ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಕರ್ಮಿ ಆರ್‌. ನಾಗೇಶ್‌-60: ‘ಭಾಗವತರು’ದಿಂದ ‘ರಂಗ ಗೌರವ’

By Staff
|
Google Oneindia Kannada News

R. Nageshಸೌಮ್ಯ-ಸಿಟ್ಟು , ಬಂಡಾಯ-ಮೌನ ಎಂಬುದು ಇವರ ಜೀವನ ಭಾಗ. ಅವರೊಬ್ಬ ಎಡ ಪಂಥೀಯ ರಂಗಕರ್ಮಿ ಎಂದವರಿದ್ದಾರೆ. ಸಿಡುಕಿಲ್ಲ. ಯಾಕೆಂದರೆ ಅವರು ಎಡಪಂಥೀಯ ಚಿಂತನೆಗೆ ಮಾರು ಹೋದವರೇ. ಅವರ ವೇಗ ವಿಪರೀತ. ವೇಗಕ್ಕೆ ಸಿಕ್ಕಿ ಅಲ್ಲಲ್ಲಿ ಎಡವಿದ್ದೂ ಇದೆ. ಎಡವಿ ಬಿದ್ದದೂ ಇದೆ. ಎಡವ ಬೇಕಾದರೆ ಮುಂದೆ ಸಾಗುತ್ತಿರ ಬೇಕಲ್ಲ. ಆವರು ಪ್ರಯೋಗಶೀಲ ವ್ಯಕ್ತಿ. ಪರಿತಪಿಸುವ ಮಾತಿಲ್ಲ. ಚಲನಶೀಲತೆ ಆವರ ಸಹಜ ಸ್ವಭಾವ. ಆ ಗಡಸಾದ ಧ್ವನಿ ಕೇಳಿದರೆ ನೀವೇ ಹೇಳುತ್ತೀರಿ he is ಆರ್‌.ನಾಗೇಶ್‌.

ಅವರಿಗೀಗ ಅರುವತ್ತರ ವಸಂತ.(ಜನನ 13 ಮಾರ್ಚ್‌ 1943 ) ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರು. ರಂಗಕಲೆಯನ್ನು ವಿಕೇಂದ್ರಿಕರಣ ಮಾಡುವ ಪ್ರಯತ್ನ ಅವರ ಅಧ್ಯಕ್ಷತೆ ಅವಧಿಯಲ್ಲಿ ನಡೆದಿದೆ. ರಾಜ್ಯದ ಮೂಲೆ ಮೂಲೆಗೆ ನಾಟಕ ಕೊಂಡೊಯ್ಯುವ ಪ್ರಯತ್ನ ಸಾಗಿದೆ. ಇನ್ನು ಕೆಲವು ಕನಸುಗಳು ಸಕಾರವಾಗದೆ ಉಳಿದಿವೆ. ನನಸು ಮಾಡುವ ಹಠ.

ವಾರ್ತಾ ಇಲಾಖೆಯಲ್ಲಿ ಈ ಹಿಂದೆ ಔದ್ಯೋಗಿಯಾಗಿದ್ದರಿಂದ ಕರ್ನಾಟಕ ಮನದ ಮಾತಾಗಿ ಬಿಟ್ಟಿತ್ತು. ಜೀವನದ ಮುಕ್ಕಾಲು ಭಾಗ ರಂಗಭೂಮಿಯಲ್ಲಿ ದುಡಿದವರು. ಅವರು ರಂಗಸಜ್ಜಿಕೆಗಳನ್ನು ಪ್ರಯೋಗಿಸಿ ಅನುಭವ ಪಡೆದವರು. ಹಲವರ ಪ್ರೀತಿ,ಅಸೂಯೆ, ವ್ಯಂಗ್ಯ, ಮೆಚ್ಚುಗೆ ಇವರಿಗೆ ಸಾಮಾನ್ಯ.

ಈ ಷಷ್ಠ್ಯಬ್ಧಿ ಸಂದರ್ಭದಲ್ಲಿ ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಆರ್‌.ನಾಗೇಶ್‌ ಅವರ ನಾಟಕೋತ್ಸವ, ವಿಚಾರ ಸಂಕಿರಣ ಮತ್ತು ರಂಗ ಗೌರವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೂ.7ರಿಂದ12ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರ, ನಯನರಂಗಮಂದಿರ, ಮತ್ತು ಎಡಿಎ ರಂಗಮಂದಿರದಲ್ಲಿ ಈ ಕಾರ್ಯಕ್ರಮಗಳು ಜರಗಲಿವೆ.

ನಾಟಕೋತ್ಸವ ಉದ್ಘಾಟನೆ : ಐ.ಎಂ.ವಿಠಲಮೂರ್ತಿ

ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 7ಗಂಟೆಗೆ, ಐದು ನಾಟಕಗಳು:

  • ಪೂಚಂತೆ ರಚನೆಯ -ತಬರನ ಕತೆ, -ಜೂ.7, ಬೆನಕ ತಂಡ
  • ಶ್ರಿರಂಗ ರಚನೆಯ -ಶೋಕ ಚಕ್ರ-ಜೂ.8, ಸಮುದಾಯ ತಂಡ
  • ಚಂದೇರ ಶೇಖರ ಕಂಬಾರ ರಚನೆಯ -ಹರಕೆಯಕುರಿ-ಜೂ.9, ರಂಗಸಂಪದ
  • ಕೆ.ವಿ.ಅಕ್ಷರ ರಚನೆಯ -ಚೂರಿಕಟ್ಟೆ-ಜೂ.10, ಸಂಚಯ ತಂಡ
  • ಟಿ.ಎನ್‌.ಸೀತಾರಾಂ ರಚನೆಯ -ನಮ್ಮೊಳಗೊಬ್ಬ ನಾಜೂಕಯ್ಯ- ಜೂ.11, ನಟರಂಗ
ಬೆಳಿಗ್ಗೆ ನಯನ ರಂಗಮಂದಿರದಲ್ಲಿ ವಿಚಾರ ಸಂಕಿರಣವನ್ನು ಜಿ.ಎನ್‌. ರಂಗನಾಥ್‌ ರಾವ್‌ ಉದ್ಘಾಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆ ಪ್ರೊಜಿ.ಸಿ.ಕೃಷ್ಣಸ್ವಾಮಿ ವಹಿಸುವರು. ಹಾಸಾಕೃ, ಹುಣಸವಾಡಿ ರಾಜನ್‌, ಸಿ.ಕೆ.ಗುಂಡಣ್ಣ, ಸೂತ್ರದಾರ ರಾಮಯ್ಯ ಮತ್ತು ಶಶಿಧರ ಅಡಪ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಎಡಿಎ ರಂಗಮಂದಿರದಲ್ಲಿ ವಿಚಾರ ಸಂಕಿರಣ ಮುಂದುವರಿಯಲಿದೆ. ಎಂ.ಕೆ.ಭಾಸ್ಕರ ರಾವ್‌, ಟಿ.ಎನ್‌.ಸೀತಾರಾಂ ಮುಂತಾದ ರಂಗಕರ್ಮಿಗಳು ಮಾತನಾಡಲಿದ್ದಾರೆ. ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಡಾ.ಕೆ. ಮರುಳಸಿದ್ಧಪ್ಪ ವಹಿಸಲಿದ್ದಾರೆ. ಸಾಯಂಕಾಲ ‘ರಂಗ ಗೌರವ ’ ಮತ್ತು ‘ರಂಗ ಸಂವಾದ ’ ಕಾರ್ಯಕ್ರಮವಿರುವುದು.

(ಇನ್ಪೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X