ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಮಳವಳ್ಳಿ-ಜಗದೀಶ್‌ಗೆ ಮಕುಟ
ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 60 ಮಂದಿಗೆ ರಾಜ್ಯ ಸರ್ಕಾರ 2003ನೇ ಇಸವಿಯ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು , ಪ್ರಶಸ್ತಿ ವಿಜೇತರ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಸಾಧಕರಲ್ಲೊಬ್ಬರಾದ ಕುಮಾರ್ ಮಳವಳ್ಳಿ ಮತ್ತು ಬಿ.ವಿ.ಜಗದೀಶ್ ಸೇರಿದ್ದಾರೆ.
‘ರಾಜ್ಯೋತ್ಸವ ಪುರಸ್ಕಾರ’ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಗುರುವಾರ (ಅ.30) ಪ್ರಕಟಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ , ಡಾ. ಸೋಮಶೇಖರ ಇಮ್ರಾಪುರ, ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಹಾಗೂ ಪ್ರೊ.ಡಿ.ಲಿಂಗಯ್ಯ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕ್ರೀಡಾಪಟು ಬೋನಿಫೇಸ್ ಪ್ರಭು ಕೂಡ ಪ್ರಶಸ್ತಿ ವಿಜೇತರ ಸಾಲಿನಲ್ಲಿ ಸೇರಿದ್ದಾರೆ ಎಂದು ಸಚಿವೆ ರಾಣಿ ಸತೀಶ್ ತಿಳಿಸಿದರು.
ನವಂಬರ್ 1ರ ಶನಿವಾರ, ಕನ್ನಡ ರಾಜ್ಯೋತ್ಸವದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.
ಪೂರ್ಣಪಟ್ಟಿ
ಸಾಹಿತ್ಯ
ಬರಗೂರು ರಾಮಚಂದ್ರಪ್ಪ
ಸೋಮಶೇಖರ ಇಮ್ರಾಪುರ
ಡಾ. ಎಸ್. ಎಸ್. ವೆಂಕಟೇಶ ಮೂರ್ತಿ
ಪ್ರೊ. ಡಿ. ಲಿಂಗಯ್ಯ.
ಶಾಸ್ತ್ರೀಯ ಸಂಗೀತ
ರಾಜಲಕ್ಷ್ಮಿ ತಿರುನಾರಾಯಣ
ಶೇಖ್ ಹನ್ನುಮಿಯಾ
ಪಂಡಿತ್ ರಾಜಗುರು ಗುರುಸ್ವಾಮಿ ಕಲಕೇರಿ
ಡಾ. ಮೈಸೂರು ಮಂಜುನಾಥ್
ಸುಗಮ ಸಂಗೀತ
ಎಸ್. ಕೆ. ವಸುಮತಿ
ಎ. ಸುಂದರಮೂರ್ತಿ
ನೃತ್ಯ
ಬಿ.ಎಸ್. ಸುನಂದಾದೇವಿ
ಲಲಿತಕಲೆ
ಎಂ.ಬಿ. ಪಾಟೀಲ್
ರಂಗಭೂಮಿ
ಟಿ.ಎಸ್. ನಾಗಾಭರಣ
ಪ್ರೇಮಾ ಕಾರಂತ
ನೀಲಕೃಷ್ಣಪ್ಪ
ಪಿ. ಪದ್ಮ
ದೇವಪುತ್ರ
ಜಾನಪದ-ಯಕ್ಷಗಾನ
ಖಾಸಿಂಸಾಬ್ ಹುಸೇನ್‌ಸಾಬ್
ಎಲ್ . ಆರ್. ನಾಯಕ್
ಮಾದೇಗೌಡ
ಮಲ್ಲಯ್ಯ ಸ್ವಾಮಿ ಅಥಣಿ
ಐರೋಡಿ ಗೋವಿಂದಪ್ಪ
ಬಾಬುರಾವ್ ಕೋಬಾಳ
ಶಿಲ್ಪಕಲೆ
ಎಚ್.ಎನ್.ಕೃಷ್ಣಮೂರ್ತಿ
ಸಮಾಜ ಸೇವೆ
ಅಬ್ದುಲ್ ರೆಹಮಾನ್
ಮೋಹಿನಿ ನಾಯಕ್
ವೈದ್ಯಕೀಯ
ಡಾ. ಎಸ್.ಹೆಗಡೆ
ಡಾ.ಯು.ಎಸ್. ಕೃಷ್ಣನಾಯಕ್
ಡಾ. ನರಪತಿ ಸೋಲಂಕಿ
ಪತ್ರಿಕೋದ್ಯಮ
ಸುರೇಂದ್ರ ದಾನಿ
ಸಿ. ಕೈಸರ್ ರೆಹಮಾನ್
ಕ್ರೀಡಾ ಪತ್ರಿಕೋದ್ಯಮ
ಎಂ.ಎ.ಪೊನ್ನಪ್ಪ
ಕ್ರೀಡೆ
ಬೋನಿಫೇಸ್ ಪ್ರಭು
ಸಿನಿಮಾ
ಬಂಗಾರದ ಮನುಷ್ಯ ಸಿದ್ಧಲಿಂಗಯ್ಯ
ಶರಪಂಜರ ಗಂಗಾಧರ್
ಆದರ್ಶ ದಂಪತಿಗಳು ಶ್ರೀನಾಥ್
ನಟಿ ಬಿ.ವಿ.ರಾಧಾ
ತಾರಾ
ರಚನಾತ್ಮಕ
ವಿಜಯನಾಥ ಶೆಣೈ
ರಾಧಾ ಮೂರ್ತಿ
ವಿಮಲಾ ರಂಗಾಚಾರ್
ಕಲ್ಪನಾಕರ್
ವಿಜ್ಞಾನ
ಬಿ.ವಿ. ಜಗದೀಶ್, ಕ್ಯಾಲಿಫೋರ್ನಿಯ
ಹೊರನಾಡು
ಮಳವಳ್ಳಿ ಕುಮಾರ್ (ಅಮೆರಿಕ)
ಸಿಡ್ನಿ ಕನ್ನಡಕೂಟ (ಆಸ್ಟ್ರೇಲಿಯಾ)
ಕಲಾ ವಿಮರ್ಶೆ
ಚಿ.ಸು.ಕೃಷ್ಣಶೆಟ್ಟಿ
ವಿಭಾಗ- ಸಂಕೀರ್ಣ
ಕೆ.ಆರ್.ತಿಮ್ಮರಾಜು
ಚಂದುಲಾಲ್ ಜೈನ್
ಭಾರತ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್, ಮೈಸೂರು
ಅಕ್ಷಯಪಾತ್ರೆ, ಇಸ್ಕಾನ್
ಪ್ರಧಾನ್ ಗುರುದತ್
ವೈಎಂಸಿಎ
ಕೆ. ಗುರುರಾವ್
ಎಸ್.ಎಂ.ಸಯ್ಯದ್ ಖಲೀಲ್
ಡಾ. ಕೆ. ಮರುಳಸಿದ್ಧಯ್ಯ
ವಸುಂಧರಾ ಖವಳಿ, ಫಿಲಿಯೋಸ್ (ಸ್ವಿಟ್ಜರ್‌ಲ್ಯಾಂಡ್)
ಗೌರಿಶಂಕರ್
ಶಿಕ್ಷಣ
ಸಿದ್ಧಲಿಂಗಯ್ಯ ಸೊಪ್ಪಿನಮಠ
ಎಂ.ಆರ್. ಹೊಳ್ಳ
ಯೋಗ
ಗುರುಸಿದ್ಧಪ್ಪ .












Click it and Unblock the Notifications