‘ಗೊರೂರು ಪ್ರಶಸ್ತಿ’ : ಏ.13 ರಂದು ಸಾಧಕರ ಸಮ್ಮಿಲನ !

M. S. Natarajಎನ್‌ಆರ್‌ಐ ಕನ್ನಡಿಗ ಮೈ. ಶ್ರೀ ನಟರಾಜ್‌ ಸೇರಿದಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಕಲರವ ಮೂಡಿಸಿದ ಹಲವು ಗಣ್ಯರನ್ನು ಬೆಂಗಳೂರಿನ ಗೊರೂರು ಪ್ರತಿಷ್ಠಾನ 2002ನೇ ಸಾಲಿನ ‘ಗೊರೂರು ಪ್ರಶಸ್ತಿ’ಗೆ ಆಯ್ಕೆ ಮಾಡಿದ್ದು, ಏ.13 ರಂದು ನಡೆಯುವ ಸಮಾರಂಭದಲ್ಲಿ ಜವಳಿ ಖಾತೆ ಸಚಿವ ಎಚ್‌.ರೇವಣ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಏಪ್ರಿಲ್‌ 13ರ ಬೆಳಗ್ಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಖ್ಯಾತ ಚಲನ ಚಿತ್ರ ನಿರ್ದೇಶಕ ಜಿ. ವಿ. ಅಯ್ಯರ್‌ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ. ನಾರಾಯಣ ಹಾಗೂ ಎಸ್‌ಜೆಆರ್‌ಸಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಪಿ. ಸದಾಶಿವ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳು. ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ರಾವ್‌ ಸಮಾರಂಭದ ಅಧ್ಯಕ್ಷತೆ ವಹಿಸುವರು.

Dr. Chandra Shekhar Kambaraಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರು ಗೊರೂರು ಪ್ರತಿಷ್ಠಾನದ ವರ್ಷದ ಲೇಖಕ ಪ್ರಶಸ್ತಿ ಹಾಗೂ ಮಾನವತಾವಾದಿ ಸಾರಾ ಅಬೂಬಕರ್‌ ಅವರು ಅಂಬೇಡ್ಕರ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗೊರೂರು ಪುಸ್ತಕ ಪ್ರಶಸ್ತಿ ವಿಜೇತರ ಪಟ್ಟಿ :
ಕೀರ್ತಿನಾಥ ಕುರ್ತಕೋಟಿ (ಆಧುನಿಕ ಜಗತ್ತಿನ ಒಂದು ಹಳೆಯ ಕಥೆ)
ಹೊರನಾಡ ಕನ್ನಡಿಗ : ಮೈ. ಶ್ರೀ. ನಟರಾಜ, ಅಮೆರಿಕಾ ( ಮಧು ಚಂದ್ರ ಸಿರಿಕೇಂದ್ರ),
ಲೀಲಾ ದೇವಿ ಆರ್‌. ಪ್ರಸಾದ್‌ (ಸಿಡಿದೆದ್ದ ಸ್ತ್ರೀ)
ಆರ್‌. ಮಾನಸ ( ಮನದ ಮಾತುಗಳು)
ಡಾ. ಶಿವರಾಮ ಕಾರಂತರ ಪಕ್ಷಿಗಳ ಲೋಕ ಕೃತಿಗೆ ಮರಣೋತ್ತರ ಪ್ರಶಸ್ತಿ
ಅನುವಾದ : ಎಚ್‌. ಆರ್‌. ಚಂದ್ರವದನ ರಾವ್‌ (ನಡು ರಾತ್ರಿಯಲ್ಲಿ ಸ್ವಾತಂತ್ರ್ಯ)
ಆಧ್ಯಾತ್ಮ : ಸ್ವಾಮಿ ನಿತ್ಯಾನಂದ ಸರಸ್ವತಿ (ಮಾಂಡುಕೋಪನಿಷತ್‌ ಪ್ರವಚನ),
ಕಾವ್ಯ: ಡಾ. ಪಂಚಾಕ್ಷರಿ ಹಿರೇಮಠ (ಆರಂಭವ ಮಾಡುವೆ)
ಶಿಶು ಸಾಹಿತ್ಯ : ಬ್ಯಾಡನೂರು ಶಾಂತವೀರಪ್ಪ(ಹಸಿರಿನ ಅಳಲು),
ಲಲಿತ ಪ್ರಬಂಧ : ಕೆ. ಎನ್‌. ಭಗವಾನ್‌ (ಕಾರ್ಖಾನೆ ಚಿತ್ರಗಳು),
ದಾಸ ಸಾಹಿತ್ಯ : ಕೂ. ಗಿ. ಗಿರಿಯಪ್ಪ (ಕರ್ನಾಟಕದಲ್ಲಿ ದಾಸ ಸಾಹಿತ್ಯ),
ಕಲೆ : ಕೆ. ಎಸ್‌. ಶ್ರೀನಿವಾಸಲು(ವ್ಯಂಗ್ಯ ಚಿತ್ರ ದರ್ಶನ),
ಕವನ ಸಂಕಲನ: ಡಿ. ಎಲ್‌. ವಿಜಯಕುಮಾರಿ (ಆಯ್ದ ಕವನಗಳು),
ಕಾದಂಬರಿ : ವಿಜಯ ಚಂದ್ರಮೌಳೇಶ್ವರ (ಪ್ರೇಮಗಂಗೆ),
ವೈಚಾರಿಕ : ಕೆ. ಚಂದ್ರಮೌಳಿ (ಬೆಂಗಳೂರಿನ ನೋಟಗಳು),
ವೈದ್ಯಕೀಯ : ಡಾ. ಸುನಂದಾ ಕುಲಕರ್ಣಿ ( ಮಧ್ಯವಯಸ್ಸಿನ ಮಹಿಳೆಯರ ಕಾಯಿಲೆಗಳು),
ಡಾ. ಕೆ. ಆರ್‌. ಶ್ರೀಧರ್‌ ( ಮಕ್ಕಳ ಮನೋಲೋಕ),
ಹಾಸ್ಯ : ಎಚ್‌. ವಿ. ವೆಂಕಟಸುಬ್ಬಯ್ಯ ( ವಂಡೇ ಮಾತರಂ),
ಸಂಶೋಧನೆ : ಪ್ರೊ. ಎನ್‌. ಚಂದ್ರಪ್ಪ ( ಮುಂಡ ಸಂಸ್ಕೃತಿ),
ಡಾ. ವಿ. ಜಿ. ಪೂಜಾರ (ಸಾಹಿತ್ಯಾನ್ವೇಷಣೆ),
ಸಂಪಾದಿತ : ಎಚ್‌. ಜಿ. ಸೋಮಶೇಖರ ರಾವ್‌ ( ಸೂರ್ಯಸ್ಮರಣೆ),
ಉದಯೋನ್ಮುಖ ಲೇಖಕರಿಗೆ : ಜಿ. ವಿ. ನರಸಿಂಹ ಮೂರ್ತಿ ( ಕರುನಾಡು ಕಸ್ತೂರಿ),

ಹರೀಶ್‌ ಕಟ್ಟೆ ಬೆಳಗುಲಿ ( ಹಗಲು ತರದ ಬೆಳಗು),
ಹುಲಿಲಾನ ನರಸಿಂಹ ಸ್ವಾಮಿ ( ಹೊಂಗಿರಣ),
ಹಲ್ಲೇಗೆರೆ ಶಂಕರ್‌ (ಚೆಲುವಿನ ಬಾಲೆ ),
ಅಂಕಣ ಬರಹ : ಸಿ. ಎನ್‌. ಕೃಷ್ಣಮಾಚಾರ್‌ (ಅಂಕುಡೊಂಕು),
ಕೃಷಿ : ಡಾ. ಬಿ. ಮಹಾಂತೇಶ್‌( ಲಾಭದಾಯಕ ತೆಂಗಿನ ಬೇಸಾಯ),
ಸಾಹಿತ್ಯ ಸಂಘಟನೆ : ರಮೇಶ್‌ ಸುರ್ವೆ,
ಅನುವಾದ : ರ. ವಿ. ಜಹಗೀರದಾರ ( ನೆಮ್ಮದಿಯ ಬಾಳು ನಿಮ್ಮದಾಗಿಸಿಕೊಳ್ಳಿ).

(ಇನ್ಫೋ ವಾರ್ತೆ)

ನಟರಾಜರ ಇತ್ತೀಚೆಗೆ ಪ್ರಕಟವಾದ ಕವನ
ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+