ಕನ್ನಡಕ್ಕೆಟಾಲ್‌ಸ್ಟಾಯ್ ತಂದ ದೇಜಗೌಗೆ ಮಾಸ್ತಿ ಪ್ರಶಸ್ತಿ
ಬೆಂಗಳೂರು : ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದ ಹಿರಿಯ ಲೇಖಕ ಪ್ರೊ।ದೇ. ಜವರೇಗೌಡ ಅವರು ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಜೂನ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 25 ಸಾವಿರ ರುಪಾಯಿ ನಗದು ಹಾಗೂ ಮಾಸ್ತಿ ಸಂಸ್ಮರಣಾ ಫಲಕವನ್ನು ಪ್ರಶಸ್ತಿ ಹೊಂದಿದೆ ಎಂದು ಮಾಸ್ತಿ ಪ್ರಶಸ್ತಿ ಸಮಿತಿಯ ಪ್ರಕಟಣೆ ತಿಳಿಸಿದೆ.
ಸೃಜನಶೀಲ ಸಾಹಿತ್ಯ, ಸೃಜನೇತರ ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಜವರೇಗೌಡರ ಸಾಧನೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಬಣ್ಣಿಸಿದೆ. ಪ್ರೊ।ಎಲ್.ಎಸ್. ಶೇಷಗಿರಿ ರಾವ್, ಪ್ರೊ। ಎಂ.ಎಚ್.ಕೃಷ್ಣಯ್ಯ, ಜಿ.ಎನ್.ರಂಗನಾಥ ರಾವ್, ಡಾ।ಕೃಷ್ಣಮೂರ್ತಿ ಹನೂರು, ಪ್ರೊ।ಗೀತಾ ರಾಮಾನುಜಮ್ ಅವರನ್ನೊಳಗೊಂಡ ಆಯ್ಕೆ ಸಮಿತಿಗೆ ಕಥೆಗಾರ ಮಾವಿನಕೆರೆ ರಂಗನಾಥನ್ ಅಧ್ಯಕ್ಷರಾಗಿದ್ದರು.
ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತು ದೇಜಗೌ ಅವರು ಬರೆದಿರುವ ಕೃತಿಗಳು ಅಪಾರ ಜನಪ್ರಿಯತೆ ಗಳಿಸಿವೆ. ಸಂಶೋಧನೆ ಹಾಗೂ ವಿಮರ್ಶೆ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡಿರುವ ದೇಜಗೌ ಶಿಕ್ಷಣ ತಜ್ಞರೆಂದೂ ಪ್ರಸಿದ್ಧರು.
ಟಾಲ್‌ಸ್ಟಾಯ್‌ೆು ಅವರ ಪ್ರಸಿದ್ಧ ಕೃತಿಗಳಾದ ಪುನರುತ್ಥಾನ, ಯುದ್ಧ ಮತ್ತು ಶಾಂತಿ ಹಾಗೂ ಹಮ್ಮು ಬಿಮ್ಮು, ಅನ್ನಾ ಕರೆನಿನಾ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ದೇಜಗೌ ಅವರದು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications