ಮದ್ವೆ ಮನೆಯ ಬಾತ್‌ರೂಂನಲ್ಲಿ ಏನಾಯ್ದು ಅಂದ್ರೆ?!
ಯಶ್
ಸುಬ್ಬನ ಹೆಂಡತಿ ಸುಬ್ಬಿ ಕಡೆಯವರದ್ಯಾರದೋ ಲಗ್ನಕ್ಕೆ ಸುಬ್ಬ ಬಂದಿದ್ದ. ಎದಿರುಗೊಳ್ಳುವುದು ಎಲ್ಲಾ ಮುಗಿದು ಮರುದಿನ ಅಕ್ಷತೆಗೆ ಎಲ್ಲ ತಯಾರಾಗುತ್ತಿದ್ದರು.
ಸುಬ್ಬನೂ ಸ್ನಾನ ಬೇಗ ಮುಗಿಸಿಬಿಡೋಣವೆಂದು ಬಚ್ಚಲು ಮನೆ ಕಡೆಗೆ ನಡೆದ. ಒಂದು ಬಚ್ಚಲು ಮನೆಯೇನೋ ಖಾಲಿ ಇತ್ತು, ಆದರೆ ಅದರ ಮುಂದೆ ನಿಂತಿದ್ದ ಸುಬ್ಬಿ ಬಳಗದವರೊಬ್ಬರು ಯಾಕೋ ಹಿಂದೆ ಮುಂದೆ ನೋಡುತ್ತಿದ್ದರು.
ಸುಬ್ಬ ಕೇಳಿದ, ''ಯಾಕ್ಸಾರ್ ಖಾಲಿ ಇದೆಯಲ್ಲ ಬೇಗನೆ ಸ್ನಾನ ಮುಗಿಸಿ"" ಅಂದ.
ಅದಕ್ಕವರು, ''ಇದಕ್ಕೆ ಬಚ್ಚಲು ಮನೆಗೆ ಒಳಗಡೆಯಿಂದ ಕೊಂಡಿ ಇಲ್ಲ"" ಅಂದರು.
''ನೀವೇನು ಬಿಡಿ ಸಾರ್, ಗಂಡಸಾಗಿ.. ಕೊಂಡಿ ಇಲ್ಲದಿದ್ದರೆ ಏನಂತೆ"" ಸುಬ್ಬ ತಮಾಷೆ ಮಾಡಿದ.
ಅದಕ್ಕವರು ಹ್ಹಿಹ್ಹಿಹ್ಹಿ ಅಂತ ನಗುತ್ತಾ, ''ಅದಕ್ಕೇನಿಲ್ಲ, ಗಡಿಬಿಡಿಯಲ್ಲಿ ಮದುವೆಗೆ ಬರುವಾಗ ಇನ್ನೊಂದು ಪಟ್ಟಾಪಟ್ಟಿ ತರಲು ಮರೆತುಬಿಟ್ಟೆ"" ಅಂದು, ''ನೀವೇನು ಬೇಜಾರು ಮಾಡಿಕೊಳ್ಳದಿದ್ದರೆ, ಇಲ್ಲೇ ಕಾಯ್ತಾ ನಿಂತಿರ್ತೀರಾ, ಬೇಗನೆ ಸ್ನಾನ ಮುಗಿಸಿ ಬಂದು ಬಿಡುತ್ತೇನೆ"" ಅಂತ ರಿಕ್ವೆಸ್ಟ್ ಮಾಡಿಕೊಂಡರು.
''ಅದಕ್ಕೇನಂತೆ ಬಿಡಿ ಸಾರ್, ನಾನಿಲ್ಲೇ ಇರ್ತೇನೆ, ಮುಗಿಸಿಕೊಂಡು ಬನ್ನಿ"" ಅಂತ ಸುಬ್ಬ ಅಭಯಹಸ್ತ ನೀಡಿದ.
ಸರಿ, ಬಿದ್ದೆ ಬಿದ್ದೆ.. ಅಂತ ಯಾವ್ದೋ ಹಾಡು ಗುನುಗುನಿಸುತ್ತ ಮಧ್ಯ ಮಧ್ಯ ಆಹಾಹಾ ಅಂತ ಸ್ನಾನದ ಆನಂದ ಪಡೆದುಕೊಳ್ಳುತ್ತಿದ್ದರು ಸುಬ್ಬಿ ಸಂಬಂಧಿ.
ಇತ್ತ ಯಾರ್ದೋ ಜೊತೆಗೆ ಮಾತನಾಡುತ್ತ ಸುಬ್ಬ ಮೈಮರೆತು ನಿಂತುಬಿಟ್ಟ. ಆಗಲೆ, ಏಏಏ ಅಂತ ಸುಬ್ಬಿ ಸಂಬಂಧಿ ಬಾಗಿಲನ್ನು ಧಡಾರನೆ ಹಾಕಿಕೊಂಡರು. ನೋಡಿದರೆ, ಅವರ ಹೆಂಡತಿಯೇ ಯಾರೂ ಇದ್ದಿರಲಿಕ್ಕಿಲ್ಲ ಅಂತ ಬಾಗಿಲನ್ನು ತಳ್ಳಿಬಿಟ್ಟಿದ್ದರು. ದಡಬಡನೆ ಟವಲ್ಲನ್ನು ಸುತ್ತಿಕೊಂಡು, ಮುಖ ಕೆಂಪಗೆ ಮಾಡಿಕೊಂಡು ಸುಬ್ಬಿ ಸಂಬಂಧಿ ಸುಬ್ಬನನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದರು.
''ಏನು ಸುಬ್ಬು ಅವರೆ, ಕಾಯ್ತಾ ನಿಂತ್ಕೊಳ್ತೀನಿ ಅಂದೋರು ಹೀಗೆ ಮೈಮರೆತಿದ್ದಕ್ಕೆ ಏನಾಯ್ತು ನೋಡಿ. ಹೆಂಡ್ತಿ ಬಂದು ಬಾಗಿಲು ತಳ್ಳಿಬಿಟ್ಟಳು"" ಅಂತ ರೇಗಲು ಶುರುಮಾಡಿದರು.
ಅದಕ್ಕೆ ಸುಬ್ಬು, ''ಅಯ್ಯೋ ಹೌದಾ, ನಿಮ್ಮ ಹೆಂಡತಿ ಬಾಗಿಲು ತಳ್ಳಿದ್ದು ಒಳ್ಳೆಯದೇ ಆಯಿತು. ಬೇರೆ ಯಾರಾದರೂ ತಳ್ಳಿದ್ದರೆ ನಿಮ್ಮ ಮಾನ, ಮರ್ಯಾದೆ ಹೊರಟು ಹೋಗಿರೋದು!"" ಅಂತ ಬೇರೆ ಸ್ನಾನದಮನೆಗೆ ನಡೆದ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications