• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆಕ್ಸಿ ಅಜ್ಜಿಯ ಲೋಕದಲ್ಲಿ !

By Staff
|
  • ವಿಶಾಖ ಎನ್‌.

Before I turn 67 - next March - I would like to have a lot of sex with a man I like. If you want to talk first, Trollop works for me.

ಹಾಗಂತ 1999ರಲ್ಲಿ ‘ದಿ ನ್ಯೂಯಾರ್ಕ್‌ ರಿವ್ಯೂ ಆಫ್‌ ಬುಕ್ಸ್‌’ನಲ್ಲೊಂದು ದೊಡ್ಡ ಜಾಹೀರಾತು ಬಂತು. ಒಂದೇ ತಿಂಗಳಲ್ಲಿ ಜಾಹೀರಾತಿಗೆ 63 ಪ್ರತಿಕ್ರಿಯೆಗಳು ಬಂದು ಬಿದ್ದವು. ಈ ಪೈಕಿ ಆಯ್ದ ಕೆಲವರ ಜತೆ ಮಂಚ ಹಂಚಿಕೊಂಡಾಕೆ, ಪಡೆದ ಅನುಭವವನ್ನು ‘ಎ ರೌಂಡ್‌ ಹೀಲ್‌ಡ್‌ ವುಮನ್‌ : ಮೈ ಲೇಟ್‌ ಲೈಫ್‌ ಅಡ್ವೆಂಚರ್ಸ್‌ ಇನ್‌ ಸೆಕ್ಸ್‌ ಅಂಡ್‌ ರೊಮ್ಯಾನ್ಸ್‌’ ಎಂಬ ಪುಸ್ತಕದಲ್ಲಿ ಎರಕ ಹೊಯ್ದಳು. ಇಂತು ಜಗತ್ತಿನ ಅಬಾಲವೃದ್ಧರ ನಿದ್ದೆಗೆಡಿಸಿದ ಹೆಂಗಸಿನ ಹೆಸರು ಜೇನ್‌ ಜುಸ್ಕ.

ಫ್ರಾನ್ಸ್‌ ದೇಶದ ನಿವೃತ್ತ ಶಾಲಾ ಶಿಕ್ಷಕಿ ಜುಸ್ಕ ಗಂಡನಿಂದ ವಿಚ್ಛೇದನ ಪಡೆದು ಈಗ 31 ವರ್ಷಗಳಾಗಿವೆ. 38 ವರ್ಷ ವಯಸ್ಸಿನ ಮಗನೇ ‘ನಿನಗೆ ಗಂಡಸರ ಜತೆ ಮಲಗೋದರಲ್ಲಿ ಸುಖ ಇದೆ ಎಂದಾದರೆ ನನ್ನ ಅಭ್ಯಂತರವಿಲ್ಲ’ ಅಂತ ಅಪ್ಪಣೆ ಕೂಡ ಕೊಟ್ಟಿದ್ದಾನೆ. ಒಂಟಿತನದ ಜೀವನದಿಂದ ಬೇಸತ್ತ ಜಸ್ಕಿಗೆ ಅರವತ್ತಾರರ ಪ್ರಾಯದಲ್ಲಿ ಕಾಡಿದ್ದು ಸೆಕ್ಸು. ಮನಸ್ಸು ಬಯಸಿದ್ದು ಗಂಡಸಿನ ಸಾಥಿ. ಅದಕ್ಕೆ ತನ್ನ ಮನಸ್ಸು ವಿಹ್ವಲವಾದದ್ದೇ ಕಾರಣ ಎಂಬ ಸಬೂಬು ಕೊಡುವ ಜಸ್ಕಿ ಅಜ್ಜಿ, ಇಂಟರ್ನೆಟ್‌ ಡೇಟಿಂಗ್‌ ಸರ್ವಿಸಿನಲ್ಲೂ ತನ್ನ ಫೋಟೋ ಹಾಕಿಕೊಂಡು ಕಾಮ ಹಪಾಹಪಿಯನ್ನ ತೋಡಿಕೊಂಡಿದ್ದಳು. ಈಕೆಯ ಜತೆ ವಾರಾಂತ್ಯ ಕಳೆಯಲು ಮೂವತ್ತರ ಪ್ರಾಯದ ಯುವಕರಿಂದ ಎಂಬತ್ತು ಚಿಲ್ಲರೆ ವಯಸ್ಸಿನ ಇಳಿಜೀವಗಳೂ ಮುಂದಾದವು.

Jane Juska, The hottest old ladyಮೊದಲ ವೀಕೆಂಡ್‌ ಕಳೆದದ್ದು 82ರ ತಾತನೊಟ್ಟಿಗೆ. ಗೆರೆಗಳು ಮೂಡಿದ ತ್ವಚೆ, ನರೆಗೂದಲು, ಉದುರಿದ ಹಲ್ಲುಗಳ ಜಾಗಕ್ಕೆ ಕೃತಕ ಸೆಟ್ಟು, ಆಯಸ್ಸು ರಾತ್ರಿಗೆ ಹತ್ತಿರಾಯಿತೆಂಬುದನ್ನು ಸಾಬೀತು ಮಾಡುವಂಥಾ ಕಟೀಬಲ- ಇಂಥಾ ಪುರುಷನ ಜತೆ ಗಟ್ಟಿಗಿತ್ತಿ ಅಜ್ಜಿ ಕಾಲ ಕಳೆದದ್ದು ಕಡಲ ತಡಿಯಲ್ಲಿ ; ಸುಮ್ಮನೆ ಕೈ ಹಿಡಿದುಕೊಂಡು ಸೂರ್ಯನ ನೋಡುತ್ತಾ . ಆ ಅನುಭವ ತನ್ನ ಕಾಂಕ್ಷೆಯನ್ನು ಕಿಂಚಿತ್ತೂ ತಣಿಸಲಿಲ್ಲ ಅಂತ ಬರೆದಿರುವ ಈ ಅಜ್ಜಿ ಮಜಾ ಕೊಟ್ಟ ಮುದದ ಕ್ಷಣಗಳನ್ನೂ ಅಷ್ಟೇ ಸಲೀಸಾಗಿ ಹಂಚಿಕೊಂಡಿದ್ದಾಳೆ.

ಸರಿಯಾಗಿ 10 ವರ್ಷಗಳ ಮುಂಚೆ ಜಸ್ಕಿಗೆ ಪರ ಪುರುಷರೆಂದರೆ ಅಷ್ಟಕ್ಕಷ್ಟೆ. ತಾನಾಯಿತು, ಮಕ್ಕಳಿಗೆ ಪಾಠ ಹೇಳುವ ಕೆಲಸವಾಯಿತು. 1972ರಲ್ಲಿ ಗಂಡ ತೊರೆದ ನಂತರ ಆಡುತ್ತಿದ್ದ ಪುಟ್ಟ ಮಗನೇ ಸರ್ವಸ್ವವಾಗಿದ್ದ. ಹಾಗೆ ನೋಡಿದರೆ, ಆಗ ಜಸ್ಕಿಗೆ ಪ್ರಾಯ ಇತ್ತು. ರೂಪು ಇತ್ತು. ಆಸೆ ಬತ್ತದ ವಯಸ್ಸಿತ್ತು. ಮೇಲಾಗಿ ಕೈಯಲ್ಲಿ ಕೆಲಸವಿತ್ತು. ಮದುವೆಯಾಗು ಅಂತ ಅನೇಕರು ಅಲವತ್ತುಕೊಂಡಿದ್ದರು ಕೂಡ. ಆದರೆ, ಜಸ್ಕಿ ಯಾವ ಮೋಡಿಗೂ ಸುತಾರಾಂ ಬೀಳಲಿಲ್ಲ. ನಿವೃತ್ತಿಯಾದ ಎಷ್ಟೋ ವರ್ಷಗಳ ನಂತರ ಎರಿಕ್‌ ರೋಮರನ ‘ಆಟಮನ್‌ ಟೇಲ್‌’ ಎಂಬ ಸಿನಿಮಾ ನೋಡಿದಳು. ಆವತ್ತಿನಿಂದ ಈಕೆಯಲ್ಲಿ ಲೈಂಗಿಕ ಬಯಕೆ ಜಾಗೃತವಾಯಿತು. ಆ ತೃಷೆಯನ್ನು ತಣಿಸಿಕೊಳ್ಳಲು ಈಕೆ ಅನುಸರಿಸಿದ ಜಾಹೀರಾತು ತಂತ್ರ ಕೂಡ ಸಿನಿಮಾದಿಂದ ಕದ್ದದ್ದೇ ಆಗಿತ್ತು. ಸಂಜೆ ಬದುಕಿನ ಹೆಂಗಸಲ್ಲಿ ಇಂಥಾ ವಿಲಕ್ಷಣ ಕಾಮ ಕಾಂಕ್ಷೆಯನ್ನು ಹುಟ್ಟಿಸುವ ಶಕ್ತಿ ಯಃಕಶ್ಚಿತ್‌ ಒಂದು ಸಿನಿಮಾಗೆ ಇದೆ ಎಂದರೆ, ಪಾಶ್ಚಿಮಾತ್ಯ ಜಗತ್ತಿನ ಮನೋವೈಕಲ್ಯ ಎಂಥ ಮಟ್ಟದ್ದಿರಬಹುದು ಯೋಚಿಸಿ.

*

ಜಸ್ಕಿ ಅತ್ಯಾಧುನಿಕ ಜಗತ್ತಿನ ಒಂದು ದೊಡ್ಡ ಸಮೂಹದ ಪ್ರತಿನಿಧಿಯಾಗಿ ನಮಗೆ ಕಾಣುತ್ತಾಳೆ. ಈಕೆಯದ್ದೇ ಮನಸ್ಥಿತಿಯನ್ನು ಹೋಲುವಂಥಾ ಅನೇಕ ಪಾಶ್ಚಿಮಾತ್ಯ ಅಜ್ಜ- ಅಜ್ಜಿಯರು ಅಡಿಗಡಿಗೆ ಎಟುಕುತ್ತಾರೆ. ಒಂದೊಮ್ಮೆ ವಬ್‌ಸೈಟಲ್ಲಿ ಸರ್ಚಿಸಿದಾಗ ಅಕಸ್ಮಾತ್ತಾಗಿ ಸಿಕ್ಕಿದ http://www.match.com ಜಸ್ಕಿ ಮನೋ ಬಂಧುಗಳ ದೊಡ್ಡ ಪಟ್ಟಿಯನ್ನೇ ತೆರೆದಿಟ್ಟಿತು. ಜಗತ್ತಿನ ಈ ಹೆಸರಾಂತ ಡೇಟಿಂಗ್‌ ವೆಬ್‌ಸೈಟಲ್ಲಿ ಆಗ ತಾನೆ ಋತುಮತಿಯಾದ ಪೋರಿಯಿಂದ ಹಿಡಿದು ಜಸ್ಕಿಯಂತಹ ನೂರಾರು ಅಜ್ಜ- ಅಜ್ಜಿಯರು ಸಂಚಲನೆ ಹುಟ್ಟಿಸಿದ್ದಾರೆ, ಹುಟ್ಟಿಸುತ್ತಿದ್ದಾರೆ. ಮೊಗದ ಮೇಲೆ ಮೂಡಿದ ನೆರಿಗೆಗಳಿಗೆ 73ರ ಹರೆಯದ ಅಜ್ಜಿ ಶೃಂಗಾರ ಮಾಡಿಕೊಂಡು ಚೆಂದಗೆ ನಗುತ್ತಾ ತೆಗೆಸಿಕೊಂಡ ಫೋಟೋ ಈ ವೆಬ್‌ಸೈಟಲ್ಲಿ ಸೋತ ವೃದ್ಧರನ್ನೂ ಬೆಚ್ಚಿ ಬೀಳಿಸುತ್ತದೆ. 84ರ ಟ್ಯೂಡಿರುತ್‌ ಹಾರೋಣ ಬಾ ಅಂತ ಕರೆಯುತ್ತಾಳೆ. ರೊಮಾರ್ಗ್‌ ಎಂಬ 82ರ ಅಜ್ಜಿ I am Young at heart, looking for lion heart ಎಂಬ ಷರಾ ಬರೆದು, 40 ಚಿಲ್ಲರೆ ವಯಸ್ಸಿನ ಪುರುಷ ಸಿಂಹಗಳಿಗೆ ಮಾತ್ರ ಅವಕಾಶ ಎಂದು ಕೆನೆಯುತ್ತಾಳೆ ! ಈ ವೆಬ್‌ಸೈಟಲ್ಲಿ ಅರುವತ್ತರಿಂದ ಎಂಬತ್ತು ಚಿಲ್ಲರೆ ವಯಸ್ಸಿನ ಇಂಥಾ ನೂರಾರು ಅಜ್ಜಿಯರು ಸಿಗುತ್ತಾರೆ.ಮ್ಯಾಚ್‌ ಡಾಟ್‌ ಕಾಂ ಒಂದು ಸಮೀಕ್ಷೆ ಕೂಡ ಮಾಡಿದೆ. ಆ ಪ್ರಕಾರವಾಗಿ, ಅರುವತ್ತು ದಾಟಿದ ಪುರುಷರು ಹಾಗೂ ಹೆಂಗಸರ ಪೈಕಿ 62 ಪ್ರತಿಶತ ಕಾಮಕಾಂಕ್ಷಿಗಳಿಗೆ ತಮ್ಮ ಮಧ್ಯಮ ವಯಸ್ಸಿಗಿಂತ ಈಗ ಸುಖ ಗಿಟ್ಟುತ್ತಿದೆ. ಒಂಟಿತನದ ಬರಡು ಜೀವನದಲ್ಲಿ ಹೀಗೆ ಸಂಗಾತ ಸಿಕ್ಕುತ್ತಿರುವುದನ್ನು ಅನೇಕರು ಚಿಗುರಿದ ಕನಸು ಅಂತ ಬಣ್ಣಿಸುತ್ತಿದ್ದಾರೆ.

‘ಮುಟ್ಟು ನಿಂತ ಮೇಲೆ ಇನ್ನೆಂಥಾ ಗುಟ್ಟು. ನನ್ನ ಜತೆ ಮಲಗುವ ಯಾವ ಗಂಡಸೂ ಕಿಂಚಿತ್ತೂ ನಾಚಿಕೊಳ್ಳಲಿಲ್ಲ. ಯಾವೊಬ್ಬನಿಗೂ ಅಳುಕಿರಲಿಲ್ಲ. ಯಾಕೆಂದರೆ, ನಾನಿನ್ನು ಅಮ್ಮ ಆಗೋದು ಸಾಧ್ಯವಿಲ್ಲ. ನನ್ನ ಹೊಟ್ಟೆಯಲ್ಲಿ ಮಗು ಬೆಳೆದು, ಅದನ್ನೇ ಪಟ್ಟು ಹಿಡಿದುಕೊಂಡು ನಾನು ಕೋರ್ಟಿಗೆಳೆಯುವೆ ಎಂಬ ಆತಂಕ ಯಾವ ಗಂಡಿಗೂ ಇರಲಿಲ್ಲ. ಹೀಗಾಗಿ ಈ ವಯಸ್ಸಲ್ಲಿ ನಾನು ಪಡೆದ ಸೆಕ್ಸಾನುಭವ ಮೋಕ್ಷಕ್ಕೆ ತೀರಾ ಹತ್ತಿರವಾದದ್ದು. ನಾನೀಗ ಪರಮ ಸುಖಿ’ ಅಂತ ಜಸ್ಕಿ ಅಜ್ಜಿ ತುಂಟ ನಗೆ ನಗುವುದ ಕಂಡರೆ, ವೃದ್ಧಾಪ್ಯದಲ್ಲಿ ಮಕ್ಕಳು ಮೊಮ್ಮಕ್ಕಳ ಒಡನಾಟವಿಲ್ಲದೆ ಆಶ್ರಮಗಳ ಸೇರಿ ಕಣ್ಣೀರಿಡುವ ಭಾರತದ ಇಳಿ ಜೀವಗಳು ಬೆಚ್ಚಿ ಬೀಳಬಹುದು !

ಇಂಥಾ ಅಪರೂಪ ಹಾಗೂ ವಿಲಕ್ಷಣ ಅಜ್ಜಿಯದ್ದು ಮನೋವೈಕಲ್ಯವೇ ?

ನಿಮಗೇನನ್ನಿಸುತ್ತೆ , ಬರೆಯಿರಿ.

ಮುಖಪುಟ / ಸಾಹಿತ್ಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more