ನಿಮ್ಮ ಸಿಲ್ಕ್ ಸೀರೆಗಳು ನೂರ್‍ಕಾಲ ಬಾಳಲಿ
ವಸ್ತ್ರ ಜಗತ್ತಿನ ಚಕ್ರವರ್ತಿಯಾದ ರೇಷ್ಮೆಯನ್ನು ಜತನವಾಗಿರಿಸಲು ಕೆಲವು ಸುರಕ್ಷಿತ ಕ್ರಮಗಳಿವೆ. ಅವುಗಳಲ್ಲಿ ಕೆಲವು ದಟ್ಸ್‌ಕನ್ನಡ ವಾಚಕ ಮಹಿಳಾಮಣಿಗಳಿಗೆ..
ಪಾವನಿ
ಸೀರೆ ಬಣ್ಣಗುಂದುವುದು ಯಾವಾಗ ?
1. ಪ್ರಿಂಟೆಡ್ ಸೀರೆಯನ್ನು ಬಿಸಿ ನೀರಿನಲ್ಲಿ ತೋಯಿಸಿದಾಗ.
2. ಬಹಳ ದೀರ್ಘ ಕಾಲ ನೀರಿನಲ್ಲಿ ನೆನೆಯಲು ಬಿಟ್ಟಲ್ಲಿ, ಅಥವಾ ಸುಡು ಬಿಸಿಲಿನಲ್ಲಿ ಬಹು ಕಾಲ ಒಣಗಲು ಬಿಟ್ಟಾಗ, ಅಥವಾ ಸೀರೆಯಲ್ಲಿ ಹೆಚ್ಚು ನೀರನ್ನು ಉಳಿಸಿದ್ದಲ್ಲಿ.
3. ಕೀಳು ಮಟ್ಟದ ಸಾಬೂನನ್ನು ಬಳಸಿದಾಗ ಅಥವಾ ಸೀರೆಯ ಮೇಲೆ ಒರಟು ಸಾಬೂನಿನಿಂದ ತಿಕ್ಕಿದಾಗ.
4. ಬಿಸಿಲಲ್ಲಿ ಒಣಗಿಸಿದಲ್ಲಿ ಅಥವಾ ವಿಪರೀತ ಬಿಸಿಯಾಗಿರುವ ಇಸ್ತ್ರಿ ಪೆಟ್ಟಿಗೆ ಬಳಸಿ ಇಸ್ತ್ರಿ ಮಾಡಿದಲ್ಲಿ.
5. ಎಣ್ಣೆ, ಸೆಂಟ್, ಟೀ ಪಾನೀಯಗಳು, ಬೆವರು ಇತ್ಯಾದಿ ಸೀರೆಗೆ ಅಂಟಿಕೊಂಡಲ್ಲಿ.
6. ಯಾವುದ್ಯಾವುದೋ ಸರಿಯಿಲ್ಲದ ಡ್ರೈಕ್ಲೀನರ್‌ಗೆ ಸೀರೆ ಕೊಟ್ಟಲ್ಲಿ..
ಜರಿ ಯಾವಾಗ ಕಪ್ಪಾಗುವುದು ?
1. ಚಿನ್ನ ಅಥವಾ ಬೆಳ್ಳಿಯ ಜರಿಯುಳ್ಳ ಸೀರೆಯನ್ನು ಬಹಳ ಕಾಲ ಪೆಟ್ಟಿಗೆಯಲ್ಲಿ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿದಲ್ಲಿ ಅಥವಾ ನ್ಯಾಫ್ತಲೀನ್ ಗುಳಿಗಳನ್ನು ಹಾಕಿ ದೀರ್ಘ ಕಾಲ ಇಟ್ಟಲ್ಲಿ .
2. ಎಣ್ಣೆ, ಸೆಂಟ್, ಟೀ ಪಾನೀಯಗಳು ಬೆವರು ಇತ್ಯಾದಿ ದ್ರವಗಳು ಜರಿಗೆ ಅಂಟಿದಲ್ಲಿ .
3. ಜರಿ ಮೇಲ್ಭಾಗದಲ್ಲಿ ನೇರವಾಗಿ ಸಾಬೂನಿನಿಂದ ಉಜ್ಜಿದಲ್ಲಿ .
4. ಬಿಸಿಯಾದ ಇಸ್ತ್ರಿ ಪೆಟ್ಟಿಗೆಯನ್ನು ಜರಿ ಮೇಲ್ಭಾಗದಲ್ಲಿ ಉಜ್ಜಿದಲ್ಲಿ .
ಈ ತೊಂದರೆಗಳನ್ನು ತಪ್ಪಿಸಲು ಡ್ರೈಕ್ಲೀನಿಂಗ್ ಮಾಡುವುದು ಉತ್ತಮ. ಹೊಸ ಕೃತಕ ನೂಲು, ಬಣ್ಣಗಳು, ಹಾಗೂ ರಾಸಾಯನಿಕ ವಸ್ತುಗಳನ್ನು ಇತ್ತೀಚೆಗೆ ರೇಷ್ಮೆ ಸೀರೆಗಳ ತಯಾರಿಕೆಯಲ್ಲಿ ಹೆಚ್ಚು ಹೆಚ್ಚು ಬಳಸಲಾಗುತ್ತಿದೆ. ಇಂಥ ಸೀರೆಗಳ ಬಣ್ಣ ಅಥವಾ ಜರಿ ಹೆಚ್ಚಿನ ಬಾಳಿಕೆ ಬರುವುದು ಕಡಿಮೆ.
ನಮ್ಮ ಹೆಣ್ಣುಮಕ್ಕಳು ದೇವರಸಮಾರಾಧನೆಯಿಂದ ಬೀಗರ ಊಟದವರೆಗೆ ಎಷ್ಟೊಂದು ಸಲ ಸೀರೆಬದಲಾಯಿಸುವುದಿದೆ. ವರಪೂಜೆಗೊಂದು, ನಾಂದಿಗೊಂದು, ಧಾರೆಗೊಂದು, ನಾಗೋಲೆಗೊಂದು, ರಿಸೆಪ್ಷನ್‌ಗೆರಡು ..ಹೀಗೆ ಎಲ್ಲ ಕ್ಷಣಗಳಲ್ಲೂ ನಿಮ್ಮ ಮೆರಗನ್ನು, ಬೆರಗನ್ನು, ಸಂಭ್ರಮವನ್ನು, ವನಪು ವಯ್ಯಾರವನ್ನು ಹೆಚ್ಚಿಸುವ ಸಿಲ್ಕ್‌ಸೀರೆಗಳ ಭಂಡಾರವನ್ನು ಪ್ರೀತಿಯಿಂದ ನೋಡಿಕೊಳ್ಳಿ.












Click it and Unblock the Notifications