ್ರ ಬರುತ್ತಾರೆ, 37741http://kannada.oneindia.com/img/2009/07/02-village5.jpg108970flowerಹಳ್ಳಿ ಸಮಾಧಿ ಮೇಲೆ ತಲೆಯೆತ್ತಿರುವ ನಗರ/column/bhat/2009/0702-vanishing-villages-in-karnataka-india.htmlರೈತ ಹೆದರಿಬಿಟ್ಟಿದ್ದಾನೆ. ಮರ್ಯಾದೆಯಿಂದ ಮೂರು ಹೊತ್ತು ಮೂರು ತುತ್ತು ತಿಂದುಂಡು ಹಾಯಾಗಿ ಇರಲಾಗದಂಥ ಸ್ಥಿತಿ ಬಂದು ಬಿಡಬಹುದಾ ಎಂಬ ಆತಂಕದಲ್ಲಿದ್ದಾನೆ. ಅವನ ಕಣ್ಣೀರನ್ನು ಒರೆಸಲು ಯಾರೂ ಮುಂದೆ ಬರುತ್ತಿಲ್ಲ. ಸಮಾಧಾನದ ಮೊಸಳೆ ಕಣ್ಣೀರನ್ನೂ ಯಾರೂ ಸುರಿಸುತ್ತಿಲ್ಲ. ಕೃಷಿಕರ ಜೀವನದಲ್ಲಿ ಭರವಸೆಯ ಹೊಸ ಪೈರು ಚಿಗುರೊಡೆಯಬಹುದೆಂಬ ಚಿಟಿಕೆ ವಿಶ್ವಾಸವೂ ಕಾಣಿಸುತ್ತಿಲ್ಲ.* ವಿಶ್ವೇಶ್ವರ ಭಟ್ರಿವರ್ಸ್ ಗೇರ್‌ನಲ್ಲಿ ಹೋದರೆ ಇಪ್ಪತ್ತು ವರ್ಷ 37742http://kannada.oneindia.com/img/2009/07/02-flyover-at-night1.jpg108970flowerಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು../literature/articles/2009/0704-brahmakamala-ub-pavanaja.htmlಬೆಂಗಳೂರಿನಲ್ಲಿ ಸ್ವಂತ ಮನೆಯೇ ಇಲ್ಲದಿದ್ದರೆ ಹೇಗೆ ಸಾಧ್ಯ? ಮನೆ ಕೊಳ್ಳಬೇಕು ಎಂದು ಆಗಾಗ ಚಿಂತೆ ಜೋರಾದಾಗ ಮನೆ ಹುಡುಕುವ ಪ್ರಯತ್ನ ಮಾಡಿ ಮತ್ತೆ ಅದನ್ನು ಮುಂದೆ ಹಾಕುವ ಕ್ರಿಯೆ ಆಗಾಗ ಮಾಡುತ್ತಿದ್ದೇನೆ. ಇದು ಸುಮಾರು ಹತ್ತು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಇನ್ನೂ ಸ್ವಂತ ಮನೆ ಆಗಿಲ್ಲ, ಇರಲಿ.ಇದೇ ರೀತಿ ಸುಮಾರು ಒಂದು ವರ್ಷದ ಹಿಂದೆ ಒಮ್ಮೆ ಮನೆ 37775http://kannada.oneindia.com/img/2009/07/04-brahmakamala5.jpg108970flowerಕಡಲೆಬೇಳೆ ಹಾಗು ಹೂಕೋಸು ಪಲ್ಯ/recipe/palya/2009/1023-north-karnataka-cauliflower-greengram-palya.htmlವೈವಿಧ್ಯಮಯ ಪಲ್ಯಗಳನ್ನು ತಯಾರಿಸುವುದರ ಜೊತೆಗೆ ಈ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರಿಗೆ ತಿನ್ನಿಸುವುದನ್ನು ರೂಢಿ ಮಾಡಿಸುವುದು ದೊಡ್ಡವರ ಕರ್ತವ್ಯ. ಯಾಕೆಂದರೆ, ಗೋಬಿ ಮಂಚೂರಿಯನ್ನು ಚಪ್ಪರಿಸಿ ತಿನ್ನುವ ಮಕ್ಕಳು (ದೊಡ್ಡವರು ಕೂಡ) ಹೂಕೋಸಿನ ಪಲ್ಯ ಅಂದ ಕೂಡಲೆ ಮುಖ ಸಿಂಡರಿಸುತ್ತಾರೆ.ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ತರಕಾರಿಗಳು ಬಹು ಅವಶ್ಯಕ. ಅದರಲ್ಲೂ, ಹೂಕೋಸು ತಿನ್ನುವುದರಿಂದ ಹೃದಯ ಸುಸ್ಥಿತಿಯಲ್ಲಿರುತ್ತದೆ ಮತ್ತು 39850http://kannada.oneindia.com/img/2009/10/24-cauliflower-bengalgram1.jpg37035ಬೆಂಗಳೂರುಕಬ್ಬನ್ ಪಾರ್ಕಿನೊಳಗೆ ಪುರಂದರ ವೈಭವ/news/2008/12/24/cubbon-part-resonates-to-best-of-purandara.htmlಬೆಂಗಳೂರು, ಡಿ. 24 : ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಪ್ರತಿ ಭಾನುವಾರ ಸಂಗೀತ ಕಾರ್ಯಕ್ರಮ ಜರುಗುವುದು ಅನೇಕರಿಗೆ ತಿಳಿದಿದೆ. ಅಂದಿನ, ಇಂದಿನ ಯಾರಾದರೊಬ್ಬರು ಕನ್ನಡ ಗೀತೆರಚನೆಕಾರರ, ಕವಿಗಳ, ಸಾಹಿತಿಗಳ ಕೃತಿಗಳನ್ನು ಆಧರಿಸಿ ಇಡೀ ಸಂಜೆಯನ್ನು ಸಂಗೀತದ ಗುಂಗಿನಲ್ಲಿ ನೆನೆ ಹಾಕುವ ಕಾರ್ಯಕ್ರಮ ಅದು.ಈ ಕಾರ್ಯಕ್ರಮವನ್ನು ತಪ್ಪಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಹೆಸರು ಪ್ರಕೃತಿ. ಪ್ರಕೃತಿಯ ಹರಿಕಾರ ಎಂ.ಎಸ್. 33679http://kannada.oneindia.com/img/2008/12/24-purandara1.jpg37035ಬೆಂಗಳೂರುಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg37035ಬೆಂಗಳೂರುನೂತನ ವರ್ಷ ಆಚರಣೆ ಸರಳವಾಗಿರಲಿ/news/2008/12/31/celebrate-new-year-eve-safely.htmlಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು 33809http://kannada.oneindia.com/img/2008/12/31-brigade-road1.jpg37035ಬೆಂಗಳೂರುಬಿಗ್ 92.7 ಆರ್ ಜೆ ಹಂಟ್ ವಿಜೇತರಾಗಿ ರಕ್ಷಿತ್ /movies/headlines/2009/01/02-big-92-7-fm-radio-jockey-hunt-rakshith.htmlಬಿಗ್ 92.7ನ ಆರ್ ಜೆ ಅನ್ವೇಷಣಾ ಸ್ಪರ್ಧೆಯ ಫೈನಲ್ ವಿಜೇತರಾಗಿ ಬೆಂಗಳೂರಿನ ರಕ್ಷಿತ್ ಆಯ್ಕೆಯಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಪದವೀಧರರಾದ ರಕ್ಷಿತ್ ಬಿಗ್ 92.7 ಎಫ್ ಎಂನ ಬೆಂಗಳೂರು ಕೇಂದ್ರದಲ್ಲಿ ತರಬೇತಿ ಪಡೆದು ನಂತರ ಅವರು ಪೂರ್ಣಕಾಲಿಕ ಆರ್ ಜೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಲವು ಸುತ್ತಿನ ಆರ್ ಜೆ ಅನ್ವೇಷಣಾ ಸ್ಪರ್ಧೆ ನವೆಂಬರ್ 10ರಂದು ಆರಂಭವಾಗಿತ್ತು. ಒಟ್ಟು 200ಕ್ಕೂ ಹೆಚ್ಚು 33823http://kannada.oneindia.com/img/2009/01/02-big-fm-radio1.jpg37035ಬೆಂಗಳೂರುನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpgnews"> ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು.. | The Flower | Brahmakamala | UB Pavanaja | kitchen Garden - ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು.. - Kannada Oneindia

ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು..

Dr. UB Pavanaja
ಬೆಂಗಳೂರಿನಲ್ಲಿ ಸ್ವಂತ ಮನೆಯೇ ಇಲ್ಲದಿದ್ದರೆ ಹೇಗೆ ಸಾಧ್ಯ? ಮನೆ ಕೊಳ್ಳಬೇಕು ಎಂದು ಆಗಾಗ ಚಿಂತೆ ಜೋರಾದಾಗ ಮನೆ ಹುಡುಕುವ ಪ್ರಯತ್ನ ಮಾಡಿ ಮತ್ತೆ ಅದನ್ನು ಮುಂದೆ ಹಾಕುವ ಕ್ರಿಯೆ ಆಗಾಗ ಮಾಡುತ್ತಿದ್ದೇನೆ. ಇದು ಸುಮಾರು ಹತ್ತು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಇನ್ನೂ ಸ್ವಂತ ಮನೆ ಆಗಿಲ್ಲ, ಇರಲಿ.

ಇದೇ ರೀತಿ ಸುಮಾರು ಒಂದು ವರ್ಷದ ಹಿಂದೆ ಒಮ್ಮೆ ಮನೆ ಹುಡುಕುತ್ತಾ ಇಸ್ರೋ ಬಡಾವಣೆಯ ಪಕ್ಕ ಒಂದು ಅಪಾರ್ಟ್ಮೆಂಟ್ ಮನಸ್ಸಿಗೆ ಖುಷಿಯಾಗಿ ಅದರ ಯಜಮಾನರೊಡನೆ ಮಾತನಾಡಲು ಅವರ ಮನೆಗೆ ಹೋದೆ. ಮಾತುಕತೆಯಾಗಿ ಹೊರಗೆ ಬರುವಾಗ ಅವರ ಮನೆಯಂಗಳದಲ್ಲಿ ದೊಡ್ಡದಾಗಿ ಬೆಳೆದಿದ್ದ ಬ್ರಹ್ಮಕಮಲದ ಗಿಡ ಕಣ್ಣಿಗೆ ಬಿತ್ತು.

Brahmakamala
ಮುಂದಿನ ಹಂತದ ಮಾತುಕತೆಗೆ ಹೋದಾಗ ಧೈರ್ಯಮಾಡಿ ಅವರಲ್ಲಿ ಕೇಳಿಕೊಂಡು ಆ ಗಿಡದ ಒಂದು ಚಿಕ್ಕ ಎಲೆ/ಗೆಲ್ಲು ಪಡಕೊಂಡು ಬಂದೆ. ಅದನ್ನು ಬೆಳೆಸಲು ನಾನಿರುವ ಬಾಡಿಗೆ ಮನೆಯ ಮುಂದೆಯಾಗಲೀ ಮುಂದಾಗಲೀ ಖಾಲಿ ಜಾಗ, ಮಣ್ಣಿರುವಂತದ್ದು ಇಲ್ಲವೇ ಇಲ್ಲ. ಅದು ಸುಮಾರು ಹತ್ತು ಹನ್ನೆರಡು ಅಡಿ ಬೆಳೆಯುವ ಕಳ್ಳಿ ಜಾತಿಯ ಗಿಡ. ಬೆಳೆಸಲು ವಿಶೇಷ ಆರೈಕೆಯೇನೂ ಬೇಕಾಗಿಲ್ಲ. ಕೊನೆಗೆ ಒಂದು ದೊಡ್ಡ ಗಾತ್ರದ ಪಾತಿ ಕೊಂಡುಕೊಂಡು ಅದಕ್ಕೆ ಹಾಕಲು ಮಣ್ಣನ್ನೂ ಕೊಂಡುಕೊಂಡು ಅದರಲ್ಲಿ ಗಿಡ ನೆಟ್ಟದ್ದಾಯಿತು.

ಗಿಡ ಚೆನ್ನಾಗಿಯೇನೋ ಬೆಳೆಯಿತು. ಕಳೆದ ವರ್ಷ ಒಮ್ಮೆ ಅದರಲ್ಲಿ ಮೊಗ್ಗು ಬಿಟ್ಟಿತ್ತು ಆದರೆ ಅದು ಪೂರ್ತಿ ಅರಳುವ ಮೊದಲೇ ತುಂಡಾಗಿ ಬಿತ್ತು. ಸುಮಾರು ವಾರದ ಹಿಂದೆ ಎರಡು ಮೊಗ್ಗು ಬಿಟ್ಟಿತು. ಪ್ರತಿ ದಿನ ಅದು ಎಷ್ಟು ದೊಡ್ಡದಾಗಿ ಬೆಳೆದಿದೆ, ಯಾವಾಗ ಅರಳಬಹುದು ಎಂದು ಕಾತರದಿಂದ ನೋಡುವುದು ಮನೆಮಂದಿಯೆಲ್ಲರ ಕುತೂಹಲವಾಯಿತು. ಮೊಗ್ಗಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಫೋಟೊ ತೆಗೆದೂ ಆಯಿತು. ಡಿಜಿಟಲ್ ಕ್ಯಾಮರಾ ಇರುವುದರ ಲಾಭ ಇದೇ ನೋಡಿ. ಫಿಲ್ಮ್ ಹಾಳಾಗುವ ಭಯವಿಲ್ಲದೆ ಎಷ್ಟು ಬೇಕಾದರೂ ಕ್ಲಿಕ್ ಮಾಡಬಹುದು.

ಹಾಗೆಯೇ ಮಾಡಿದೆವು ಕೂಡ. ಮೊನ್ನೆ ರಾತ್ರಿ (02/07/09) ಸುಮಾರು 9 ಗಂಟೆ ಹೊತ್ತಿಗೆ ಹೂವುಗಳೆರಡೂ ದೊಡ್ಡದಾಗಿ ಅರಳಿದ್ದವು. ಮಗನಿಗೆ ಇಂದು ಇಂಜಿನಿಯರಿಂಗ್ 4ನೆಯ ಸೆಮೆಸ್ಟರಿನ ಪರೀಕ್ಷೆ ಇದ್ದರೂ ಓಡಿ ಹೋಗಿ ನನಗೆ ಆಸ್ಪದವನ್ನೇ ಕೊಡದೆ ಫೋಟೋ ಕ್ಲಿಕ್ ಮಾಡಿದ. ಮತ್ತೆ ನಾನೂ ಕೆಲವು ಫೋಟೋ ಕ್ಲಿಕ್ ಮಾಡಿದೆ. ಎರಡು ಹೂವುಗಳಲ್ಲಿ ಒಂದನ್ನು ಗಿಡದಲ್ಲೇ ಬಿಟ್ಟು ಇನ್ನೊಂದನ್ನು ಕೊಯಿದು ದೇವರ ಮುಡಿಗೆ ಏರಿಸಿ ಆಯಿತು. ಇಂದು ಆ ಫೋಟೋಗಳನ್ನು ಪಿಕಾಸಾದಲ್ಲಿ ಹಾಕಿಯೂ ಆಯಿತು.

ಓದುಗರ ಅವಗಾಹನೆಗೆ ಕೆಲವು ಫೋಟೋಗಳನ್ನು ಲಗತ್ತಿಸಿದ್ದೇನೆ. ಹೆಚ್ಚಿನ ಫೋಟೋಗಳನ್ನು ಜಾಲತಾಣದಲ್ಲಿ ನೋಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+