ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಅಚ್ಚುಮೆಚ್ಚಿನ ಕನ್ನಡ ಭಾಷೆಯಲ್ಲಿ ಗೂಗಲ್

By Staff
|
Google Oneindia Kannada News

Google introduces Kannada transliteration toolಇಂಗ್ಲಿಷ್ ಬರದ ನಿಮ್ಮ ತಾಯಿಯೋ, ಅಜ್ಜಿಯೋ ಇನ್ನು ಅಂತರ್ಜಾಲದ ಮುಖಾಂತರ ನೇರವಾಗಿ ದೂರದಲ್ಲೆಲ್ಲೋ ಇರುವ ನಿಮ್ಮ ಉಭಯ ಕುಶಲೋಪರಿ ವಿಚಾರಿಸಲು ತಡಕಾಡಬೇಕಿಲ್ಲ. ಸಂಪೂರ್ಣವಾಗಿ ಕನ್ನಡದಲ್ಲೇ ವ್ಯವಹರಿಸುವ ಕಿಂಡಿಯನ್ನು ಗೂಗಲ್ ತೆರೆದಿಟ್ಟಿದೆ. ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಕನ್ನಡದಲ್ಲೇ ತಿಳಿಯಲು ಸುಲಭ ದಾರಿಗಳು ಇಲ್ಲಿವೆ. ಕನ್ನಡಲ್ಲೇ ಪತ್ರಿಸಿ, ರುಚಿಯಾದ ತಿಂಡಿ ತಯಾರಿಸಿ, ನಿಮ್ಮ ಅನಿಸಿಕೆಗಳನ್ನು ಕನ್ನಡದಲ್ಲೇ ಮುದ್ರಿಸಿ. ಕನ್ನಡದಲ್ಲೇ ಹುಡುಕಿರಿ, ಬರೆಯಿರಿ, ಕನ್ನಡವನ್ನೇ ಉಸಿರಾಡಿಸಿ, ಕನ್ನಡದಲ್ಲೇ ಕನಸು ಕಾಣಿರಿ.

***

ನಮ್ಮಲ್ಲಿ ಅನೇಕರು ವಿವಿಧ ಕಾರಣಗಳಿಗೆ ಅಂತರ್ಜಾಲವನ್ನು ಉಪಯೋಗಿಸುತ್ತೇವೆ. ನಮ್ಮ ಸ್ನೇಹಿತರು ಅಥವಾ ಕುಟುಂಬದವರೊಡನೆ ಕ್ಷೇಮ ಸಮಾಚಾರ ವಿಚಾರಿಸಲು, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಾಗೂ ಮಾಹಿತಿ ಹುಡುಕಲು ಬಳಸುತ್ತೇವೆ. ನಿಮ್ಮ ಕಾಲೇಜಿನ ಹಳೆಯ ಆಪ್ತ ಸ್ನೇಹಿತ ಯಾರೆಂದು ಇನ್ನೂ ನೆನಪಿದೆಯೇ? ಅವನು ಎಲ್ಲಿದ್ದಾನೆ - ಏನು ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳುವ ಕುತೂಹಲವೇ? ನಿಮಗೆ ತಿಳಿದಿರುವ ವಿಷಯದ ಬಗ್ಗೆ ಇತರರೊಂದಿಗೆ ಚರ್ಚಿಸಬೇಕೆ? ನಿಮಗೆ ಚಲನಚಿತ್ರಗಳನ್ನು ನೋಡುವುದು ಪ್ರಿಯವಾಗಿದ್ದು, ನೀವು ಒಬ್ಬ ಉತ್ತಮ ವಿಶ್ಲೇಷಕರೇ? ಹಾಗಾದರೆ ನಿಮ್ಮ ವಿಶ್ಲೇಷಣೆಗಳನ್ನು ಅಂತರ್ಜಾಲದಲ್ಲಿ ಏಕೆ ಪ್ರಕಟಿಸಬಾರದು?

ನಿಮಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಿದೆಯೇ? ಅಥವಾ ಹೊಸ, ರುಚಿಯಾದ ಅಡಿಗೆ ತಿಂಡಿಗಳ ಬಗ್ಗೆ ಕಲಿಯಬೇಕೆ? ಅಥವಾ ಮುಂಬರುವ ಚುನಾವಣೆಗಳ ಬಗ್ಗೆ ವಿವರಗಳು ಬೇಕೆ? ಇಷ್ಟೆಲ್ಲವೂ ಒಂದು ಮೌಸ್ ಕ್ಲಿಕ್‌ನಿಂದ ದೊರಕುವುದು ಸಾಧ್ಯವಾಗುವುದಾದರೆ?

ನೀವು ಇಂಗ್ಲಿಷ್ ಮಾತನಾಡಬಲ್ಲವರಾದರೆ ಅಂತರ್ಜಾಲದಲ್ಲಿ ಇದೆಲ್ಲವನ್ನೂ ಹಾಗೂ ಇದಕ್ಕಿಂತ ಹೆಚ್ಚಿನದನ್ನೇ ಮಾಡಬಹುದು. ದಿನ ನಿತ್ಯದ ಬಳಕೆಯಲ್ಲಿ ಒಂದೆರಡು ಭಾಷೆಗಳನ್ನು ಬೆರೆಸಿ ಮಾತನಾಡುವಂತೆ, ಕೆಲವೊಮ್ಮೆ ನೀವು ನಿಮ್ಮ ಮಾತೃಭಾಷೆಯಲ್ಲಿ ಅಂತರ್ಜಾಲವನ್ನು ಬಳಸಲು ಬಯಸಬಹುದು. ಗೂಗಲ್ ಇಂಡಿಯಾದಲ್ಲಿ ನಾವು ಈ ಬಯಕೆಯನ್ನು ನನಸಾಗಿಸುವ ನಿಟ್ಟಿನಲ್ಲಿ ಸರಳ ಸೌಕರ್ಯಗಳನ್ನು ರಚಿಸಲು ಅವಿರತವಾಗಿ ಶ್ರಮಿಸುತ್ತಿದ್ದೇವೆ. ನಾವು ಇತ್ತೀಚೆಗೆ ಬಿಡುಗಡೆ ಮಾಡಿರುವ ಕೆಲವು ಸೇವೆ/ಉತ್ಪನ್ನಗಳನ್ನು ಕುರಿತು ವಿವರಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಇಚ್ಛಿಸುತ್ತೇವೆ.

ಸುಲಭವಾಗಿ ಮಾಹಿತಿಯನ್ನು ಗಣಕಕ್ಕೆ ನೀಡುವುದು : ಮೊದಲಿಗೆ, ನೀವು ಸಾಧಾರಣವಾಗಿ ಬಳಸುವ ಇಂಗ್ಲಿಷ್‍ ಕೀಲಿಮಣೆಯಿಂದ (keyboard) ಸರಾಗವಾಗಿ ಕನ್ನಡದಲ್ಲಿ ಟೈಪ್ ಮಾಡುವ ಗೂಗಲ್ ಲಿಪ್ಯಂತರ (transliteration) ತಂತ್ರಜ್ಞಾನವನ್ನು ನಾವು ಬಿಡುಗಡೆ ಮಾಡಿದ್ದೇವೆ. ಶಬ್ದಗಳನ್ನು ಹೇಗೆ ಆಲಿಸುವಿರೋ ಅದೇ ರೀತಿ ಟೈಪ್ ಮಾಡಿದರೆ ಸಾಕು. ಉದಾಹರಣೆಗೆ, ಇಂಗ್ಲಿಷ್‌ನ ನಿಯಮಿತ ಅಕ್ಷರಗಳನ್ನು ಬಳಸಿ "nanna" ಎಂದು ಇಂಗ್ಲಿಷ್‍ನಲ್ಲಿ ಟೈಪ್ ಮಾಡಿ, ಸ್ಪೇಸ್ (space) ಒತ್ತಿದರೆ, ನಾವು ಅದನ್ನು "ನನ್ನ" ಎಂದು ಕನ್ನಡಕ್ಕೆ ಪರಿವರ್ತಿಸುತ್ತೇವೆ. ಇದನ್ನು ಗೂಗಲ್ ಇಂಡಿಯಾ ಲ್ಯಾಬ್ಸ್ ಪುಟದಲ್ಲಿ ನೀವು ನೋಡಿ ಉಪಯೋಗಿಸಬಹುದು. ಅಲ್ಲದೆ ನಿಮ್ಮ ಗೂಗಲ್ ಹೋಮ್‌ಪೇಜ್‌ಗೆ ಇದನ್ನು iGoogle gadget ಆಗಿ ಜೋಡಿಸಲೂಬಹುದು. ಈ ಸೇವೆಯು ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಿದೆ.

ನಿಮ್ಮ ಸ್ನೇಹಿತರೊಡನೆ ಮಾತನಾಡಿ : ಭಾರತದಲ್ಲಿನ ನಮ್ಮ ಬಳಕೆದಾರರು ಈ ತಂತ್ರಜ್ಞಾನವನ್ನು ಎಷ್ಟು ಇಷ್ಟ ಪಟ್ಟರೆಂದರೆ, ನಾವು ಇದನ್ನು ಗೂಗಲ್‌ನ ಇತರ ಉತ್ಪನ್ನಗಳಲ್ಲಿ ಕೂಡ ಅಳವಡಿಸಲು ನಿರ್ಧರಿಸಿದೆವು. ನಿಮ್ಮ ಹಳೆಯ ಕಾಲೇಜಿನ ಗೆಳೆಯ/ಗೆಳತಿಯನ್ನು ಆರ್ಕುಟ್ ಮೂಲಕ ಪತ್ತೆ ಹಚ್ಚಿ, ಅವರೊಂದಿಗೆ ಹರಟೆ ಹೊಡೆಯಬೇಕೆನಿಸಿದರೆ, ಈಗ ನೀವು ಕನ್ನಡದಲ್ಲಿ ಅವರಿಗೆ ಆರ್ಕುಟ್ ಸಂದೇಶಗಳನ್ನೂ (orkut scraps) ಕಳಿಸಬಹುದು.

ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ : ನಿಮಗೆ ತಿಳಿದಿರುವ ಅಥವಾ ತುಂಬ ಆಸಕ್ತಿ ಇರುವ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕಿದ್ದರೆ, ನಿಮ್ಮದೇ ಸ್ವಂತ ಬ್ಲಾಗ್ ಒಂದನ್ನು ಪ್ರಾರಂಭಿಸಿ, ಕನ್ನಡದಲ್ಲಿ ಬ್ಲಾಗ್ ಪೋಸ್ಟ್ ಬರೆಯಬಹುದು.

ಮಾಹಿತಿ ಹುಡುಕಿ : ನಿಮಗೆ ಕನ್ನಡದಲ್ಲಿ ಇತ್ತೀಚಿನ ಚುನಾವಣೆಯ ವಿವರಗಳು ಅಥವಾ ಚಿತ್ರರಂಗದ ಗಾಳಿಸುದ್ದಿಗಳು ಬೇಕಿದ್ದರೆ, ಗೂಗಲ್ ಕನ್ನಡ ಅನ್ವೇಷಣೆ ಪುಟಕ್ಕೆ ಹೋಗಿ, ಇಂಗ್ಲಿಷ್ ಅಕ್ಷರಗಳನ್ನು ಬಳಸಿ ನಿಮಗೆ ಬೇಕಿರುವ ವಿಷಯ/ಪ್ರಶ್ನೆಯನ್ನು ಟೈಪ್ ಮಾಡಿ, ಕನ್ನಡ ಮಾಹಿತಿಯನ್ನು ಹುಡುಕಬಹುದು. ನೀವು ಅಕ್ಷರಗಳನ್ನು ಟೈಪ್ ಮಾಡುತ್ತಾ ಹೋದಂತೆ, ಅದಕ್ಕೆ ತಕ್ಕಂತೆ ಕನ್ನಡದ ಸಲಹೆಗಳನ್ನು ನಿಮಗೆ ಸೂಚಿಸುತ್ತೇವೆ. ಉದಾಹರಣೆಗೆ, ನೀವು "mungaru" ಎಂದು ಟೈಪ್ ಮಾಡಿದಾಗಲೇ, "ಮುಂಗಾರು ಮಳೆ" ಎಂಬ ಸಲಹೆಯು ನಿಮಗೆ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಮೂಲಕ, ನೀವು ಇಚ್ಛಿಸಿದ ಕನ್ನಡ ವಿಷಯದ ಮೇಲೆ ಸುಲಭವಾಗಿ ಅನ್ವೇಷಣೆ ಮಾಡಬಹುದು.

ಗೂಗಲ್ ಭಾಷಾಂತರ : ಇಂಗ್ಲಿಷ್‍ನಿಂದ ಹಿಂದಿಗೆ, 'ಗೂಗಲ್ ಟ್ರಾನ್ಸ್‍ಲೇಟ್TM" ಭಾಷಾಂತರ ಸೇವೆಯನ್ನು ಇಂದು ಗೂಗಲ್ ಬಿಡುಗಡೆ ಮಾಡಿದೆ. ಈ ಹೊಸ ಸೇವೆಯಿಂದ ಹಿಂದಿ ಮತ್ತು ಇಂಗ್ಲಿಷ್ ನಡುವೆ ಸ್ವಯಂಚಾಲಿತ ಅನುವಾದ ಸಾಧ್ಯವಾಗಿದೆ. ನೀವು ಇಂಗ್ಲಿಷ್‍ ಪದಗಳನ್ನಾಗಲಿ, ಅಂತರ್ಜಾಲದ ಪುಟಗಳನ್ನಾಗಲಿ ಭಾಷಾಂತರಗೊಳಿಸಲು ಬಯಸಿದರೆ, http://www.google.com/translate_t ನಲ್ಲಿ ಇದನ್ನು ಮಾಡಬಹುದಾಗಿದೆ. ಒಟ್ಟಾರೆ ಭಾರತದ ಜನಸಂಖ್ಯೆಯಲ್ಲಿ ಓದುಬರಹ ಬಲ್ಲವರ ಪೈಕಿ ಕೇವಲ 13% ಜನರಿಗೆ ಮಾತ್ರ ಇಂಗ್ಲಿಷ್ ಭಾಷೆಯ ತಿಳಿವಳಿಕೆಯಿದೆ. ಇದನ್ನು ಗಮನದಲ್ಲಿರಿಸಿಕೊಂಡು, ಇಂಗ್ಲಿಷ್ ಭಾಷೆಯ ಅರಿವು ಇಲ್ಲದಿದ್ದರೂ, ಅಂತರ್ಜಾಲದ ಉಪಯುಕ್ತತೆಯನ್ನು ಭಾರತೀಯರಿಗೆ ಲಭ್ಯವಾಗಿಸುವ ದಿಕ್ಕಿನಲ್ಲಿ, ಗೂಗಲ್‍ನ ಈ ಹೊಸ 'ಅನುವಾದ" ಸೇವೆ ಪ್ರಥಮ ಹೆಜ್ಜೆಯಾಗಿದೆ. ಭಾರತದ ಬಹುಭಾಷಾ ಬಳಕೆದಾರರಿಗೆ ಅಂತರ್ಜಾಲದ ಬಳಕೆಯನ್ನು ಸರಳವಾಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಅನೇಕ ನವೀನ ಪ್ರಯತ್ನಗಳಲ್ಲಿ ಇದು ಕೂಡ ಒಂದಾಗಿದೆ.

ಸದ್ಯಕ್ಕೆ ಭಾರತೀಯ ಭಾಷಿಕರಿಗೆ ಅಂತರ್ಜಾಲದಲ್ಲಿ ಅತ್ಯುತ್ತಮ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಸ್ಥಿತಿಯು ಬೇಗನೆ ಸುಧಾರಣೆ ಹೊಂದುವ ಆಶಾಭಾವನೆ ನಮಗಿದೆ. ಅಲ್ಲಿಯವರೆಗೆ, ಹಿಂದಿಯಲ್ಲಿ ಪ್ರಶ್ನೆ ಕೇಳಿ ಅದರ ಇಂಗ್ಲಿಷ್ ಅನುವಾದದ ಪ್ರಶ್ನೆಗೆ ಬರುವ ಫಲಿತಾಂಶಗಳನ್ನು ಹಿಂದಿಯಲ್ಲಿ ಭಾಷಾಂತರಿಸಲು http://www.google.com/translate_s ಸಹಕರಿಸುತ್ತದೆ. ಈ ಪುಟದಲ್ಲಿ "ಹಿಂದಿ"ಯು ನಿಮ್ಮ ಭಾಷೆಯೆಂದೂ, ಫಲಿತಾಂಶಗಳು "ಇಂಗ್ಲಿಷ್" ಭಾಷೆಯಲ್ಲಿ ಬೇಕೆಂದು ಸೂಚಿಸಿ, ನೀವು ಈ ಸೇವೆಯನ್ನು ಉಪಯೋಗಿಸಬಹುದು.

ನಮ್ಮದು ವೈವಿಧ್ಯಮಯ ದೇಶ – ಹಾಗೆಯೇ ನಮ್ಮ ಈ ಹಲವು ಸುಂದರ ಭಾಷೆಗಳಿಂದ ಅಂತರ್ಜಾಲವನ್ನು ಕೂಡ ವೈವಿಧ್ಯಮಯವಾಗಿಸೋಣ. ಸ್ನೇಹಿತರೊಡನೆ ಸಂವಹಿಸಿ, ಅನಿಸಿಕೆಗಳನ್ನು ಚರ್ಚಿಸಿ, ಮಾಹಿತಿಯನ್ನು ಅನ್ವೇಷಿಸೋಣ - ಗೂಗಲ್‍ನೊಂದಿಗೆ, ಎಲ್ಲ ನಮ್ಮ ಭಾಷೆಯಲ್ಲೇ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X