ಕಚೇರಿಗಳಲ್ಲಿ ಮರ ಕಡಿಯುವುದನ್ನು ನಿಲ್ಲಿಸಿ
ಇವತ್ತು ಸಾಯಂಕಾಲದ ಹೊತ್ತಿಗೆ ನಿಮ್ಮ ಕಚೇರಿಯ ಪ್ರಿಂಟರ್ ಹತ್ತಿರ ಹೋಗಿ ಅಲ್ಲಿ ಒಟ್ಟು ಎಷ್ಟು ಹಾಳೆಗಳು ವ್ಯರ್ಥವಾದವು ಎನ್ನುವುದನ್ನು ಗಮನಿಸಿ. ಸಾಧ್ಯವಾದರೆ, ಈ ಕೆಳಗಿನ ಬರಹದ ಒಂದೇ ಒಂದು ಪ್ರಿಂಟ್ ಔಟ್ ತೆಗೆದು ಪ್ರಿಂಟ್ ರೂಮ್ ಗೋಡೆಯ ಮೇಲೆ ಅಂಟಿಸಿಬಿಡಿ.
*ವಿಕಾಸ್ ಹೆಗಡೆ, ಬೆಂಗಳೂರು.
ಈ ಪ್ರಕೃತಿಯನ್ನು, ಪರಿಸರವನ್ನು ನಮಗಾಗಿ ಮತ್ತು ಮುಂದಿನ ಪೀಳಿಗೆಗೆ ಚೆನ್ನಾಗಿಟ್ಟುಕೊಳ್ಳಬೇಕೆಂದರೆ ಮರಗಿಡಗಳನ್ನು ಉಳಿಸಿಕೊಳ್ಳಬೇಕು, ನಾಶವಾಗುತ್ತಿರುವ ಕಾಡುಗಳನ್ನು ಕಾಪಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಪ್ರಾಣವಾಯುವಿನಿಂದ ಹಿಡಿದು ಮಳೆಯವರೆಗೆ ಮನುಷ್ಯನನ್ನೂ ಸೇರಿಸಿ ಇಡೀ ಪ್ರಾಣಿಕುಲ ಬದುಕಿರುವುದು ಅದೇ ಮರಗಿಡಗಳ ಸಹಾಯದಿಂದ. ಮರಗಿಡಗಳನ್ನು ಕಡಿಯುವುದು ಎಂದರೆ ನಮಗೆ ಬರಿಯ ಕಳ್ಳಸಾಗಣೆ, ರಸ್ತೆ ಅಗಲೀಕರಣ, ಜಲಾಶಯ, ವಿದ್ಯುತ್ ಸ್ಥಾವರ, ಗಣಿಗಾರಿಕೆ ಇತ್ಯಾದಿಗಳ ಕಡೆಗೇ ಗಮನ ಹರಿಯುತ್ತದೆ. ಆದರೆ ಅವುಗಳ end users ನಾವೇ ಆಗಿದ್ದು ನಮ್ಮ ಪೂರೈಕೆಗಾಗಿಯೇ ಮೇಲೆ ಹೇಳಿರುವ ಎಲ್ಲವೂ ನಡೆಯುತ್ತಿವೆ. ಪ್ರತಿನಿತ್ಯ ನಾವು ಬಳಸುವ ಎಷ್ಟೋ ವಸ್ತುಗಳು, ಸೇವೆಗಳು ಕೂಡ ಈ ಮರಗಿಡಗಳಿಂದ ದೊರೆತದ್ದು ಎಂಬುದನ್ನು ಮರೆತುಬಿಡುತ್ತೇವೆ. ಮನೆಯ ಕಿಟಕಿ ಬಾಗಿಲುಗಳಿಂದ ಹಿಡಿದು ಕಛೇರಿಯ ಮೇಜು, ಕಾಗದ ಕೂಡ ಮರದ ಉತ್ಪನ್ನಗಳೇ ಆಗಿವೆಯಲ್ಲವೆ.
ಇದಿಷ್ಟು ಪೀಠಿಕೆಯಾಯಿತು. ವಿಷಯ ಏನೆಂದರೆ, ನಮ್ಮ ಆಫೀಸಿನಲ್ಲಿ ಉದ್ಯೋಗಿಗಳ ಬಳಕೆಗೆಂದು ಮೊದಲ ಮಹಡಿಗೆಲ್ಲಾ ಸೇರಿ ಒಂದು ಪ್ರಿಂಟರ್ ಇದೆ. ಆಫೀಸಿನ ಕೆಲಸಗಳಿಗೆ ಪ್ರಿಂಟಿಂಗ್ ಅವಶ್ಯಕತೆ ಇರುವುದರಿಂದ ಎಲ್ಲಾ ಕಂಪನಿಗಳಲ್ಲೂ ಇರುತ್ತದೆ. ನಾನು ಪ್ರತಿ ದಿನದ ಕೊನೆಯಲ್ಲಿ ಗಮನಿಸುತ್ತೇನೆ. ಏನಿಲ್ಲವೆಂದರೂ ದಿನವೂ 50-60 ಹಾಳೆಗಳು ಪ್ರಿಂಟರ್ ನಲ್ಲಿ ವ್ಯರ್ಥವಾಗಿ ಬಿದ್ದಿರುತ್ತವೆ. ಕೆಲವೊಮ್ಮೆ ಇನ್ನೂ ಜಾಸ್ತಿ! ಇದನ್ನು ಕಂಡಾಗ ವ್ಯಥೆಯಾಗುತ್ತದೆ. ಕೆಲವೊಂದು ಪ್ರಿಂಟ್ ಸರಿಯಾಗಿ ಬಂದಿರುವುದಿಲ್ಲ, ಇನ್ನೂ ಕೆಲವನ್ನು ಯಾರೂ ತೆಗೆದುಕೊಂಡು ಹೋಗುವುದೇ ಇಲ್ಲ. ಇನ್ನೂ ಕೆಲವರು ಅನವಶ್ಯಕವಾಗಿ ಪ್ರಿಂಟ್ ಗಳನ್ನು ಕೊಟ್ಟೂ ಕೊಟ್ಟೂ ವ್ಯರ್ಥ ಮಾಡುತ್ತಿರುತ್ತಾರೆ. ಸಿಕ್ಕಿದ್ದನ್ನೆಲ್ಲಾ ಮುದ್ರಿಸಿಕೊಂಡು ಇಟ್ಟುಕೊಳ್ಳುತ್ತಿರುತ್ತಾರೆ.
ಇದು ಕೇವಲ ನನ್ನ ಕಛೇರಿಯ ಕತೆಯೊಂದೇ ಅಲ್ಲ. ಬಹುತೇಕ ಎಲ್ಲಾ ಕಛೇರಿಗಳಲ್ಲೂ ಕೂಡ ಇದೇ ರೀತಿಯ ಪರಿಸ್ಥಿತಿ ಇದೆ. ಹೇಳಲು ಹೋದರೆ ಇದು ಆಫೀಸಿನ ಪ್ರಿಂಟರ್, ಆಫೀಸಿನ ದುಡ್ಡು, ನಮ್ಮದೇನು ಹೋಗುವುದಿದೆ ಎಂದೋ ಅಥವಾ ನಿನ್ನ ಕೆಲಸವೆಷ್ಟು ನೋಡಿಕೋ, ನೀನೂ ಬೇಕಾದಷ್ಟು ಪ್ರಿಂಟ್ ತೆಗೆದುಕೋ ಎಂಬಂತೆ ಕೇವಲ ದುಡ್ಡಿನ ದೃಷ್ಟಿಯಿಂದ ಪರಿಗಣಿಸುತ್ತಾರೆಯೇ ವಿನಃ ಈ ರೀತಿ ಮಾಡುವುದರಿಂದ ನಮ್ಮ ಪ್ರಕೃತಿಯ ವಿನಾಶಕ್ಕೆ ನಾವೇ ಪರೋಕ್ಷವಾಗಿ ಕಾರಣರಾಗುತ್ತಿದ್ದೇವೆ ಎಂದು ತಿಳಿದುಕೊಳ್ಳುವುದಿಲ್ಲ. ಕಾಗದವನ್ನು ತಯಾರಿಸಲು ಬೇಕಾಗುವ ಮೂಲವಸ್ತು ಮರ. ಕಾಗದ ತಯಾರಿಕೆಗಾಗಿಯೇ ಎಷ್ಟೆಲ್ಲಾ ಮರಗಳು ಕಡಿಯಲ್ಪಡುತ್ತವೆ ಮತ್ತು ಎಷ್ಟು ಶಕ್ತಿ, ಸಂಪನ್ಮೂಲಗಳು ವಿನಿಯೋಗಿಸಲ್ಪಡುತ್ತದೆ. ಕೇವಲ ನನ್ನ ಆಫೀಸಿನ ಒಂದು ಪ್ರಿಂಟರಿನಲ್ಲಿಯೇ ದಿನಕ್ಕೆ ಇಷ್ಟು ಕಾಗದ ವ್ಯರ್ಥವಾಗುತ್ತಿದ್ದರೆ ಇನ್ನು ಎಲ್ಲಾ ಆಫೀಸುಗಳಲ್ಲಿ ಸೇರಿ ವ್ಯರ್ಥವಾಗುವ ಪ್ರಮಾಣ ಎಷ್ಟಿರಬಹುದು! ಇಂತಿದ್ದ ಮೇಲೆ ಕಾಗದದ ಬಳಕೆಯನ್ನು ಸರಿಯಾಗಿ ಮಾಡಿ ವ್ಯರ್ಥವಾಗುವುದನ್ನು ತಪ್ಪಿಸಿ ಮರಗಿಡಗಳನ್ನು, ಪರಿಸರವನ್ನು ಉಳಿಸುವುವ ಪ್ರೀತಿ ನೇರವಾಗಿ ನಮ್ಮ ಮೇಲೆ ಇದೆ.
ಕಂಪ್ಯೂಟರ್ ಬಂದಮೇಲೆ ಕಾಗದ ರಹಿತ ಕಛೇರಿಗಳು ಇರುತ್ತವೆ ಎಂಬ ಕಲ್ಪನೆ ತಪ್ಪಾಗಿ ಕಾಗದದ ಬಳಕೆ, ದುರ್ಬಳಕೆ, ವ್ಯರ್ಥ ಮಾಡುವುದು ಜಾಸ್ತಿಯಾಗಿದೆ. ಆದ್ದರಿಂದ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡು ಸ್ವಲ್ಪ ಜವಾಬ್ದಾರಿಯಿಂದ ನೆಡೆದುಕೊಳ್ಳಬೇಕೆಂದು ಎಲ್ಲಾ ಆಫೀಸು ಜೀವಗಳಲ್ಲಿ ವಿನಂತಿ.
*ಕಛೇರಿಯ ಕೆಲಸಗಳಿಗೆ ನಿಜವಾದ ಅಗತ್ಯವಿದ್ದಾಗ, ಅಗತ್ಯವಿರುವಷ್ಟೆ ಪ್ರಿಂಟ್ ಮಾಡಿ. ಹೇಗೆ ಕಾಣುತ್ತದೆ ಎಂದು ನೋಡಲು ಒಂದು ಪ್ರಿಂಟ್, ತಪ್ಪು ತಿದ್ದಿದ ಮೇಲೆ ಒಂದು ಪ್ರಿಂಟ್, ಫೈನಲ್ ಕಾಪಿ ಎಂದು ಮತ್ತೊಂದು ಪ್ರಿಂಟ್ ಕೊಡುವ ಬದಲು ಸಾಫ್ಟ್ ಕಾಪಿಯಲ್ಲಿಯೇ ಎಲ್ಲವನ್ನೂ ಫೈನಲೈಸ್ ಮಾಡಿಕೊಂಡು ನಂತರ ಮುದ್ರಿಸಿ.
*ಯಾವ ಯಾವ ಪುಟಗಳು ಬೇಕಾಗಿವೆ ಎಂದು ಮೊದಲೇ ನೋಡಿಕೊಂಡು ಅಷ್ಟನ್ನು ಮಾತ್ರ ಮುದ್ರಿಸಿಕೊಳ್ಳಿ. ಇಡೀ ಡಾಕ್ಯುಮೆಂಟನ್ನು ಮುದ್ರಿಸಿ ನಂತರ ಬೇಕಾದ ಪುಟಗಳನ್ನು ಮಾತ್ರ ಆರಿಸಿ ಇಟ್ಟುಕೊಳ್ಳುವ ಅಭ್ಯಾಸ ಬೇಡ.
*ಪ್ರಿಂಟ್ ಆಪ್ಷನ್ ಗಳನ್ನ ಸರಿಯಾಗಿ ತಿಳಿದುಕೊಳ್ಳಿ. ಮುದ್ರಿಸುವ ಮೊದಲು ಪ್ರಿಂಟರ್ ಸೆಟ್ಟಿಂಗ್ ಗಳನ್ನು ಸರಿಯಾಗಿ ಕೊಟ್ಟು, ಪ್ರಿಂಟ್ ಮುನ್ನೋಟವನ್ನು ನೋಡಿ ಖಾತ್ರಿಯಾದ ನಂತರವೇ ಪ್ರಿಂಟ್ ಕೊಡಿ. ಇದರಿಂದ ತಪ್ಪು ಪ್ರಿಂಟ್ ಗಳು ಬಂದು ವ್ಯರ್ಥವಾಗುವುದಿಲ್ಲ.
*ಸುಮ್ಮನೇ ರೆಫರೆನ್ಸ್ ಡಾಕ್ಯುಮೆಂಟ್ ಗಳನ್ನು ಹಾಗೂ ಡ್ರಾಫ್ಟ್ ಕಾಪಿಗಳನ್ನು ಪ್ರಿಂಟ್ ತೆಗೆದುಕೊಳ್ಳುವಾಗ ಹಾಳೆಯ ಎರಡೂ ಬದಿಯಲ್ಲಿ ಮುದ್ರಿಸಿ. ಒಂದೇ ಬದಿಯಲ್ಲಿದ್ದರೆ ನೋಡುವುದಕ್ಕೆ ಚೆನ್ನಾಗಿರುತ್ತದೆ, ಓದುವುದು ಅನುಕೂಲ ಇತ್ಯಾದಿ ಶೋಕಿಗಳು ಬೇಡ. ಒಂದು ಬದಿ ಬಳಸಿದ ಹಾಳೆಯಲ್ಲಿ ಪ್ರಿಂಟ್ ತೆಗೆದುಕೊಂಡರೆ ಇನ್ನೂ ಒಳ್ಳೆಯದು.
*ಎಷ್ಟು ಕಾಪಿಗಳು ಬೇಕೋ ಅಷ್ಟನ್ನು ಮಾತ್ರ ಮುದ್ರಿಸಿ. ಸುಮ್ಮನೇ ಯಾವುದಕ್ಕೂ ಇನ್ನೊಂದೆರಡು ಜಾಸ್ತಿ ಕಾಪಿಗಳು ಇರಲಿ ಎಂಬ ಧೋರಣೆ ಬೇಡ.
*ಹೇಗೂ ಉಚಿತ ಎಂದು ಸಿಕ್ಕಿದ್ದೆಲ್ಲಾ ಜೋಕುಗಳು, ಚಿತ್ರಗಳು, ಮೇಲ್ ಗಳು, ಡಾಕ್ಯುಮೆಂಟ್ ಗಳು, ಇ-ಬುಕ್ಸ್ ಎಲ್ಲವನ್ನೂ ಪ್ರಿಂಟ್ ತೆಗೆದಿಟ್ಟುಕೊಳ್ಳುವ ಮನಸ್ಥಿತಿ ಬಿಡಿ.
*ಕೇವಲ ಕಛೇರಿ ಒಳಗಿನ ಬಳಕೆಗೆ ಬೇಕಿದ್ದಾಗ, ನಡೆಯುತ್ತದೆ ಎಂದಿದ್ದಾಗ ಒಂದು ಬದಿ ಪ್ರಿಂಟ್ ಆಗಿರುವ ಹಾಳೆಗಳನ್ನು ಬಳಸಿ ಇನ್ನೊಂದು ಖಾಲಿ ಬದಿಯಲ್ಲಿ ಮುದ್ರಿಸಿಕೊಳ್ಳಿ. ಉದಾಹರಣೆಗೆ, ಡ್ರಾಯಿಂಗ್ ಗಳ ಕ್ವಾಲಿಟ್ ಚೆಕಿಂಗ್, ಡಾಕ್ಯುಮೆಂಟ್ ಗಳ/ಪತ್ರಗಳ ತಿದ್ದುವಿಕೆ ಮುಂತಾದವುಗಳಿಗೆ.
*ಅಗತ್ಯಕ್ಕಿಂತ ದೊಡ್ಡ ಫಾಂಟ್ ಗಳಿದ್ದಾಗ ಅದರ ಗಾತ್ರವನ್ನು ಕಡಿಮೆ ಮಾಡಿ ಮುದ್ರಿಸಿದರೆ ಕಡಿಮೆ ಹಾಳೆಗಳು ಸಾಕಾಗುತ್ತವೆ.
*ಪ್ರಿಂಟ್ ಡಾಕ್ಯುಮೆಂಟೇಶನ್ ಬದಲು ಎಲೆಕ್ಟ್ರಾನಿಕ್ ಡಾಕ್ಯುಮೆಂಟೇಷನ್ ಮಾಡಿ. ಅಂದರೆ ಆಫೀಸಿನ ಕೆಲಸದ ಕಮ್ಯುನಿಕೇಶನ್ ಮೇಲ್ ಗಳು, ಡಾಕ್ಯುಮೆಂಟ್ಸ್ ಮುಂತಾದವುಗಳ ಸಾಫ್ಟ್ ಕಾಪಿಯನ್ನು ಉಳಿಸಿಟ್ಟುಕೊಂಡು ಬಳಸಿಕೊಳ್ಳಿ.
*ಫೋಟೋಕಾಪಿ ಮತ್ತು ಸ್ಕಾನರ್ ಗಳನ್ನು ಬಳಸುವಾಗಲೂ ಅದರ ಆಪ್ಷನ್ ಮತ್ತು ಸೆಟ್ಟಿಂಗ್ ಗಳನ್ನು ಸರಿಯಾಗಿ ತಿಳಿದುಕೊಂಡು, ಅಗತ್ಯವಿರುವಷ್ಟೇ ಕಾಪಿಗಳನ್ನು ತೆಗೆದುಕೊಳ್ಳಿ.
ಇದಿಷ್ಟೂ ಕೇವಲ ಆಫೀಸುಗಳ ಪ್ರಿಂಟ್ ಕಾಗದದ ಬಗ್ಗೆ ಮಾತ್ರ. ಇದರ ಜೊತೆಗೆ ಆಫೀಸಿನಲ್ಲೇ ಬೇರೆ ಬೇರೆ ರೀತಿಯಲ್ಲಾಗುವ ಮತ್ತು ಶಾಲೆ ಇನ್ನಿತರ ಕಡೆಗಳಲ್ಲಾಗುವ ಕಾಗದದ ದುಂದುಬಳಕೆ ಬಗ್ಗೆ ಹೇಳಲು ಹೋದರೆ ಅದೇ ದೊಡ್ಡ ಕತೆಯಾಗುತ್ತದೆ.
ನೆನಪಿರಲಿ, ಒಳ್ಳೆ ಗುಣಮಟ್ಟದ ಒಂದು ಟನ್ ಪ್ರಿಂಟ್ ಕಾಗದ ಉತ್ಪಾದನೆಗೆ ಸುಮಾರು 17 ರಿಂದ 24 ಮರಗಳು ಬೇಕು.
NOTE: Please don't print this article unless its absolutely necessary. Spread environmental awareness.
-
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
ಇರಾನ್ ಹೇಳಿಕೆಯಲ್ಲಿ ಗೊಂದಲ ಸೃಷ್ಟಿಸಿದ HE ಪದ: ಇದು ಉದ್ದೇಶಪೂರ್ವಕವೇ? ಮಂಜುನಾಥ ಕೊಳ್ಳೇಗಾಲ ವಿಶ್ಲೇಷಣೆ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Iran-US-Israel War: ಪಾಕಿಸ್ತಾನದ ಮಧ್ಯಪ್ರವೇಶದಿಂದಾಗಿ ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ಇಲ್ಲ: ಡೊನಾಲ್ಡ್ ಟ್ರಂಪ್ -
IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ -
ಇರಾನ್-ಅಮೆರಿಕ ಯುದ್ಧದಲ್ಲಿ ಶರಣಾಗಿದ್ದು ಪಾಕಿಸ್ತಾನ: ಕೃಷ್ಣಭಟ್ ಬರಹ -
US-Iran ceasefire: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 20ರಷ್ಟು ದಾಖಲೆಯ ಕುಸಿತ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Iran Ceasefire: 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್; ಶಾಶ್ವತ ಕದನ ವಿರಾಮದ ಬಗ್ಗೆ ಹೇಳಿದ್ದೇನು












Click it and Unblock the Notifications